ಕೃಷ್ಣಾ ಬೀಮಾ ಒಡಲಲ್ಲಿ ಕೈ ಕೊಟ್ಟ ಮುಂಗಾರು

ಬಸವಸಾಗರ ಜಲಾಶಯವೂ ನಾಲ್ಕು ಜಿಲ್ಲೆಗಳ ರೈತರ ಜಮೀನಿಗೆ ನೀರೋದಗಿಸುತ್ತಿದೆ. ಯಾದಗಿರಿ, ವಿಜಯಪೂರ, ಕಲಬುರಗಿ, ರಾಯಚೂರ ಜಿಲ್ಲೆಗಳ ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟರ್ ಪ್ರದೇಶಕ್ಕೆ ನೀರೋದೊಗಿಸು ಪ್ರಮುಖ ಜಲಾಶಯವಾಗಿದೆ ...

Written by - Yashaswini V | Last Updated : Jun 19, 2023, 09:00 AM IST
  • ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ ನೀರು ಕೂಡ ಕಡಿಮೆಯಾಗಿದೆ.
  • ಪಶ್ಚಿಮ ಘಟ್ಟಗಳಲ್ಲಿ ಈ ಭಾರಿ ಇನ್ನೂ ಮಳೆ ಪ್ರಾರಂಭವಾಗಿಲ್ಲ.
  • ಸಾಮಾನ್ಯವಾಗಿ, ಇಷ್ಟೋತ್ತಿಗಾಗಲೇ ಒಳ ಹರಿವು ಪ್ರಾರಂಭಗೊಳ್ಳುತ್ತಿತ್ತು. ಆದರೀಗ ಅದೂ ಇಲ್ಲ...
ಕೃಷ್ಣಾ ಬೀಮಾ ಒಡಲಲ್ಲಿ ಕೈ ಕೊಟ್ಟ ಮುಂಗಾರು title=

Mansoon: ರಾಜ್ಯದಲ್ಲಿ ಹಲವೆಡೆ ಭರ್ಜರಿ ಮಳೆಯಾಗುತ್ತಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಮುಂಗಾರು ಕೈ ಕೊಟ್ಟಿದ್ದು ರೈತರನ್ನು ಕಂಗಾಲಾಗಿಸಿದೆ. ಅಷ್ಟೇ ಅದಲ್ಲದೆ ಜಲಾಶಯಗಳ ನೀರು ತಳಮಟ್ಟಕ್ಕೆ ತಲುಪಿರುವುದು ಇಲ್ಲಿನ ರೈತರ ಚಿಂತೆಗೆ ಕಾರಣವಾಗಿದೆ.  ಈ ಕುರಿತ ಒಂದು ಕಂಪ್ಲೀಟ್ ವರದಿ ಇಲ್ಲಿದೆ. 

ಬರಿದಾಗುತ್ತಿರುವ ಜಲಾಶಯ, ಬಿತ್ತನೆಗಾಗಿ ಸಜ್ಜಾಗಿರುವ ಜಮೀನು ಯಾವಾಗ ಮಳೆ ಬರುತ್ತೆ ಎಂದು ಕಾದು ಕೂತ ರೈತರು ಇದೆಲ್ಲಾ ದೃಶ್ಯ ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯಲ್ಲಿ. ಹೌದು, ರಾಜ್ಯಕ್ಕೆ ಮುಂಗಾರು ಮಳೆ ಕೈ ಕೊಟ್ಟಿದ್ದು ಬಿತ್ತನೆಯ ಕನಸುಕಂಡಿದ್ದ ರೈತರಿಗೆ ನಿರಾಸೆಯಾಗಿದೆ.  

ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ ನೀರು ಕೂಡ ಕಡಿಮೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಈ ಭಾರಿ ಇನ್ನೂ ಮಳೆ ಪ್ರಾರಂಭವಾಗಿಲ್ಲ. ಸಾಮಾನ್ಯವಾಗಿ, ಇಷ್ಟೋತ್ತಿಗಾಗಲೇ ಒಳ ಹರಿವು ಪ್ರಾರಂಭಗೊಳ್ಳುತ್ತಿತ್ತು. ಆದರೆ, ಇನ್ನೂ ಒಳಹರಿವು ಇಲ್ಲದೆ ನೀರಿನ ಮಟ್ಟ ಕುಸಿತ ಕಾಣುತ್ತಿದೆ. 

ಇದನ್ನೂ ಓದಿ- ನಮ್ಮ ದೇಶಕ್ಕೆ ಉತ್ತರದಾಯಿತ್ವ ಇರುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಗತ್ಯವಿದೆ-ಸಿಎಂ ಸಿದ್ದರಾಮಯ್ಯ 

ವಾಸ್ತವವಾಗಿ, ಬಸವಸಾಗರ ಜಲಾಶಯವೂ ನಾಲ್ಕು ಜಿಲ್ಲೆಗಳ ರೈತರ ಜಮೀನಿಗೆ ನೀರೋದಗಿಸುತ್ತಿದೆ. ಯಾದಗಿರಿ, ವಿಜಯಪೂರ, ಕಲಬುರಗಿ, ರಾಯಚೂರ ಜಿಲ್ಲೆಗಳ ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟರ್ ಪ್ರದೇಶಕ್ಕೆ ನೀರೋದೊಗಿಸು ಪ್ರಮುಖ ಜಲಾಶಯವಾಗಿದೆ. 

ಜಿಲ್ಲೆಯಲ್ಲಿ ಕೃಷ್ಣಾ ಬೀಮಾ ನದಿಗಳಿದ್ದರೂ  ನೀರಿನ ಬರ ನೀಗುತ್ತಿಲ್ಲ. ನದಿಗಳ ಒಡಲು ಬರಿದಾಗುತ್ತಿದೆ. ದಿನೇ ದಿನೇ ನೀರಿನ ಪ್ರಮಾಣ ಕುಸಿತ ಕಾಣುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಜನರ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುವುದಂತೂ ಗ್ಯಾರಂಟಿ.

ಇದನ್ನೂ ಓದಿ-  ರಾಜ್ಯದಲ್ಲಿ ನಾಲ್ಕು ದಿನ ಮಳೆ ಮುನ್ಸೂಚನೆ 

ಈಗಾಗಲೇ ಬೀಜ, ರಸಗೊಬ್ಬರ ಖರೀದಿಸಿದ ರೈತರು ಮುಗಿಲಿನತ್ತ ಮುಖ ಮಾಡುವಂತಾಗಿದೆ. ವರುಣ ಆಗಮನಕ್ಕೆ ರೈತರು ಕಾದು ಕುಳಿತಿದ್ದಾರೆ. ಮಳೆ ಬಾರದೇ ಹೋದಲ್ಲಿ ಬರಗಾಲ ಛಾಯೆ ಇನ್ನಷ್ಟೂ ಹೆಚ್ಚಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಬಹುದು. 

ಒಟ್ಟಿನಲ್ಲಿ ವರುಣನ ಮುನಿಸು ಕೋಪಕ್ಕೆ  ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಕಾಶದತ್ತ ಮುಖಮಾಡುತ್ತಾ ಯಾವಾಗ  ಮಳೆ ಬರುತ್ತೆ ಎಂದು ಜನರು ಕಾದು ಕುಳಿತಿದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News