ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆ ಕುರಿತಾಗಿ ನಡೆಯುತ್ತಿರುವ ಅಂತಿಮ ಹಂತದ ಹಂತದ ವಿಚಾರಣೆಯ ಭಾಗವಾಗಿ ಗೋವಾ ತನ್ನ ವಾದ ಮಂಡಿಸಿದೆ.
ತನ್ನ ಅಂತಿಮ ಹಂತದ ವಿಚಾರಣೆ ವೇಳೆ ವಾದ ಮಂಡಿಸಿದ ಗೋವಾ, ಸೂಪಾ ಡ್ಯಾಮ್ ನಲ್ಲಿ ಕರ್ನಾಟಕ ಕೇಳಿರುವ ಉತ್ಪಾದನೆ ವಿಚಾರವನ್ನು ನ್ಯಾಯಾಧಿಕರಣ ಪುರಸ್ಕರಿಸಬಾರದು ಎಂದು ಹೇಳಿದೆ. ತನ್ನ ವಾದದ ವೇಳೆ ನದಿ ಕಣಿವೆ ಹೊರಗಿನ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ ಜಾರಿಗೊಳಿಸಲು ಹೊರಟಿದ್ದ ಕೇರಳದ ನಿರ್ಧಾರಕ್ಕೆ ಈಗಾಗಲೇ ಸುಪ್ರಿಂ ಕೋರ್ಟ್ ನಿರಾಕರಿಸಿದ್ದು, ಆದ್ದರಿಂದ ಅದೇ ಮಾದರಿಯಲ್ಲಿ ಕರ್ನಾಟಕದ ಮನವಿಯನ್ನು ತಿರಸ್ಕರಿಸಬೇಕು ಎಂದು ಗೋವಾ ಪರ ವಕೀಲ ಆತ್ಮಾರಾಂ ನಾಡಕರ್ಣಿ ನ್ಯಾಯಾಧಿಕರಣದ ಮುಂದೆ ಕೇಳಿಕೊಂಡಿದ್ದಾರೆ.
ಈ ಅಂತಿಮ ಹಂತದ ಮಹದಾಯಿ ವಿಚಾರಣೆ ನಾಳೆಯ ದಿನ ಮುಕ್ತಾಯವಾಗಲಿದ್ದು,ಈ ವಿಚಾರಣೆಯಲ್ಲಿ ಒಂದು ಗಂಟೆಗಳ ಕಾಲ ಕರ್ನಾಟಕ ತನ್ನ ವಾದವನ್ನು ಮಂಡಿಸಲಿದೆ. ನಂತರ ನ್ಯಾಯಾಧಿಕರಣ ಅಗಸ್ಟ್ 20 ರೊಳಗಾಗಿ ತನ್ನ ಅಂತಿಮ ತೀರ್ಪನ್ನು ನೀಡಲಿದೆ ಎಂದು ತಿಳಿದುಬಂದಿದೆ.