Karnataka Budget 2021: ಬಜೆಟ್ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಬಿಎಸ್ ವೈ ಲೆಕ್ಕಾಚಾರ!

ಕಳೆದ ವರ್ಷ 2,33,137 ಕೋಟಿ ರೂ. ಗಾತ್ರದ ಬಜೆಟ್‍ನ್ನು ಮಂಡಿಸಿದ್ದರು. ಈ ಬಾರಿ ಅದಕ್ಕೆ 10,600 ಕೋಟಿ ರೂ.ಗಳಷ್ಟು ಹೆಚ್ಚುವರಿ ಸೇರ್ಪಡೆಯಾಗಿದೆ.

Last Updated : Mar 8, 2021, 01:55 PM IST
  • ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ 2021-22ನೆ ಸಾಲಿನ ಬಜೆಟ್ ಮಂಡನೆ ಮಾಡಿದ್ದು
  • ಬಜೆಟ್‍ನ ಒಟ್ಟು ಗಾತ್ರ 2.43 ಕೋಟಿ ರೂ.ಗಳಾಗಿದೆ.
  • ಕಳೆದ ವರ್ಷ 2,33,137 ಕೋಟಿ ರೂ. ಗಾತ್ರದ ಬಜೆಟ್‍ನ್ನು ಮಂಡಿಸಿದ್ದರು. ಈ ಬಾರಿ ಅದಕ್ಕೆ 10,600 ಕೋಟಿ ರೂ.ಗಳಷ್ಟು ಹೆಚ್ಚುವರಿ ಸೇರ್ಪಡೆಯಾಗಿದೆ.
Karnataka Budget 2021: ಬಜೆಟ್ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಬಿಎಸ್ ವೈ ಲೆಕ್ಕಾಚಾರ! title=

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ 2021-22ನೆ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಬಜೆಟ್‍ನ ಒಟ್ಟು ಗಾತ್ರ 2.43 ಕೋಟಿ ರೂ.ಗಳಾಗಿದೆ. ಕಳೆದ ವರ್ಷ 2,33,137 ಕೋಟಿ ರೂ. ಗಾತ್ರದ ಬಜೆಟ್‍ನ್ನು ಮಂಡಿಸಿದ್ದರು. ಈ ಬಾರಿ ಅದಕ್ಕೆ 10,600 ಕೋಟಿ ರೂ.ಗಳಷ್ಟು ಹೆಚ್ಚುವರಿ ಸೇರ್ಪಡೆಯಾಗಿದೆ.

ಇದರಲ್ಲಿ 1,72,271 ರಾಜಸ್ವ ಜಮೆ ಹಾಗೂ 71,332 ಕೋಟಿ ಸಾಲ, 71,463 ಕೋಟಿ ಬಂಡವಾಳ ಜಮೆ ಎಂದು ಅಂದಾಜಿಸಲಾಗಿದೆ. 1,87,405 ಕೋಟಿ ರಾಜಸ್ವ ವೆಚ್ಚ, 44,237 ಕೋಟಿ ಬಂಡವಾಳ ವೆಚ್ಚ, 14,565 ಕೋಟಿ ಸಾಲ ಮರುಪಾವತಿ ಸೇರಿದಂತೆ ಒಟ್ಟು 2,46,207 ಕೋಟಿ ರೂ. ಬಜೆಟ್ ಖರ್ಚ(Budget Expenditure)ನ್ನು ಅಂದಾಜು ಮಾಡಲಾಗಿದೆ.

Karnataka Budget 2021 : ಕರೋನಾ ಕಾಲದಲ್ಲಿ ಕೈಹಿಡಿದ ಕೃಷಿಕ..! ಉದ್ಯಮಕ್ಕೆ ಶೇ. 5.1 ರಷ್ಟು ನಷ್ಟ

15,134 ಕೋಟಿ ರೂ. ರಾಜಸ್ವ ಕೊರತೆಯನ್ನು ಅಂದಾಜು ಮಾಲಾಗಿದ್ದು, ವಿತ್ತೀಯ ಕೊರತೆಯನ್ನು 59,240 ಕೋಟಿ ರೂ.ಗಳೆಂದು ನಿರೀಕ್ಷಿಸಲಾಗಿದೆ. ಇದು ರಾಜ್ಯದ ಜಿಡಿಪಿ(GDP)ಯ ಶೇ.3.48ರಷ್ಟಿದೆ. 2021-22ನೇ ಸಾಲಿನ ಕೊನೆಗೆ ರಾಜ್ಯದ ಸಾಲದ ಗಾತ್ರ 4,57,899 ಕೋಟಿ ರೂ.ಗಳಾಗಬಹುದು ಎಂಬ ನಿರೀಕ್ಷೆ ಇದ್ದು, ಇದು ರಾಜ್ಯದ ಒಟ್ಟು ಜಿಡಿಪಿಯ ಶೇ.26.9ರಷ್ಟು ಎಂದು ಸಿಎಂ ತಿಳಿಸಿದ್ದಾರೆ.

Karnataka Budget 2021: ರೈತ ನಾಯಕ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಬಜೆಟ್‌ನಲ್ಲಿ ರೈತರಿಗೆ ಕೊಟ್ಟಿದ್ದೇನು?

ರಾಜ್ಯದ ಸಾಲದ ಪ್ರಮಾಣ ಜಿಡಿಪಿಯಿಂದ ಶೇ.25ರಷ್ಟು ಮೀರಬಾರದು ಎಂಬ ನಿಯಮ ಇದೆ. ವಿತ್ತೀಯ ಕೊರತೆ ಶೇ.2.5ರ ಒಳಗೆ ನಿಯಂತ್ರಣದಲ್ಲಿರಬೇಕೆಂಬ ನಿಯಮಗಳಿದ್ದವು. ವಿತ್ತೀಯ ಕೊರತೆಯ ಪ್ರಮಾಣವನ್ನು ಕೇಂದ್ರ ಸರ್ಕಾರ ಕೋವಿಡ್ ಕಾರಣದಿಂದಾಗಿ ಸಡಿಲ ಮಾಡಿದೆ. ಈಗ ಸಾಲದ ಪ್ರಮಾಣ ಕೂಡ ಜಿಡಿಪಿ ಆದಾಯ(Income) ಮೀರಿ ಶೇ.1.9ರಷ್ಟು ಹೆಚ್ಚಾಗಿದೆ.

Karnataka Budget 2021: ಬಜೆಟ್ ನಲ್ಲಿ ಪೆಟ್ರೋಲ್-ಡಿಸೇಲೆ ಬೆಲೆ ಇಳಿಕೆಯ ಬಗ್ಗೆ 'ಬಿಗ್ ಶಾಕ್'..!

ನಷ್ಟ ಪರಿಹಾವರ ಸೇರಿದಂತೆ ಜಿಎಸ್‍ಟಿ ಆದಾಯ ಪ್ರಮಾಣವನ್ನು 1,24 ,202 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ತೆರಿಗೆ(Tax)ಯೇತರ ರಾಜಸ್ವಗಳಿಂದ 8258 ಕೋಟಿ, ಕೇಂದ್ರ ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಾದ 24,273 ಕೋಟಿ ಹಾಗೂ 15,538ಕೋಟಿ ಸಹಾಯ ಧನವನ್ನು ನಿರೀಕ್ಷಿಸಲಾಗಿದೆ. ರಾಜಸ್ವ ಜಮೆಗೆ ಪೂರಕವಾಗಿ 71,332 ಕೋಟಿ ಸಾಲ ಪಡೆಯುವ ಸೂಚನೆಯನ್ನು ಯಡಿಯೂರಪ್ಪ ನೀಡಿದ್ದಾರೆ.

Karnataka Budget 2021 : `ಸರ್ವಧರ್ಮಕ್ಕೂ ಸಮಪಾಲು' ಇಲ್ಲಿದೆ ಬಜೆಟ್ ಹೈಲೈಟ್ಸ್

40 ಕೋಟಿ ಋಣೇತರ ಸ್ವೀಕೃತಿಗಳು, 91 ಕೋಟಿ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. ಸರ್ಕಾರದ ಒಡೆತನದಲ್ಲಿರುವ ನಿಗಮ ಮಂಡಳಿಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಆರ್ಥಿಕ ಸಾಮಥ್ರ್ಯಕ್ಕನುಗುಣವಾಗಿ 23,763 ಕೋಟಿ ಸಾಲ(Lone) ಪಡೆದು ಸಂಪನ್ಮೂಲ ಕ್ರೂಢೀಕರಿಸಬಹುದೆಂದು ಸಿಎಂ ತಿಳಿಸಿದ್ದಾರೆ.

Karnataka Budget 2021: ಬಜೆಟ್ ನಿಂದ ನಿವೇಶನ ಜಾಗ ಖರೀದಿದಾರರಿಗೆ ಭರ್ಜರಿ ಸಿಹಿ ಸುದ್ದಿ..!

ಕಳೆದ ವರ್ಷ 2,33,134 ಕೋಟಿ ಆಯವ್ಯಯದಲ್ಲಿ 2,30,381 ಕೋಟಿ ರೂ. ಆದಾಯ ಜಮೆಯಾಗಿದೆ. ಕೋವಿಡ್(Covid) ಕಾರಣದಿಂದಾಗಿ ಸಂಪನ್ಮೂಲ ಕ್ರೂಢೀಕರಣ ಕಡಿಮೆಯಾಗಿದ್ದು, 1,59,709 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಇದರಲ್ಲಿ ಜಿಎಸ್‍ಟಿಯ ಪಾಲು 1,17,782 ಕೋಟಿ ರೂ.ಗಳು. 2019-20ನೇ ಸಾಲಿನ ಬಜೆಟ್‍ಗೆ (2,29,925 ಕೋಟಿ) ಹೋಲಿಸಿದರೆ 2020-21ನೇ ಸಾಲಿನ ಬಜೆಟ್‍ನಲ್ಲಿ ಶೇ.2.6ರಷ್ಟು ಹೆಚ್ಚಳವಾಗಿತ್ತು ಎಂದು ಸಿಎಂ ತಿಳಿಸಿದ್ದಾರೆ.

Karnataka Budget 2021: ಬಿಎಸ್‌ವೈ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News