ಬಾಗಲಕೋಟೆ: ಎಲ್ಲ ಕಡೆ ಶಾಲೆಗಳಿಗೆ ಶಿಕ್ಷಕರನ್ನ ನೀಡಿ ಅನ್ನೋ ಕೂಗು ಕೇಳಿಬರುತ್ತೆ. ಆದರೆ, ಈ ಸರ್ಕಾರಿ ಶಾಲೆಗೆ ಶಿಕ್ಷಕ ಬೇಡ ಎಂದು ಶಾಲಾ ಮಕ್ಕಳ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪಾಲಕರು ಆ ಶಿಕ್ಷಕನ ಕೈಯಲ್ಲಿ ನಮ್ಮ ಮಕ್ಕಳು ಕಲಿಯೋದು ಬೇಡಾ ಅಂತಾ ಅನ್ನುತ್ತಿರೋದಾದ್ರು ಏಕೆ? ಈ ಘಟನೆಗೆ ಸಂಬಂಧಿಸಿದ ಸ್ಟೋರಿ ಇಲ್ಲಿದೆ...
ಒಂದೆಡೆ ಸರ್ಕಾರಿ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರೋ ಪಾಲಕರು. ಮತ್ತೊಂದೆಡೆ ಸರ್ಕಾರದಿಂದ ಮನರು ನಿಯೋಜನೆ ಕೈಯಲ್ಲಿ ಹಿಡಿದು ಶಾಲೆಗೆ ಹಾಜರಾದ ಶಿಕ್ಷಕ. ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯ ಬಿಟಿಡಿಎ ಆವರಣದಲ್ಲಿರೋ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ.
ಹೌದು ಕಳೆದ 6 ತಿಂಗಳ ಹಿಂದೆ ಶಿಕ್ಷಕ ಶರಣಪ್ಪ ಶಾಲೆಯಲ್ಲಿನ ಮಕ್ಕಳ ಬಿಸಿ ಊಟದ ದಾನ್ಯ ಕದ್ದು ಮಾರಾಟ ಮಾಡಿರುವ ಆರೋಪದಡಿ ಅಮಾನತ್ತುಗೊಂಡಿದ್ದರು. ನಿನ್ನೆ (ನವೆಂಬರ್ 27, 2023) ಅದೇ ಶಿಕ್ಷಕ ಶಾಲೆಗೆ ಬಂದು ಮರು ನಿಯೋಜನೆ ಆಗಿದ್ದು ಪಾಲಕರಲ್ಲಿ ಅಸಮಧಾನ ಹೆಚ್ಚಿಸಿದೆ.
ಇದನ್ನೂ ಓದಿ- ದಪ್ಪ ಚರ್ಮದ ಸರ್ಕಾರದ ವಿರುದ್ಧ ಜನರೇ ದಂಗೆ ಹೇಳುವ ಕಾಲ ದೂರವಿಲ್ಲ: ಬಿ.ವೈ.ವಿಜಯೇಂದ್ರ
ನಮ್ಮ ಮಕ್ಕಳು ಕಳ್ಳ ಶಿಕ್ಷಕಣ ಕೈಯಲ್ಲಿ ಕಲಿಯೋದು ಬೇಡಾ. ಶಿಕ್ಷಣ ಇಲಾಖೆಯವರು ಈ ಶಿಕ್ಷಕನನ್ನು ಬೇರೆ ಶಾಲೆಗೆ ವರ್ಗಾಯಿಸಿ ಎಂದು ಶಾಲೆ ಮುಂದೆ ಜಮಾಯಿಸಿದ ಪಾಲಕರು ಪ್ರತಿಭಟನೆ ನಡೆಸಿದರು. ಇದರ ನಡುವೆ ಶಿಕ್ಷಕ ಶರಣಪ್ಪ ಬೇವೂರ ಹಿಂದಿನ ಪ್ರಕರಣದ ಬಗ್ಗೆ ಸ್ಪಷ್ಟಿಕರಣ ನೀಡಿ, ಸರ್ಕಾರ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ. ಆದೇಶದಂತೆ ನಾನು ಶಾಲೆಗೆ ಜಾಯಿನ್ ಆಗಿದ್ದೇನೆ. ನನ್ನದೇನು ತಪ್ಪಿಲ್ಲ. ಕುತಂತ್ರದಿಂದ ನನ್ನನ್ನ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದರು.
ಇನ್ನು ಶಾಲೆ ಆರಂಭಗೊಳ್ಳುತ್ತಿದ್ದಂತೆ ಶಾಲಾ ಮಕ್ಕಳ ಪಾಲಕರು ಶಾಲೆಗೆ ಆಗಮಿಸಿ ದ್ರು.ಶಿಕ್ಷಕ ಶರಣಪ್ಪ ಬೇವೂರ ಅವರನ್ನ ಬೇರೆ ಶಾಲೆಗೆ ವರ್ಗಾಯಿಸಿ. ನಮ್ಮ ಮಕ್ಕಳು ಆ ಶಿಕ್ಷಕರಿಂದ ಕಲಿಯೋದು ಬೇಡಾ. ಮಕ್ಕಳ ಭಾವನೆಗೆ ಧಕ್ಕೆ ತರುವ ಕೆಲಸ ಶಿಕ್ಷಣ ಇಲಾಖೆ ಮಾಡಬಾರದು. ಎರಡ-ಮೂರು ದಿನಗಳಲ್ಲಿ ಶಿಕ್ಷಕ ಶರಣಪ್ಪ ಅವರನ್ನ ಬೇರೆ ಶಾಲೆಗೆ ವರ್ಗಾಯಿಸಿ ಇಲ್ಲದಿದ್ರೆ ಉಘ್ರ ಹೋರಾಟ ನಡೆಸಬೇಕಾಗುತ್ತೆ ಎಂದು ಮಕ್ಕಳ ಪಾಲಕರು ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ- ಡಿಕೆಶಿ ವಿರುದ್ಧ CBI ತನಿಖೆ ವಾಪಸ್: ನಾಳೆ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ!
ಒಟ್ಟಿನಲ್ಲಿ ಪ್ರಕರಣದಿಂದ ಮುಕ್ತಿ ಪಡೆದು ಶಾಲೆಗೆ ಹಾಜರಾಗಲು ಬಂದ ಶಿಕ್ಷಕನಿಗೆ ಶಾಲೆಯಲ್ಲಿ ಈರಿಸು-ಮುರಿಸು ಉಂಟಾಗಿದ್ದು, ಮಕ್ಕಳ ಪಾಲಕರ ಅಸಮಧಾನದ ಬಿಸಿಯೂ ತಟ್ಟಿದೆ. ಶಿಕ್ಷಣ ಇಲಾಖೆ ಮುಂದೆ ಯಾವ ಕ್ರಮ ವಹಿಸುತ್ತೆ ಅಂತಾ ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.