ನನ್ನ ಹೋರಾಟಗಳ ಬಗ್ಗೆ ವಿರೋಧಿಗಳು ತಿಳಿದುಕೊಳ್ಳಲಿ: ಯಡಿಯೂರಪ್ಪ ವಿರುದ್ಧ ದೇವೇಗೌಡ ವಾಗ್ದಾಳಿ

ನಾನು ಮಾಡಿದ ಕೆಲಸವನ್ನು ಆತ್ಮಸ್ಥೈರ್ಯದಿಂದ ಹೇಳುತ್ತೇನೆ. ನನ್ನ ಕೆಲಸ, ಹೋರಾಟಗಳ ಬಗ್ಗೆ ವಿರೋಧಿಗಳು ತಿಳಿದುಕೊಳ್ಳಲಿ ಎಂದು ದೇವೇಗೌಡರು ತೀವ್ರ ವಾಗ್ದಾಳಿ ನಡೆಸಿದರು.

Last Updated : Aug 3, 2018, 02:02 PM IST
ನನ್ನ ಹೋರಾಟಗಳ ಬಗ್ಗೆ ವಿರೋಧಿಗಳು ತಿಳಿದುಕೊಳ್ಳಲಿ: ಯಡಿಯೂರಪ್ಪ ವಿರುದ್ಧ ದೇವೇಗೌಡ ವಾಗ್ದಾಳಿ title=

ನವದೆಹಲಿ: ನನ್ನ ಬಗ್ಗೆ ಮಾತನಾಡುವವರಿಗೆ ಮೊದಲು ಜವಾಬ್ದಾರಿ ಇರಬೇಕು. ನನ್ನ ಬಗ್ಗೆ ಮಾತನಾದುವ ಮೊದಲು ನನ್ನ ಕೆಲಸ, ಹೋರಾಟಗಳ ಬಗ್ಗೆ ವಿರೋಧಿಗಳು ತಿಳಿದುಕೊಳ್ಳಲಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕಿಡಿ ಕಾರಿದ್ದಾರೆ. 

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ತಾರತಮ್ಯ ನೀತಿ ಅನುಸರಿಸಲು ದೇವೇಗೌಡರು ಕುಮ್ಮಕ್ಕು ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ದೇವೇಗೌಡರು, ನನ್ನ ಬಗ್ಗೆ ಮಾತನಾಡುವವರಿಗೆ ಮೊದಲು ಜವಾಬ್ದಾರಿ ಇರಬೇಕು. ಅಂದು ರಾಜ್ಯದ ನೀರಾವರಿ ಮಂತ್ರಿಯಾಗಿ ಕೃಷ್ಣಾ ನೀರಾವರಿ ಯೋಜನೆಗೆ ಹೋರಾಟ ಮಾಡಿದ್ದೇನೆ. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕರಿಲಾಗಿದೆ. ಇವತ್ತೇನಾದರೂ ಆ ಭಾಗದ 40 ಲಕ್ಷ ಎಕರೆ ಭೂಮಿ ನೀರಾವರಿಗೆ ಸೇರಿದ್ದಾರೆ ಅದು ಅಂದು ನಾವು ಮಾಡಿದ ಹೋರಾಟದಿಂದ. ನಾನು ಮಾಡಿದ ಕೆಲಸವನ್ನು ಆತ್ಮಸ್ಥೈರ್ಯದಿಂದ ಹೇಳುತ್ತೇನೆ. ನನ್ನ ಕೆಲಸ, ಹೋರಾಟಗಳ ಬಗ್ಗೆ ವಿರೋಧಿಗಳು ತಿಳಿದುಕೊಳ್ಳಲಿ ಎಂದು ದೇವೇಗೌಡರು ತೀವ್ರ ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಎಂಬುದಿಲ್ಲ. ವಿಧಾನಸಭೆ "ಅಪ್ಪ ಮಕ್ಕಳನ್ನು ಮುಗಿಸುವುದೇ ನಮ್ಮ ಕೆಲಸ" ಎಂದು ಹೇಳುತ್ತಾರೆ. ನಮ್ಮ ಕೆಲಸ, ಹೋರಾಟಗಳನ್ನು ತಿಳಿಯದೆ ಆರೋಪ ಮಾಡುವುದೇ ಬಿಜೆಪಿ ಉದ್ದೇಶ. ಹಾಗಾಗಿ ಯಡಿಯೂರಪ್ಪ ಅವರು ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೇವೇಗೌಡರು ಟೀಕಿಸಿದರು. 

ಈ ಹಿಂದೆ ರಾಜ್ಯದಲ್ಲಿ ಜಾತಿಯ ವಿಷ ಬೀಜ ಬಿತ್ತಿ ಪ್ರತ್ಯೇಕತೆಯ ಕೂಗು ಕೇಳಿ ಬರಲು ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರೇ ಕಾರಣ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ಏಕೀಕರಣವಾದ ಮೇಲೆ ಇದುವರೆಗೂ ರಾಜ್ಯದಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬಂದಿರಲಿಲ್ಲ. ಆದರೆ, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಮೇಲೆ ಈ ಕೂಗು ಕೇಳಿ ಬರುತ್ತಿದೆ. ಕುಮಾರಸ್ವಾಮಿ ಅವರ ಸೊಕ್ಕಿನ ಮಾತು ಮತ್ತು ಸೇಡಿನ ಧಾಟಿ ಜನರನ್ನು ರೊಚ್ಚಿಗೇಳಿಸಿದೆ. ದೇವೇಗೌಡರ ಅನುಮತಿ ಇಲ್ಲದೇ ಮುಖ್ಯಮಂತ್ರಿಗಳು ಈ ರೀತಿ ಹೇಳಲು ಸಾಧ್ಯವೇ? ಈ ವಿಚಾರದಲ್ಲಿ ದೇವೇಗೌಡರೇಕೆ ಮೌನ ವಹಿಸಿದ್ದಾರೆ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದರು.

Trending News