ಚಾಮರಾಜನಗರ: ಹಲ್ಲು ನೋವಿಗೆ ಚಿಕಿತ್ಸೆ ಪಡೆದುಕೊಂಡ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ಪ್ರಕರಣದಲ್ಲಿ ವೈದ್ಯನಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ 9.2 ಲಕ್ಷ ದಂಡ ವಿಧಿಸಿದೆ.
ಚಾಮರಾಜನಗರದ ನಿವಾಸಿ ಸುಕನ್ಯಾ ಎಂಬವರು ಚಿಕಿತ್ಸೆ ಬಳಿಕ ಅಂಗವೈಕಲ್ಯಕ್ಕೆ ಒಳಗಾದ ಮಹಿಳೆಯಾಗಿದ್ದು ಜಿಲ್ಲಾ ಗ್ರಾಹಕರ ನ್ಯಾಯಲಯವು ಚಾಮರಾಜನಗರದ ಗಿರಿಜಾ ಡೆಂಟಲ್ ಕೇರ್ ನ ದಂತ ವೈದ್ಯ ಮಂಜುನಾಥ್ ಗೆ 9,24,605 ರೂ.ಗಳನ್ನು ದಂಡದ ರೂಪದಲ್ಲಿ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವಾಬ್ದಾರಿ ತೋರಿರುವುದು ವಿಚಾರಣೆ ಹಾಗೂ ವೈದ್ಯಕೀಯ ದಾಖಲೆಯಲ್ಲಿ ದೃಢಪಟ್ಟ ಹಿನ್ನೆಲೆ ಅಲ್ಲದೇ ರೋಗಿಗೆ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ನೇರವಾಗಿ ಇಂಜೆಕ್ಷನ್ ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಚಾಮರಾಜನಗರ ಗ್ರಾಹಕರ ನ್ಯಾಯಾಲಯದ ನ್ಯಾ. ಎಂ.ವಿ. ಭಾರತಿ ಹಾಗೂ ಸದಸ್ಯರಾದ ಕೆ.ಎಸ್. ರಾಜು ಅವರಿದ್ದ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ- ರೈತರ ಹಿತ ಕಾಯುವಂತೆ ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮನವಿ
ಸುಕನ್ಯಾ ಅವರಿಗೆ ವೈದ್ಯಕೀಯ ವೆಚ್ಚ 6,14,605 ರೂ. ಹಾಗೂ 3 ಲಕ್ಷ ರೂ. ಪರಿಹಾರ ಮತ್ತು 10 ಸಾವಿರ ದಂಡ ಸೇರಿ 9,24,605 ರೂ.ಗಳನ್ನು 30 ದಿನಗಳಲ್ಲಿ ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಚಾಮರಾಜನಗರದ ರಥದ ಬೀದಿಯಲ್ಲಿರುವ ಲೇಟ್ ಕೆ.ಬಿ. ಸುಂದರ್ ಅವರ ಪತ್ನಿ ಸುಕನ್ಯಾ ಅವರು 2021ರ ಫೆಬ್ರವರಿ 3 ರಂದು ನಗರದ ಆಗ್ರಹಾರ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್ ನ ವೈದ್ಯ ಡಾ. ಮಂಜುನಾಥ್ ಅವರಿಗೆ ಹಲ್ಲುನೋವಿನ ಚಿಕಿತ್ಸೆ ಪಡೆಯಲು ಹೋಗಿದ್ದರು. ಆದರೆ, ಡಾ. ಮಂಜುನಾಥ್ ಮುನ್ನಚ್ಚರಿಕೆ ಕ್ರಮ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ಏಕಾಏಕಿ ದವಡೆಗೆ ಅನಸ್ಥೇಷಿಯಾ ನೀಡಿದ ಪರಿಣಾಮ ತೀವ್ರ ನಿತ್ರಾಣಗೊಂಡು ಕುಸಿದು ಬಿದ್ದಿದ್ದಾರೆ. ವೈದ್ಯ ಮಂಜುನಾಥ್ ಹತ್ತಿರದಲ್ಲಿಯೇ ಇದ್ದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯದೇ ದೂರದ ಮರಿಯಾಲದ ಬಳಿ ಇದ್ದ ಬಸವರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿನ ವೈದ್ಯರ ಸೂಚನೆಯಂತೆ ಮೈಸೂರಿನ ನಾರಾಯಣ ಅಸ್ಪತ್ರೆಗೆ ಸೇರ್ಪಡೆ ಮಾಡಿದ್ದಾರೆ. ಒಂದು ವಾರಗಳ ಕಾಲ ತುರ್ತು ಚಿಕಿತ್ಸೆ ಘಟಕದಲ್ಲಿ ಚಿಕಿತ್ಸೆ ಪಡೆದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ- ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅಸಮಾಧಾನಗೊಂಡು ಕಾರ್ಯಕರ್ತ ರಾಜೀನಾಮೆ
ಆದರೆ, ವೈದ್ಯರು ತೋರಿದ ನಿರ್ಲಕ್ಷ್ಯದಿಂದಾಗಿ ಸುಕನ್ಯಾ ಅವರಿಗೆ ಈ ಗತಿಯಾಗಿದೆ ಎಂದು ಸುಕನ್ಯಾ ಅವರ ಮಗ ರವಿಕುಮಾರ್ ವೈದ್ಯಕೀಯ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದರು. ಆದಾಗ್ಯೂ, ಯಾವುದೇ ಪ್ರಯೋಜನವಾಗದ ಕಾರಣ ಒಂದು ವರ್ಷಗಳ ಕಾಲ ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.
2022ರ ಮಾರ್ಚ್25 ರಂದು ವೈದ್ಯರ ವಿರುದ್ದ ದಾವೆ ಹೂಡಿದ್ದರು. ನ್ಯಾಯಾಲಯವು ಆರೋಪಿಯಾಗಿದ್ದ ಡಾ.ಮಂಜುನಾಥ್ ಅವರಿಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಜೊತೆಗೆ ವೈದ್ಯಕೀಯ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿತ್ತು. ಒಂದು ವರ್ಷ ನಾಲ್ಕು ತಿಂಗಳು ಕಾಲ ವಿಚಾರಣೆ ಮಾಡಿ, ಅನೇಕ ತಜ್ಞ ವೈದ್ಯರು ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮವಾಗಿ ವೈದ್ಯ ಡಾ.ಮಂಜುನಾಥ್ ಸೇವಾ ನ್ಯೂನತೆ, ಬೇಜವಾಬ್ದಾರಿಯಿಂದ ಮಹಿಳೆಯು ಶಾಶ್ವತವಾಗಿ ಎಡ ಕೈ ಮತ್ತು ಎಡ ಕಾಲಿನ ಸ್ವಾಧೀನವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ವೈದ್ಯರಿಂದ 9.24 ಲಕ್ಷ ರೂ.ಗಳ ಪರಿಹಾರವನ್ನು ಕಟ್ಟಿಕೊಡುವಂತೆ ಆದೇಶ ನೀಡಿದ್ದಾರೆ.
ಇನ್ನು, ಕಳೆದ ಆ.29 ರಂದು 30 ದಿನಗಳ ಒಳಗಾಗಿ ಪರಿಹಾರ ನೀಡುವಂತೆ ಆದೇಶ ನೀಡಿದ್ದು ನಮಗಿನ್ನೂ ಪರಿಹಾರ ಸಿಕ್ಕಿಲ್ಲ ಎಂದು ಸುಕನ್ಯಾ ಅವರ ಪುತ್ರ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.