ಕರ್ನಾಟಕ ರಾಜ್ಯ ಈಗ ಜಿಡಿಪಿ ಪ್ರಗತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ: ಸಚಿವ ಸಂತೋಷ್ ಲಾಡ್

 2013-18 ರ ಅವಧಿಯಲ್ಲಿ ತೆರಿಗೆ ಸಂಗ್ರಹದಲ್ಲಿ ನಾವು ಮುಂಚೂಣಿಯಲ್ಲಿದ್ದೆವು  ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚವೂ ರಾಜ್ಯದಲ್ಲಿ ಹೆಚ್ಚು ಎಂದರು.

Written by - Prashobh Devanahalli | Last Updated : Dec 8, 2024, 05:38 PM IST
    • ಸಂಡೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶ
    • ಈ ಬೆಳವಣಿಗೆಗೆ ನಮ್ಮ ಕಾರ್ಯಕ್ರಮಗಳು ಕಾರಣ
    • ಕರ್ನಾಟಕದಲ್ಲಿ ಶೇ.10% ಬೆಳವಣಿಗೆಯಿದೆ ಎಂದ ಕಾರ್ಮಿಕ ಸಚಿವ ಸಂತೋಷ್ ಲಾಡ್
ಕರ್ನಾಟಕ ರಾಜ್ಯ ಈಗ  ಜಿಡಿಪಿ ಪ್ರಗತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ: ಸಚಿವ ಸಂತೋಷ್ ಲಾಡ್ title=
Minister Santosh Lad

ಬಳ್ಳಾರಿ: 2013-18 ರ ಅವಧಿಯಲ್ಲಿ ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ರಾಜ್ಯ ಈಗ  ಜಿಡಿಪಿ ಪ್ರಗತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.   ಕೇಂದ್ರ ಸರಕಾರದ ಆಯವ್ಯಯದ ವರದಿಯಲ್ಲಿ  ದೇಶದಲ್ಲಿ ಜಿಡಿಪಿ ಬೆಳವಣಿಗೆ ಸುಮಾರು 8.2%ಇದ್ದರೆ ಕರ್ನಾಟಕದಲ್ಲಿ ಶೇ.10% ಬೆಳವಣಿಗೆಯಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವರಿಸಿದರು.

ಅವರು ಇಂದು ಸಂಡೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಬೆಳವಣಿಗೆಗೆ ನಮ್ಮ  ಕಾರ್ಯಕ್ರಮಗಳು ಕಾರಣ. ಜಿಡಿಪಿ ಬೆಳವಣಿಗೆ ಸುಮಾರು 51% ಇದೆ. ಇದನ್ನು ಸಾಧಿಸಲು ನಮ್ಮ ಸರ್ಕಾರದ ಕಾರ್ಯಕ್ರಮಗಳು ಕಾರಣ ಎಂದರು.

ಇದನ್ನೂ ಓದಿ: ಈ ರಾಶಿಯವರಿಗೆ 19 ವರ್ಷಗಳ ಶನಿ ಮಹಾದಶ.. ನಿರಂತರ ಹಣದ ಮಳೆ, ಮಣ್ಣೂ ಸಹ ಹೊನ್ನಾಗುವ ಕಾಲ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್.. ಜೀವನದ ಸರ್ವ ಸುಖವೂ ಪ್ರಾಪ್ತಿ!

 2013-18 ರ ಅವಧಿಯಲ್ಲಿ ತೆರಿಗೆ ಸಂಗ್ರಹದಲ್ಲಿ ನಾವು ಮುಂಚೂಣಿಯಲ್ಲಿದ್ದೆವು  ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚವೂ ರಾಜ್ಯದಲ್ಲಿ ಹೆಚ್ಚು ಎಂದರು.

ಪಂಚ ಗ್ಯಾರಂಟಿ ಕಾರ್ಯಕ್ರಮ ಗಳಿಗಾಗಿ  60 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ದೇಶದ ಬುನಾದಿಯನ್ನು ಹಾಕುವಲ್ಲಿ ಕರ್ನಾಟಕದಲ್ಲಿ ವಿಶೇಷವಾಗಿ ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಮ್ಮ  ಸರ್ಕಾರ ಹಮ್ಮಿಕೊಂಡಿದೆ. ಬಿಸಿಯೂಟ, ಅಂಗನವಾಡಿಗಳು,  ವಿಧಾವ ವೇತನ, ವೃದ್ಧಾಪ್ಯ ವೇತನ ಮುಂತಾದ ಬಡವರ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಚಿವರು ಹೇಳಿದರು.

ಬಡವರಿಗಾಗಿ ಹೆಚ್ಚು ಅನುದಾನ
ರೈತರಿಗೆ ಮೂರು ಲಕ್ಷದವರೆಗೆ ಬಡ್ಡಿ ರಹಿತ ಸಾಲಕ್ಕಾಗಿ ಸುಮಾರು 9.50 ಕೋಟಿ ರೂಪಾಯಿಗಳನ್ನು ಒದಗಿಸಿದೆ.8165 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲಾಗಿದೆ. ಎಸ್.ಸಿ.ಎಸ್. ಟಿ ಸಾಲ ಮನ್ನಾ,  ಗ್ರಾಮ ಪಂಚಾಯತಿಗಳಿಗೆ 3700 ಕೋಟಿ  ಅನುದಾನವನ್ನು ನೀಡಲಾಗಿದೆ. ಆಶ್ರಯ ಯೋಜನೆಯಡಿ  2633 ಕೋಟಿ ರೂಪಾಯಿ , 2013-18 ರ ಅವಧಿಯಲ್ಲಿ 18 ಸಾವಿರ ಕೋಟಿ ಗಳಿಗೂ ಹೆಚ್ಚು ಅನುದಾನ ನೀಡಿ ಬಡವರಿಗೆ ಅನುಕೂಲ ಮಾಡಿರುವುದಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 80 ಸಾವಿರ ಕೋಟಿಗಳನ್ನು ವೆಚ್ಚ ಮಾಡಿದೆ ಎಂದರು.

ಇದನ್ನೂ ಓದಿ: ತೆಂಗಿನ ಎಣ್ಣೆಗೆ ʼಈʼ ಪುಡಿ ಬೆರೆಸಿ ಹಚ್ಚಿದ್ರೆ ಒಂದೇ ವಾರದಲ್ಲಿ ಗಾಢಕಪ್ಪು ಕೂದಲು ನಿಮ್ಮದಾಗುತ್ತೆ! ಇಂದೇ ಟ್ರೈ ಮಾಡಿ..

ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ.ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇಶದಲ್ಲಿ 26 ಸಾವಿರ ಕೋಟಿ ಕೈಗಳಿಗೆ ಕೆಲಸವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News