ನವದೆಹಲಿ: 17ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು ಮೊದಲ ಕಲಾಪದಲ್ಲಿ ನಮ್ಮ ರಾಜ್ಯದ ಯುವ ಸಂಸದರು ಮೈಸೂರಿನ ಶಲ್ಯ-ಪಂಚೆ, ಕೊಡಗಿನ ಸಾಂಸ್ಕೃತಿಕ ಉಡುಗೆ ಧರಿಸಿ ಸಂಸತ್ತಿನಲ್ಲಿ ಮಿಂಚಿದರು.
ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಯುವ ಸಂಸದ ತೇಜಸ್ವಿ ಸೂರ್ಯ ಮೈಸೂರಿನ ಶಲ್ಯ-ಪಂಚೆ ಧರಿಸಿ ಮೈಸೂರಿನ ಗತ ವೈಭವ ಮೆರೆದರು.
ಇದೇ ವೇಳೆ ಎರಡನೇ ಬಾರಿಗೆ ಆಯ್ಕೆಯಾಗಿ ಮತ್ತೆ ಸಂಸತ್ ಪ್ರವೇಶಿಸುತ್ತಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೊಡವರ ಸಾಂಪ್ರದಾಯಕ ಉಡುಗೆ ತೊಟ್ಟು ಮಿಂಚಿದರು.
First day in parliament! pic.twitter.com/d4lx4yYMUB
— Pratap Simha (@mepratap) June 17, 2019
ಸಂಸತ್ ಭವನದೊಳಗೆ ಪ್ರವೇಶಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿಸೂರ್ಯ, ಇದು ದೇಶದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸಿದ ಅತ್ಯುತ್ತಮ ಸಂಸ್ಥೆ. ನನ್ನನ್ನು ಆಯ್ಕೆ ಮಾಡಿದ ಜನರಿಗೆ ನಾನು ತುಂಬಾ ಕೃತಜ್ಞತೆ ಅರ್ಪಿಸುತ್ತಾ, ಸಂಸತ್ ಪ್ರವೇಶಿಸುತ್ತಿದ್ದೇನೆ ಎಂದರು.
Tejasvi Surya,BJP MP at Parliament: It's a great institution which has shaped country's past, present & future. I'm entering it with lot of gratitude for people who've elected me&also with sense of idealism to ensure Bharat Mata reaches pinnacle of glory which it's destined to do pic.twitter.com/0pWIa7AaPx
— ANI (@ANI) June 17, 2019