Neha Murder Case : ನೇಹಾ ತಂದೆಗೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ

Hubballi : ಹುಬ್ಬಳ್ಳಿಯಲ್ಲಿ ಕಳೆದ ಗುರುವಾರ ನಡೆದ ನೇಹಾ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಹಾ ತಂದೆ ಹಾಗೂ ನಗರಸಭೆ ಸದಸ್ಯ ನಿರಂಜನ ಹಿರೇಮಠ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. 

Written by - Zee Kannada News Desk | Last Updated : Apr 23, 2024, 07:08 PM IST
  • ಮುಖ್ಯಮಂತ್ರಿ ಸಿದ್ದರಾಮಯ್ಯ ನೇಹಾ ಅವರ ತಂದೆ ನಿರಂಜನ್ ಹಿರೇಮಠ್ ಅವರೊಂದಿಗೆ ಮಾತನಾಡಿದರು.
  • ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಕುಟುಂಬದ ಬೆಂಬಲಕ್ಕೆ ನಿಲ್ಲುವುದಾಗಿ ಸಿಎಂ ಭರವಸೆ ನೀಡಿದರು.
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇಹಾ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
Neha Murder Case : ನೇಹಾ ತಂದೆಗೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ  title=

CM Siddaramaiah consoled Neha's father : ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ  ನೇಹಾ ಹಿರೇಮಠ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ನೇಹಾ ಕೊಲೆಗೆ ನ್ಯಾಯ ದೊರಕಿಸಿಕೊಡುವಂತೆ ಆಕ್ರೋಶ ವ್ಯಕ್ತ ಪಡಿಸುತ್ತಿವೆ. 

ಇದನ್ನು ಓದಿ : Lokasabha Polls : ಏಪ್ರಿಲ್ 28ರಂದು ಬೆಳಗಾವಿಗೆ ನರೇಂದ್ರ ಮೋದಿ

ಇವೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಹಾ ಅವರ ತಂದೆ ನಿರಂಜನ್ ಹಿರೇಮಠ್ ಅವರೊಂದಿಗೆ ಮಾತನಾಡಿದರು. ದೂರವಾಣಿ ಕರೆಯಲ್ಲಿ ಕಾಂಗ್ರೆಸ್‌ನ ಮುನ್ಸಿಪಲ್ ಕೌನ್ಸಿಲರ್ ನೇಹಾ ಅವರ ತಂದೆಗೆ ಸಿಎಂ ಸಾಂತ್ವನ ಹೇಳಿದರು.

ಇಂದು ನೇಹಾ ಮನೆಗೆ ಎಚ್.ಕೆ.ಪಾಟೀಲ ಭೇಟಿ ನೀಡಿದ್ದು, ಇದೇ ಸಂದರ್ಭದಲ್ಲಿ ಸಿಎಂ ನೇಹಾ ತಂದೆ  ನಿರಂಜನ ಹಿರೇಮಠ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿ  ಸಾಂತ್ವನ ಹೇಳಿದ್ದಾರೆ ಮತ್ತು ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಕುಟುಂಬದ ಬೆಂಬಲಕ್ಕೆ ನಿಲ್ಲುವುದಾಗಿ ಸಿಎಂ ಭರವಸೆ ನೀಡಿದರು.

ಇದನ್ನು ಓದಿ : Lok Sabha Election 2024: ಮೊದಲ ಹಂತದ ಮತದಾನಕ್ಕೆ ಅಂತಿಮ ಸಿದ್ದತೆ

ಕುಟುಂಬಕ್ಕೆ ಅಪರಾಧಕ್ಕೆ ಸಂಬಂಧಿಸಿದಂತೆ ಸರ್ಕಾರ ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಎಚ್.ಕೆ.ಪಾಟೀಲ  ವಿವರಿಸಿ, ಶೀಘ್ರವೇ ನ್ಯಾಯ ದೊರಕಿಸಿಕೊಡುವುದಾಗಿ ಧೈರ್ಯ ತುಂಬಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯಾಹ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇಹಾ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಕುಟುಂಬವನ್ನು ಭೇಟಿ ಮಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News