ಮಹಾದಾಯಿ ಸಮಸ್ಯೆ: ಇಂದು ಸಿದ್ದರಾಮಯ್ಯ ಭೇಟಿಗೆ ಮೈಸೂರಿಗೆ ತೆರಳಿದ ಹೋರಾಟಗಾರರು

    

Last Updated : Jan 11, 2018, 07:30 PM IST
ಮಹಾದಾಯಿ ಸಮಸ್ಯೆ: ಇಂದು ಸಿದ್ದರಾಮಯ್ಯ ಭೇಟಿಗೆ ಮೈಸೂರಿಗೆ ತೆರಳಿದ ಹೋರಾಟಗಾರರು  title=

ಬೆಂಗಳೂರು: ಮಹಾದಾಯಿ ವಿಚಾರವಾಗಿ ಚರ್ಚಿಸಲು ಮಹಾದಾಯಿ ಹೋರಾಟಗಾರರು ಇಂದು ಮೈಸೂರಿಗೆ ತೆರಳಲಿದ್ದಾರೆ.

ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ಮೈಸೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನರನ್ನು ಭೇಟಿ ಮಾಡಿ ಚರ್ಚಿಸಲು ಬೆಂಗಳೂರಿನ ಕುಮಾರ ಕೃಪಾ ಅತಿಥಿಗೃಹದಿಂದ ಮೈಸೂರಿಗೆ ಐರಾವತ ಬಸ್ನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಈ ಕುರಿತಾಗಿ ಅಶೋಕ ಪಟ್ಟಣ  ಮೈಸೂರಿಗೆ ಹೊರಡುವ ಮುಂಚೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈಗಾಗಲೇ ಈ ಭೇಟಿಯ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಮಹಾದಾಯಿ ಹೋರಾಟಗಾರಿಗೆ ಸಂಜೆ 7.30 ಕ್ಕೆ ಮೈಸೂರಿನ ಸರ್ಕಿಟ್ ಹೌಸನಲ್ಲಿ  ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಜನವರಿ 7 ರಂದು ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮತ್ತು ಪ್ರಧಾನಿ ಮೋದಿಯವರ ನಡುವೆ ಮಹಾದಾಯಿ ವಿಚಾರವಾಗಿ ಸಭೆ ನಡೆಯಲಿದೆ ಎಂದು ಸುದ್ದಿ ಹರಡಿತ್ತು, ಆದರೆ ಅದು ಯಾವುದು ಕೂಡ ನೆರವೇರಲಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ನಿವಾರಿಸಬೇಕಾದ ರೂಪುರೇಷೆಗಳೇನು ಮತ್ತು ಅದಕ್ಕೆ ರಾಜ್ಯ ಸರ್ಕಾರಿಂದ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಕುರಿತಾಗಿ ಮಹಾದಾಯಿ ಹೋರಾಟಗಾರರು ಇಂದು ಸಿದ್ದರಾಮಯ್ಯನವರ ಜೊತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

 

Trending News