ರಾಜ್ಯದ ಜನತೆಯನ್ನು ವಿರೋಧ ಪಕ್ಷ ದಿಕ್ಕು ತಪ್ಪಿಸುತ್ತಿದೆ: ಸಿಎಂ ಕುಮಾರಸ್ವಾಮಿ

ರಾಜ್ಯದ ಜನತೆಯನ್ನು ವಿರೋಧ ಪಕ್ಷದವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

Last Updated : Jul 9, 2018, 12:21 PM IST
ರಾಜ್ಯದ ಜನತೆಯನ್ನು ವಿರೋಧ ಪಕ್ಷ ದಿಕ್ಕು ತಪ್ಪಿಸುತ್ತಿದೆ: ಸಿಎಂ ಕುಮಾರಸ್ವಾಮಿ title=

ಬೆಂಗಳೂರು: ರಾಜ್ಯದ ಜನತೆಯನ್ನು ವಿರೋಧ ಪಕ್ಷದವರು ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಅಲ್ಪವೂ ಸೌಜನ್ಯ ಎಂಬುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಎರಡು ದಿನಗಳ ಬಿಡುವಿನ ಬಳಿಕ ಇಂದಿನಿಂದ ಮತ್ತೆ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಸಾಲ ಮನ್ನಾ ನಿರ್ಧಾರದಿಂದ ನಾನು ಯಾವತ್ತೂ ಹಿಂದೆ ಸರಿದಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ನಾನು ಯಾವತ್ತೂ ಹಾಗೆ ಹೇಳಿಲ್ಲ. ಮೊದಲ ಹಂತದಲ್ಲಿ 34 ಸಾವಿರ ಕೋಟಿ ಸಲ ಮನ್ನಾ ಮಾಡುತ್ತೇನೆ ಎಂದಿದ್ದೆ. ಅದರಂತೆ ನಡೆದುಕೊಂಡಿದ್ದೇನೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಅದು ನನಗೂ ಅನ್ವಯಿಸುತ್ತದೆ. ಒಂದೂವರೆ ತಿಂಗಳು ಪೂರೈಸದ ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಾರೆ. ಸ್ವತಂತ್ರ ಸರ್ಕಾರ ಅಧಿಕಾರ ಬಂದರೆ ರೈತರ ಪೂರ್ಣ ಸಾಲ ಮನ್ನಾ ಏನದು ಹೇಳಿದು ನಿಜ. ಆ ಮಾತಿಗೆ ನಾನು ಇನ್ನೂ ಬದ್ಧ. ಆದರೆ ಈಗ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ನನಗೆ ಇತಿ ಮಿತಿ ಇದೆ ಎಂದು ಹೇಳಿದರು.

Trending News