Lokasabha Election 2024: ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ನಗದು ವಶಕ್ಕೆ

Lok Sabha Election 2024: ವಶಪಡಿಸಿಕೊಂಡಿರುವ ದಾಖಲೆ ಇಲ್ಲದ ಹಣವನ್ನು ತಕ್ಷಣೆ ಖಜಾನೆಯಲ್ಲಿ ಡಿಪಾಜಿಟ್ ಮಾಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸೀಜರ್ ಕಮಿಟಿಗೆ ವರದಿ ಸಲ್ಲಿಸಲಾಗಿದೆ ಎಂದು ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.

Written by - Manjunath N | Last Updated : Mar 19, 2024, 03:14 AM IST
  • ವಶಪಡಿಸಿಕೊಂಡಿರುವ ದಾಖಲೆ ಇಲ್ಲದ ಹಣವನ್ನು ತಕ್ಷಣೆ ಖಜಾನೆಯಲ್ಲಿ ಡಿಪಾಜಿಟ್ ಮಾಡಲಾಗಿದ್ದು,
  • ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸೀಜರ್ ಕಮಿಟಿಗೆ ವರದಿ ಸಲ್ಲಿಸಲಾಗಿದೆ ಎಂದು ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.
 Lokasabha Election 2024: ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ನಗದು ವಶಕ್ಕೆ title=

ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ನಗದು ವಶಕ್ಕೆ

ಹುಬ್ಬಳ್ಳಿ: ಮಾರ್ಚ್18ರ ಸಂಜೆ 6.05ರ ಸುಮಾರಿಗೆ ಕಿರೆಸೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ GJ 05 JB7162 ಕಾರನ್ನು ಕರ್ತವ್ಯದಲ್ಲಿ ಹಾಜರಿದ್ದ ಮ್ಯಾಜಿಸ್ಟ್ರೇಟ್ ರಮಜಾನಸಾಬ ಕಿಲ್ಲೇದಾರ , ಎಸ್ ಎಸ್ ಟಿ ಹಾಗೂ ಎಫ್ ಎಸ್ ಟಿ 3 ರ, ನಾಗಾ ನಾಯ್ಕ ,ಪೋಲೀಸ್ ಸಿಬ್ಬಂದಿಗಳು ತಡೆದು ತಪಾಸಣೆ ಮಾಡಿದಾಗ ಕಾರಿನಲ್ಲಿ ಓಂಪ್ರಕಾಶ್ ಎನ್ನುವವರಿಗೆ ಸೇರಿದ್ದ ದಾಖಲೆ ಇರದ 3,82,000/-ರೂಪಾಯಿ ನಗದು ಇರುವುದು ಕಂಡುಬಂದಿದ್ದು, ನಿಯಮಾನುಸಾರ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಹು-ಧಾ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಸಿಸಿ ನೋಡೆಲ್ ಅಧಿಕಾರಿ ರವೀಂದ್ರ ಕುಮಾರ್, ಪೋಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ,ಎ.ಎಸ್.ಐ ಆರ್ ಜಿ ನಾಯ್ಕ, ಎಎಸ್ ಐ ಜಿ.ಸಿ.ಕಡೇಮನಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ವಶಪಡಿಸಿಕೊಂಡಿರುವ ದಾಖಲೆ ಇಲ್ಲದ ಹಣವನ್ನು ತಕ್ಷಣೆ ಖಜಾನೆಯಲ್ಲಿ ಡಿಪಾಜಿಟ್ ಮಾಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸೀಜರ್ ಕಮಿಟಿಗೆ ವರದಿ ಸಲ್ಲಿಸಲಾಗಿದೆ ಎಂದು ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News