ನ್ಯಾಯ ಕೋರಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು ..!

ಇದೀಗ ಪಿಎಸ್ ಐ  ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಸಂಚಲನ ಮೂಡಿಸಿದೆ. ಪಿಎಸ್ ಐ ಪರೀಕ್ಷೆಯ ಅಕ್ರಮದಿಂದಾಗಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Written by - Zee Kannada News Desk | Edited by - Ranjitha R K | Last Updated : May 16, 2022, 11:36 AM IST
  • ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು
  • ನ್ಯಾಯಕ್ಕಾಗಿ ಪ್ರಧಾನಿ ಮೊರೆ ಹೋದ ಅಭ್ಯರ್ಥಿಗಳು
  • ನ್ಯಾಯ ಸಿಗದಿದ್ದರೆ ಭಯೋತ್ಪಾದಕರಾಗುವ ಎಚ್ಚರಿಕೆ
ನ್ಯಾಯ ಕೋರಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು ..!  title=
Blood letter to PM

ಬೆಂಗಳೂರು : ನೊಂದ ಪಿಎಸ್ಐ ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಎರಡು ಪುಟಗಳ ಪತ್ರ ಬರೆದಿರುವ ಅಭ್ಯರ್ಥಿಗಳು  ನ್ಯಾಯ ಓದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪತ್ರದಲ್ಲಿ ಪತ್ರ ಬರೆದಿರುವವರ ಹೆಸರು ಮಾತ್ರ ಬಹಿರಂಗ ಮಾಡಿಲ್ಲ.  

ರಾಜ್ಯದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಪಿಎಸ್ ಐ  ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಸಂಚಲನ ಮೂಡಿಸಿದೆ. ಪಿಎಸ್ ಐ ಪರೀಕ್ಷೆಯ ಅಕ್ರಮದಿಂದಾಗಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಬೇಕು, ಬದಲಾಗಿ ನಿಯತ್ತನಿಂದ ಪರೀಕ್ಷೆ ಬರೆದವರಿಗೆ ಮೋಸವಾಗಬಾರದು ಎಂದು ಪತ್ರದಲ್ಲಿ ಹೇಳಲಾಗಿದೆ.  ಕರ್ನಾಟಕದಲ್ಲಿ ಹಣ ಇದ್ದವರಿಗೆ ಮಾತ್ರ ಸರ್ಕಾರಿ ಹುದ್ದೆಗಳು ಎನ್ನುವಂತ ವ್ಯವಸ್ಯೆ ಬಂದುಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದ ಮಾನಸಿಕವಾಗಿ ಸತ್ತುಹೋಗಿದ್ದೇವೆ  ಎಂದು ತಮ್ಮ ನೀವು ತೋಡಿಕೊಂಡಿದ್ದಾರೆ. ಮಾತ್ರವಲ್ಲ ಇನ್ನು ಮುಂದೆ ಸರ್ಕಾರಿ ಹುದ್ದೆಗಳಿಗಾಗಿ ಕರೆಯುವ ಯಾವ ಪರೀಕ್ಷೆಗಳನ್ನೂ ಬರೆಯುವುದಿಲ್ಲ ಎಂದಿದ್ದಾರೆ.  

ಇದನ್ನೂ ಓದಿ : ರಾಜ್ಯಕ್ಕೆ ವಕ್ಕರಿಸಿತು ಮತ್ತೊಂದು ಮಹಾಮಾರಿ.! ಮಕ್ಕಳನ್ನು ಬಾಧಿಸುವ ಟೊಮೊಟೊ ಜ್ವರ ವೈರಸ್ ಪತ್ತೆ

ಅಲ್ಲದೆ 2021ರಲ್ಲಿ ನಡೆದ ಎಫ್ ಡಿಎ ಪರೀಕ್ಷೆಯಲ್ಲಿಯೂ ಅಕ್ರಮವಾಗಿದೆ ಎಂದು ಆರೋಪಿಸಿರುವ ಅಭ್ಯರ್ಥಿಗಳು ಈ ಬಗ್ಗೆ ಕೂಡಾ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ. ಹಾಗಾಗಿ ಅವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ. 

ಒಂದು ವೇಳೆ ನಮಗೆ ನ್ಯಾಯಕೊಡಿಸದೇ ಹೋದಲ್ಲಿ ಮುಂದೆ  ಟೆರರಿಸ್ಟ್ ಗಳ ಕೈಜೋಡಿಸುವ ಎಚ್ಚರಿಕೆಯನ್ನು ಕೂಡಾ ಈ ಪತ್ರದ ಮೂಲಕ ನೀಡಲಾಗಿದೆ. ಮಾತ್ರವಲ್ಲ, ಟೆರೆರಿಸ್ಟ್ ಗಳ ಜೊತೆ ನಕ್ಸಲ್ ಸಂಘಟನೆ ಸೇರಲು ಇಚ್ಛಿಸಿರುವುದಾಗಿಯೂ  ಹೇಳಿದ್ದಾರೆ.  ಒಟ್ಟು ಎಂಟು ಮಂದಿ ಇದ್ದು, ಎಲ್ಲರೂ ಒಟ್ಟಾಗಿ ಈ ನಿರ್ಧಾರ ಮಾಡಿರುವುದಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. 

ಇದನ್ನೂ ಓದಿ : Shocking News: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗು ಸ್ಮಶಾನದಲ್ಲಿ ಜೀವಂತ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News