ಲೋಕಸಭಾ ಚುನಾವಣೆ 2019: ಕರ್ನಾಟಕದ 18 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ರಾಜ್ಯದ ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 18 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದ್ದು, ದಾವಣಗೆರೆ ಮತ್ತು ಬೀದರ್ ಕ್ಷೇತ್ರಗಳಿಂದ ಶಾಸಕರನ್ನು ಕಣಕ್ಕಿಳಿಸಿದೆ. 

Last Updated : Mar 24, 2019, 11:54 AM IST
ಲೋಕಸಭಾ ಚುನಾವಣೆ 2019: ಕರ್ನಾಟಕದ 18 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ title=

ಬೆಂಗಳೂರು: ಲೋಕಸಭಾ ಚುನಾವಣೆಗೆ ಕರ್ನಾಟಕದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಶನಿವಾರ ತಡ ರಾತ್ರಿ ಬಿಡುಗಡೆ ಮಾಡಿದೆ.

ರಾಜ್ಯದ ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 18 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದ್ದು, ದಾವಣಗೆರೆ ಮತ್ತು ಬೀದರ್ ಕ್ಷೇತ್ರಗಳಿಂದ ಶಾಸಕರನ್ನು ಕಣಕ್ಕಿಳಿಸಿದೆ. ಅಲ್ಲದೆ, ತನ್ನ ಎಲ್ಲಾ 9 ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ನೀಡುವ ಮೂಲಕ ಅಷ್ಟೂ ಕ್ಷೇತ್ರಗಳಲ್ಲಿ ಮತ್ತೆ ಜಯಸಾಧಿಸುವ ವಿಶ್ವಾಸ ಹೊಂದಿದೆ. 

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಚಿಕ್ಕೋಡಿ: ಪ್ರಕಾಶ್‌ ಹುಕ್ಕೇರಿ 
ಬೆಳಗಾವಿ : ವಿ.ಎಸ್‌. ಸಾಧುನವರ್‌
ಬಾಗಲಕೋಟೆ: ವೀಣಾ ಕಾಶಪ್ಪನವರ್‌
ಕಲಬುರ್ಗಿ(ಎಸ್‌ಸಿ): ಮಲ್ಲಿಕಾರ್ಜುನ ಖರ್ಗೆ 
ರಾಯಚೂರು(ಎಸ್‌ಸಿ): ಬಿ.ವಿ.ನಾಯಕ್‌ 
ಬೀದರ್: ಈಶ್ವರ್ ಖಂಡ್ರೆ
ಕೊಪ್ಪಳ: ರಾಜಶೇಖರ ಹಿಟ್ನಾಳ್‌ 
ಬಳ್ಳಾರಿ(ಎಸ್‌ಟಿ): ವಿ.ಎಸ್‌.ಉಗ್ರಪ್ಪ 
ಹಾವೇರಿ: ಡಿ.ಆರ್‌.ಪಾಟೀಲ್‌ 
ದಾವಣಗೆರೆ: ಶಾಮನೂರು ಶಿವಶಂಕರಪ್ಪ 
ದಕ್ಷಿಣ ಕನ್ನಡ: ಮಿಥುನ್‌ ರೈ 
ಚಿತ್ರದುರ್ಗ(ಎಸ್‌ಸಿ): ಬಿ.ಎನ್‌.ಚಂದ್ರಪ್ಪ 
ಮೈಸೂರು: ಸಿ.ಎಚ್‌.ವಿಜಯಶಂಕರ್‌ 
ಚಾಮರಾಜನಗರ(ಎಸ್‌ಸಿ): ಆರ್‌.ಧ್ರುವನಾರಾಯಣ 
ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್‌ 
ಬೆಂಗಳೂರು ಸೆಂಟ್ರಲ್‌: ರಿಜ್ವಾನ್‌ ಅರ್ಷದ್‌ 
ಚಿಕ್ಕಬಳ್ಳಾಪುರ: ಡಾ.ಎಂ.ವೀರಪ್ಪ ಮೊಯಿಲಿ 
ಕೋಲಾರ(ಎಸ್‌ಸಿ) : ಕೆ.ಎಚ್‌.ಮುನಿಯಪ್ಪ 

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದು, ಲೋಕಸಭೆ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಅದರಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 20 ಮತ್ತು ಜೆಡಿಎಸ್ 8 ಸ್ಥಾನಗಳನ್ನು ಹಂಚಿಕೊಂಡಿವೆ. 

ರಾಜ್ಯದಲ್ಲಿ ಏಪ್ರಿಲ್ 18ರಂದು 14 ಲೋಕಸಭಾ ಸ್ಥಾನಗಳಿಗೆ ಹಾಗೂ ಏಪ್ರಿಲ್ 23ರಂದು ಮತ್ತೊಂದು ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎಲ್ಲಾ ಹಂತಗಳ ಚುನಾವಣೆಯ ಮತಎಣಿಕೆ ಮೇ 23 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.
 

Trending News