ಕಾರ್ಪೋರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಿಎಸ್‌ಆರ್ ಹಣ ವಿನಿಯೋಗಿಸಲಿ : ಸಚಿವ ದಿನೇಶ್ ಗುಂಡೂರಾವ್

ಕರ್ನಾಟಕದಲ್ಲಿ ಮಂಗನ ಕಾಯಿಲೆ ಹಾವಳಿ ಮೂರು ನಾಲ್ಕು ಜಿಲ್ಲೆಗಳಲ್ಲಿದೆ. ಕಾಯಿಲೆಗೆ ವ್ಯಾಕ್ಸಿನ್ ತಯಾರಿಸಬಹುದಾಗಿದ್ದು, ರಿಸರ್ಚ್ ವರ್ಕ್ ಗಳಿಗೆ ಸಿ.ಎಸ್ ಆರ್ ವಿನಿಯೋಗವಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. 

Written by - Manjunath Hosahalli | Edited by - Krishna N K | Last Updated : Aug 9, 2024, 06:15 PM IST
    • ಕಾರ್ಪೋರೇಟ್ ಕಂಪನಿಗಳು ಸಿಎಸ್ ಆರ್ ಹಣ ಬಳಕೆಗೆ ಹೆಚ್ವಿನ ಆದ್ಯತೆ ನೀಡಬೇಕು
    • ಕಾರ್ಪೋರೇಟ್ ಕಂಪನಿಗಳ ಫೌಂಡೆಶನ್ಸ್ ರೌಂಡಟೇಬಲ್ ಸಭೆ ಆರೋಗ್ಯ ಸಚಿವರ ಹೇಳಿಕೆ
    • ಬೆಂಗಳೂರಿನಲ್ಲಿ ಇಂದು ಸಿ-ಕ್ಯಾಂಪ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಭೆ
ಕಾರ್ಪೋರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಿಎಸ್‌ಆರ್ ಹಣ ವಿನಿಯೋಗಿಸಲಿ : ಸಚಿವ ದಿನೇಶ್ ಗುಂಡೂರಾವ್ title=

ಬೆಂಗಳೂರು : ಆರೋಗ್ಯ ಕ್ಷೇತ್ರಕ್ಕೆ ಕಾರ್ಪೋರೇಟ್ ಕಂಪನಿಗಳು ಸಿಎಸ್ ಆರ್ ಹಣ ಬಳಕೆಗೆ ಹೆಚ್ವಿನ ಆದ್ಯತೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು. ಬೆಂಗಳೂರಿನಲ್ಲಿ ಇಂದು ಸಿ-ಕ್ಯಾಂಪ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಪೋರೇಟ್ ಕಂಪನಿಗಳ ಫೌಂಡೆಶನ್ಸ್ ರೌಂಡಟೇಬಲ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.‌

ಸಿ.ಎಸ್ ಆರ್ ಯೋಜನೆಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆ ತರಬಹುದು.‌ ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದರು. ಜನಸಾಮಾನ್ಯರ ಆರೋಗ್ಯ ಕಾಪಾಡುವತ್ತ ಹಲವು ಕಾರ್ಯಕ್ರಮಗಳನ್ನ ಇಲಾಖೆ ಹಮ್ಮಿಕೊಳ್ಳುತ್ತಿರುತ್ತದೆ. ವಿಶೇಷವಾಗಿ ರೋಗಗಳನ್ನ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಜನರ ಆರೋಗ್ಯ ರಕ್ಷಣೆಯತ್ತ ಹೆಚ್ವಿನ ಗಮನ ಹರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಗೃಹ ಆರೋಗ್ಯ ಯೋಜನೆಯನ್ನ ಜಾರಿಗೊಳಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಜನರ ತಪಾಸಣೆ ನಡೆಯಲಿದೆ. ಔಷಧಿಗಳು ಮನೆಬಾಗಿಲಿಗೆ ತಲುಪಲಿವೆ. ಈ ಯೋಜನೆಯಿಂದ ಸಾಕಷ್ಟು ಬದಲಾವಣೆಯನ್ನ ನಾವು ನಿರೀಕ್ಷಿಸುತ್ತಿದ್ದು, ಇಂಥಹ ದೊಡ್ಡ ಯೋಜನೆಯಲ್ಲಿ ಕಾರ್ಪಫರೇಟ್ ಕಂಪನಿಗಳು ಸಹ ಸಿಎಸ್ ಆರ್ ಮೂಲಕ ತಮ್ಮ ಸೇವೆ ಸಲ್ಲಿಸಬಹುದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ಇದನ್ನೂ ಓದಿ: ಮಹಿಳೆಯನ್ನು ಎಳೆದಾಡಿ ಕಿಸ್ ಮಾಡಿ ಪರಾರಿಯಾಗಿದ್ದ ಕಾಮುಕ ಕ್ಯಾಬ್ ಚಾಲಕನ ಬಂಧನ..!

ಗೃಹ ಆರೋಗ್ಯ ಕಾರ್ಯಕ್ರಮದಲ್ಲಿ ಅಗತ್ಯ ತಂತ್ರಜ್ಞಾನ ಒದಗಿಸುವತ್ತು ಕಂಪನಿಗಳು ತಮ್ಮ ಸಿಎಸ್ ಆರ್ ಫಂಡ್ ವಿನಿಯೋಗಿಸಬಹುದು.‌ ಅಲ್ಲದೇ ಕೆಎಫ್.ಡಿ ಯಂಥಹ ರೋಗಗಳಿಗೆ ಇಂದು ವ್ಯಾಕ್ಸಿನ್ ತಯಾರಿಸುವ ಅಗತ್ಯತೆ ಇದೆ. ಕರ್ನಾಟಕದಲ್ಲಿ ಮಂಗನ ಕಾಯಿಲೆ ಹಾವಳಿ ಮೂರು ನಾಲ್ಕು ಜಿಲ್ಲೆಗಳಲ್ಲಿದೆ. ಕಾಯಿಲೆಗೆ ವ್ಯಾಕ್ಸಿನ್ ತಯಾರಿಸಬಹುದಾಗಿದ್ದು, ರಿಸರ್ಚ್ ವರ್ಕ್ ಗಳಿಗೆ ಸಿ.ಎಸ್ ಆರ್ ವಿನಿಯೋಗವಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. 

ಸಭೆಯಲ್ಲಿ ಇನ್ಫೋಸಿಸ್ ಫೌಂಡೇಶನ್, ಯುಸೈಡ್, ಜಿ. ಇ. ಹೆಲ್ತ್ ಕೇರ್, ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್, ಅಸ್ಟ್ರಜೆನಕಾ, ಬಯೋಕಾನ್ ಫೌಂಡೇಶನ್, ಎಚ್ ಸಿ ಎಲ್ ಫೌಂಡೇಶನ್, ಇಂಟೆಲ್ ಕಾರ್ಪೊರೇಶನ್, ಯುನಿಸೆಫ್, ಮೈಕ್ರೋ ಲ್ಯಾಬ್, , ಅಂಥೆಮ್ ಬಯೋಸೈನ್ಸ್, ಸತ್ವ ಕನ್ಸಲಿಂಗ್, ವೋಲ್ಲೋ ಗ್ರೂಪ್ ಇಂಡಿಯಾ, ಆಶ್ರಯ ಹಸ್ತ ಟ್ರಸ್ಟ್, ಜೆ ಎಸ್ ಡಬ್ಲ್ಯೂ ಫೌಂಡೇಶನ್, ಲಿವ್ ಲವ್ ಲಾಫ್ ಫೌಂಡೇಶನ್, ಸ್ವಾಸ್ತ್ ಅಲೈಯನ್ಸ್ - ಆಕ್ಸ್ ಫಾರ್ ಹೆಲ್ತ್, ಕೋಲ್ಲೇಟ್ ಪಾಮೋಲಿವ್, ಸೀಮೆನ್ಸ್ ಹೆಲ್ತಿನಿಯರ್ಸ್ ಮುಂತಾದ ಸಂಸ್ಥೆಗಳ ಪ್ರಮುಖರು  ಪಾಲ್ಗೊಂಡರು..

ಇದನ್ನೂ ಓದಿ: ಬ್ರಿಟಿಷರಿಂದಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ : ಬಿಜೆಪಿ - ಜಿಡಿಎಸ್‌ ವಿರುದ್ದ ಗುಡುಗಿ ಡಿಸಿಎಂ ಡಿಕೆಶಿ

ಕಳೆದ ವರ್ಷ ನಡೆದ ಮೊದಲ ರೌಂಡಟೇಬಲ್ ಸಭೆಯಲ್ಲಿ ಸುಮಾರು 21 ಕೋಟಿಯಷ್ಟು ಸಿಎಸ್ ಆರ್ ಫಂಡ್ ವಿಭಿನ್ನ ಆರೋಗ್ಯ ಸೇವೆಗಳಿಗೆ ವಿನಿಯೋಗಿಸುವಲ್ಲಿ ಯಶಸ್ವಿಯಾಗಿತ್ತು.. ಫೆಬ್ರವರಿ 2024 ರಲ್ಲಿ ಇನ್ಫೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ, ತಾಯಿಯ ಮತ್ತು ನವಜಾತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ 4-ವರ್ಷದ ಯೋಜನೆ, ಪ್ರಾಜೆಕ್ಟ್ ಅರ್ಲಿ ಲೈಫ್ ಅನ್ನು ಪ್ರಾರಂಭಿಸಲಾಯಿತು. ಕರ್ನಾಟಕದ ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಪ್ರಾರಂಭಿಸಿ ಜಿಲ್ಲಾ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಾದ್ಯಂತ ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಯನ್ನು ಹೆಚ್ಚಿಸಲು ಅತ್ಯಾಧುನಿಕ ಭ್ರೂಣ ಮೇಲ್ವಿಚಾರಣಾ ತಂತ್ರಜ್ಞಾನವನ್ನು ನಿಯೋಜಿಸಲಾಗಿದೆ. ಮೂಲಸೌಕರ್ಯಗಳ ಮೇಲೆ ಅವಲಂಬಿತವಲ್ಲದ, ಕಂಟಿನ್ಯೂ ಆಸ್ ಪಾಸಿಟಿವ್ ಏರ್ವೇ ಪ್ರೆಷರ್ ಸಿಸ್ಟಮ್ಸ್ ( ಧನಾತ್ಮಕ ವಾಯುಮಾರ್ಗದ ಒತ್ತಡ ವ್ಯವಸ್ಥೆಗಳ ನಿರಂತರ ಸೇವೆ) ಗಳನ್ನೂ ಸಹ ನಿಯೋಜಿಸಲಾಗಿದೆ. ಇದು ಉಸಿರಾಟದ ತೊಂದರೆ ಇರುವ ನವಜಾತ ಶಿಶುಗಳಿಗೆ, ಕೃತಕ ಅಥವಾ ಅಕ್ರಮಣಾಕಾರಿ ವಾತಾಯನವವಿಲ್ಲದ, ಉಸಿರಾಟದ ಬೆಂಬಲವನ್ನು ಒದಗಿಸುತ್ತದೆ.

ಅಲ್ಲದೆ, ಮತ್ತೊಂದು ಲೋಕೋಪಕಾರಿ ಪ್ರಯತ್ನದ ಭಾಗವಾಗಿ, ಕರ್ನಾಟಕ ರಾಜ್ಯ ದೃಷ್ಟಿ ಆರೈಕೆ ಕಾರ್ಯಕ್ರಮದ ಅಡಿಯಲ್ಲಿ, ಎಲ್ಲಾ ರೆಟಿನೋಪತಿಗಳು ಮತ್ತು ಪಾಯಿಂಟ್ ಆಫ್ ಕೇರ್ ಡಿಜಿಟಲ್ ಸ್ಟೀನಿಂಗ್ ಸಾಧನಗಳಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಟೀನಿಂಗ್ ಅನ್ನು ಒಳಗೊಂಡಿರುವ ಆರೋಗ್ಯಕ್ಕಾಗಿ ಆಕ್ಟ್ ನೊಂದಿಗೆ ಸಮಗ್ರ ಕಣ್ಣಿನ ಆರೈಕೆ ಕಾರ್ಯಕ್ರಮವನ್ನು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಧತ್ವ ಮತ್ತು ದೃಷ್ಟಿಹೀನತೆಯ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಆಶಾ ಕಿರಣ, ಏನ್ ಪಿ ಸಿ ಬಿ ವಿ ಐ, ರಾಜ್ಯದ 11 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಈ ಆರೋಗ್ಯ ಸೇವೆಗಳು ಹಾಗೂ ಪರಿಹಾರಗಳು ಇಲ್ಲಿಯವರೆಗೆ 2.4 ಲಕ್ಷ ಜನರ ಮೇಲೆ ನೇರವಾಗಿ ಧನಾತ್ಮಕ ಪರಿಣಾಮ ಬೀರಿವೆ.. ಇಂದು ನಡೆದ ಎರಡನೇ ರೌಂಡಟೇಬಲ್  ಸಭೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಲು ಚರ್ಚೆ ನಡೆಸಲಾಯಿತು.‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News