Karnataka Budget 2021 : ಕರೋನಾ ಕಾಲದಲ್ಲಿ ಕೈಹಿಡಿದ ಕೃಷಿಕ..! ಉದ್ಯಮಕ್ಕೆ ಶೇ. 5.1 ರಷ್ಟು ನಷ್ಟ

ಕರೋನಾ  ನಡುವೆಯೂ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿದೆ. ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತುನೀಡಿದೆ. ಡಾಕ್ಟರ್ಸ್, ಪೋಲೀಸರು  , ಕಂದಾಯ, ನಗರಾಭಿವೃದ್ಧಿ ಸಿಬ್ಬಂದಿ ಕರೋನಾ ಮಹಾಮಾರಿಯ ಸಂಕಷ್ಟದ ಸಮಯದಲ್ಲೂ ಹಗಲಿರುಳು ಕೆಲಸ ಮಾಡಿದ್ದಾರೆ.   

Written by - Ranjitha R K | Last Updated : Mar 8, 2021, 03:41 PM IST
  • ಕರೋನಾ ಸಂದರ್ಭದಲ್ಲಿ ಶ್ರಮಿಸಿದವರಿಗೆ ಥ್ಯಾಂಕ್ಸ್ ಹೇಳಿದ ಯಡಿಯೂರಪ್ಪ
  • ಕರೋನಾ ಕಾಲದಲ್ಲಿ ಕೃಷಿ ವಲಯದಲ್ಲಿ ಶೇ. 6.1 ರಷ್ಟು ಪ್ರಗತಿ
  • ಕೊವಿಡ್ ಲಸಿಕೆ ವಿತರಣೆಯಲ್ಲಿ ಗಮನ ಸೆಳೆದ ಕರ್ನಾಟಕ
Karnataka Budget 2021 : ಕರೋನಾ ಕಾಲದಲ್ಲಿ ಕೈಹಿಡಿದ ಕೃಷಿಕ..! ಉದ್ಯಮಕ್ಕೆ ಶೇ. 5.1 ರಷ್ಟು ನಷ್ಟ title=
ಕೊವಿಡ್ ಲಸಿಕೆ ವಿತರಣೆಯಲ್ಲಿ ಗಮನ ಸೆಳೆದ ಕರ್ನಾಟಕ (file photo)

ಬೆಂಗಳೂರು: ಪ್ರತಿಪಕ್ಷಗಳ ಗದ್ದಲದ ನಡುವೆಯೇ ಯಡಿಯೂರಪ್ಪ (BS Yediyurappa) ತಮ್ಮ 8 ನೇ ಬಜೆಟ್ ಮಂಡಿಸಿದರು. 2021 - 22 ನೇ ಸಾಲಿನ ಆಯವ್ಯಯ ಮಂಡಿಸಿದ ಯಡಿಯೂರಪ್ಪ, ಕರೋನಾ (Corornavirus) ಸಂದರ್ಭದಲ್ಲಿ ಶ್ರಮಿಸಿದವರಿಗೆ ಥ್ಯಾಂಕ್ಸ್ ಹೇಳಿದರು. 

`ಕರೋನಾ ಒಂದು ದುಸ್ವಪ್ನ' : 
ಕರೋನಾ (Coronavirus) ನಡುವೆಯೂ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿದೆ. ಆರೋಗ್ಯ, (Health) ಮೂಲಸೌಕರ್ಯ ಅಭಿವೃದ್ಧಿಗೆ ಒತ್ತುನೀಡಿದೆ. ಡಾಕ್ಟರ್ಸ್, ಪೋಲೀಸರು (police) , ಕಂದಾಯ, ನಗರಾಭಿವೃದ್ಧಿ ಸಿಬ್ಬಂದಿ ಕರೋನಾ ಮಹಾಮಾರಿಯ ಸಂಕಷ್ಟದ ಸಮಯದಲ್ಲೂ ಹಗಲಿರುಳು ಕೆಲಸ ಮಾಡಿದ್ದಾರೆ. ಕರೋನಾ (COVID19)ಸಂಕಷ್ಟವನ್ನು ನಾವುಒಂದು ಕ್ಷಣವೂ ಮರೆಯುವಂತಿಲ್ಲ. ಕರೋನಾ ಒಂದು ಭಯಂಕರ ದುಸ್ವಪ್ನ ಎಂದು ಹೇಳಿದರು. 
ಕೊವಿಡ್‍ಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್ ಲಸಿಕೆ (COVID Vaccine) ಹಂಚಿಕೆಯಲ್ಲೂ ಕರ್ನಾಟಕ ದೇಶದ ಗಮನ ಸೆಳೆದಿದೆ ಎಂದು ಯಡಿಯೂರಪ್ಪ ಹೇಳಿದರು.

ಇದನ್ನೂ ಓದಿ : Karnataka Budget 2021: ಬಜೆಟ್ ನಲ್ಲಿ ಪೆಟ್ರೋಲ್-ಡಿಸೇಲೆ ಬೆಲೆ ಇಳಿಕೆಯ ಬಗ್ಗೆ 'ಬಿಗ್ ಶಾಕ್'..!

ಕರೋನಾ ಕಾಲದಲ್ಲಿ ಕೈಹಿಡಿದ ಕೃಷಿಕ
ಲಾಕ್ ಡೌನ್ (Lock down)  ಕಾರಣದಿಂದಾಗಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆದಾಯ ಸಂಗ್ರಹ ಕಡಿಮೆಯಾಗಿತ್ತು. ಆದರೆ, ರಾಜ್ಯ ಆಹಾರ ಉತ್ಪಾದನೆಯಲ್ಲಿ ದಾಖಲೆ ಸಾಧಿಸಿದೆ ಎಂದು ಯಡಿಯೂರಪ್ಪ (BS Yediyurappa) ಹೇಳಿದರು.

ಕರೋನಾ ಕಾರಣದಿಂದಾಗಿ ಕೈಗಾರಿಕಾ (Industry) ವಲಯಕ್ಕೆ ಸೇ. 5.1 ಹಾಗೂ ಸೇವಾ ವಲಯಕ್ಕೆ ಶೇ. 3.1ರಷ್ಟು ನಷ್ಟ ಉಂಟಾಗಿದೆ. ಆದರೆ, ಸಂತಸದ ಸಂಗತಿಯೆಂದರೆ ಕೃಷಿ ಕ್ಷೇತ್ರ (Agriculture) ಶೇ 6.1 ರಷ್ಟು ಬೆಳವಣಿಗೆ ದಾಖಲಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು. ಮಾಹಿತಿ ತಂತ್ರಜ್ಞಾನಕ್ಕೆ ರಾಜ್ಯದ ಕೊಡುಗೆ ಶೇ. 40 ರಷ್ಟಿದೆ. ಜಿಡಿಪಿಗೆ (GDP) ಶೇ. 8 ರಷ್ಟು ರಾಜ್ಯದ ಕೊಡುಗೆ ಇದೆ ಎಂದು ಯಡಿಯೂರಪ್ಪ (BSY) ಅಂಕಿ ಅಂಶಗಳ ಸಹಿತ ವಿವರ ನೀಡಿದರು.

ಇದನ್ನೂ ಓದಿ : Karnataka Budget 2021 : `ಸರ್ವಧರ್ಮಕ್ಕೂ ಸಮಪಾಲು' ಇಲ್ಲಿದೆ ಬಜೆಟ್ ಹೈಲೈಟ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News