ಬೆಂಗಳೂರು : ಮುಸ್ಕಾನ್ ಮುಗ್ಧ ಹುಡುಗಿ, ಈ ಘಟನೆ ಅತ್ಯಂತ ವಿಷಾದನೀಯ. ಭಯೋತ್ಪಾದಕ ಸಂಘಟನೆಗಳಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯ? ಅವರು ಮೂಲಭೂತವಾದಿಗಳಷ್ಟೆ ಅಲ್ಲ, ಮೂಲ ಭಯೋತ್ಪಾದಕರು. ಭಯೋತ್ಪಾದಕರು ಜನರಲ್ಲಿ ಭಯ ಹುಟ್ಟಿಸಲಷ್ಟೆ ಸಾಧ್ಯ, ಈ ನಿಟ್ಟಿನಲ್ಲಿ ಜನರ ಮುಗ್ಧತೆಯನ್ನು ಅಸ್ತ್ರವನ್ನಾಗಿ ಬಳಸುತ್ತಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಮಂಡ್ಯದ ಮುಸ್ಕಾನ್ ಹೇಳಿಕೆಗೆ ಅಲ್ ಖೈದಾ ಬೆಂಬಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್(K Sudhakar), ದುರದೃಷ್ಟವಶಾತ್ ಮುಸ್ಕಾನ್(Muskan) ಯಾಕೆ ಈ ರೀತಿ ಹೇಳಿಕೆ ಕೊಟ್ಟಳು ಅನ್ನೋದು ಗೊತ್ತಿಲ್ಲ. ನಾವು ಯಾವತ್ತು ಕಾನೂನು ಪಾಲನೆ ಮಾಡಬೇಕು. ನೆಲದ ಕಾನೂನನ್ನು ಗೌರಿಸಬೇಕು. ಜೀವನದಲ್ಲಿ ಶಿಸ್ತು ಮುಖ್ಯ. ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗೆ ಗೌರವ ಕೊಡಬೇಕು. ಭಾಷೆ, ಧರ್ಮ ಬದಿಗಿಟ್ಟು ಶಿಕ್ಷಣಕ್ಕೆ ಗೌರವ ಕೊಡಬೇಕು. ಎಲ್ಲದರಲ್ಲೂ ಒಗ್ಗಟ್ಟಿರಬೇಕು ಎಂದರು.
ಇದನ್ನೂ ಓದಿ : Bengaluru Karaga: ಬೆಂಗಳೂರಿನಲ್ಲಿ ಈ ಬಾರಿ ಜರುಗಲಿದೆ ಅದ್ದೂರಿ ಕರಗ ಉತ್ಸವ
ಧರ್ಮ, ಭಾಷೆ ಭಿನ್ನತೆ ನಡುವೆಯೂ ಏಕತೆ ಇರಬೇಕು. ನನಗೆ ಯಾವ ಧರ್ಮವನ್ನು ಟಾರ್ಗೆಟ್ ಮಾಡಲು ಇಷ್ಟವಿಲ್ಲ. ನಾನೊಬ್ಬ ಸೆಕ್ಯುಲರ್(Secular) ರಾಜಕಾರಣಿ. ಪ್ರತಿಯೊಬ್ಬರಿಗೂ ಅವರ ನಂಬಿಕೆಯನ್ನು ಆಚರಿಸಲು ಸಂವಿಧಾನ ಅವಕಾಶ ಕೊಟ್ಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ದೆಹಲಿ ಭೇಟಿ ಫಲಪ್ರದ, ಸಚಿವರಿಂದ ಸಕಾರಾತ್ಮಕ ಸ್ಪಂದನೆ : ಸಿಎಂ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.