ಗಣಿ-ಧಣಿ ಜನಾರ್ಧನ ರೆಡ್ಡಿಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ

ಜನಾರ್ಧನ ರೆಡ್ಡಿಗೆ ವಿಧಿಸಿರುವ ಷರತ್ತು ಸಡಿಲಿಕೆಗೆ ಸುಪ್ರೀಂ ನಕಾರ.

Last Updated : Jan 22, 2018, 12:35 PM IST
ಗಣಿ-ಧಣಿ ಜನಾರ್ಧನ ರೆಡ್ಡಿಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ title=
File pic

ನವದೆಹಲಿ: ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಜಾಮೀನು ಮೇಲೆ ಹೊರಗಿರುವ ಗಣಿ-ಧಣಿ ಜನಾರ್ಧನ ರೆಡ್ಡಿಗೆ ಸುಪ್ರೀಂಕೋರ್ಟ್ನಲ್ಲಿ ಭಾರಿ ಹಿನ್ನಡೆ ಉಂಟಾಗಿದೆ.

ಜನಾರ್ಧನ ರೆಡ್ಡಿಗೆ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಜನಾರ್ಧನ ರೆಡ್ಡಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಜನಾರ್ಧನ ರೆಡ್ಡಿಗೆ ವಿಧಿಸಿರುವ ಷರತ್ತುಗಳ ಸಡಿಲಿಕೆಗೆ ನಕಾರ ವ್ಯಕ್ತಪಡಿಸಿದೆ.
 
ಸದ್ಯ ಜನಾರ್ಧನ ರೆಡ್ಡಿ ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳಿಗೆ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. 

Trending News