ಬೆಂಗಳೂರು: ನಗರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿ ವಿಷಕಂಠನಾಗಿ ಈ ಸರ್ಕಾರದ ನೋವನ್ನು ನುಂಗುತ್ತಿದ್ದೇನೆ ಎಂದು ಕಣ್ಣೀರಿಟ್ಟ ಘಟನೆ ನಡೆದಿದೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ" ನೀವು ನಿಮ್ಮ ಅಣ್ಣಾ ಅಥವಾ ತಮ್ಮನೋ ಮುಖ್ಯಮಂತ್ರಿಯಾಗಿರುವುನೆಂದು ಸಂತಸದಿಂದರಬಹುದು ಆದರೆ ನಾನಲ್ಲ.ನಂಗೆ ಈ ಸಮಿಶ್ರ ಸರ್ಕಾರದ ನೋವೇನು ಎನ್ನುವುದು ಗೊತ್ತಿದೆ.ನಾನು ಒಂದು ರೀತಿಯಲ್ಲಿ ವಿಷಕಂಠನಾಗಿ ಈ ಸರ್ಕಾರದ ನೋವನ್ನು ನಾನು ನುಂಗುತ್ತಿದ್ದೇನೆ ಎಂದು ತಿಳಿಸಿದರು.
#WATCH: Karnataka CM HD Kumaraswamy breaks down at an event in Bengaluru; says 'You are standing with bouquets to wish me, as one of your brother became CM & you all are happy, but I'm not. I know the pain of coalition govt. I became Vishkanth&swallowed pain of this govt' (14.07) pic.twitter.com/cQ8f90KkFT
— ANI (@ANI) July 15, 2018
ಇತ್ತೀಚಿಗೆ ರಾಜ್ಯ ಬಜೆಟ್ ಮಂಡನೆಯಾದಂತಹ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಹಲವಾರು ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಯವರ ಬಜೆಟ್ ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.ಅಲ್ಲದೆ ಮುಖ್ಯಮಂತ್ರಿಗಳು ಕೇವಲ ಮೈಸೂರು ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದಾರೆ ಎಂದು ದೂರಿದ್ದರು. ಈ ಹಿಂದೆ ಕುಮಾರಸ್ವಾಮಿ ತಾವು ಸಾಂದರ್ಭಿಕ ಶಿಶು, ಕಾಂಗ್ರೆಸ್ ಪಕ್ಷದ ಮರ್ಜಿಯಲ್ಲಿ ಇದ್ದೇನೆ ಎಂದು ತಿಳಿಸಿದ್ದರು.