ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ..! ಉದ್ಯಮಿ ಮನೆಯ ತಿಜೋರಿ ದೋಚಿದ್ದ ಯುವತಿ ಅರೆಸ್ಟ್

ಆಕೆ ಮನೆ ಕೆಲಸಕ್ಕೆ ಅಂತಾ ಸೇರಿಕೊಂಡಿದ್ಳು.. ಜೊತೆಗೆ ಮಕ್ಕಳನ್ನ ನೋಡಿಕೊಳ್ತಿದ್ಳು.. ಇದ್ದಕ್ಕಿದ್ದಂತೆ ಆಕೆಯ ಕಣ್ಣು ಮನೆ ಮಾಲೀಕನ ತಿಜೋರಿ ಮೇಲೆ ಬಿದ್ದಿತ್ತು.‌. ಒಂದೊಂದೆ ಚಿನ್ನಾಭರಣ ಎಗರಿಸಿದ್ದಾಕೆ ಉಂಡ ಮನೆಗೆ ದ್ರೋಹ ಬಗೆದಿದ್ಳು.. ಇದು ಒಂದು ಕಡೆ ಆದ್ರೆ ಬೀಗ ಹಾಕಿದ ಮನೆಗೆ ಕನ್ನ ಹಾಕ್ತಿದ್ದ ಆಸಾಮಿ ಕೂಡ ಲಾಕ್ ಆಗಿದ್ದಾನೆ..

Written by - VISHWANATH HARIHARA | Edited by - Krishna N K | Last Updated : Jul 30, 2024, 04:46 PM IST
    • ಡೈಮಂಡ್ ಸರ.. ಚಿನ್ನದ ಓಲೆ.. ಡಿಫರೆಂಟ್ ಡಫರೆಂಟ್ ಉಂಗುರ..
    • ಮನೆಗೆಲಸದವಳಾಗಿ ಕೆಲಸ ಮಾಡ್ತಿದ್ದ ದಿವ್ಯ ಮಕ್ಕಳನ್ನು ನೋಡಿಕೊಳ್ತಿದ್ಳು.
    • ಮನೆಯವರ ನಂಬಿಕೆ ಕೂಡ ಗಳಿಸಿದ್ಳು ಆದ್ರೆ ಹಣದಾಸೆ ಯಾರನ್ನ ತಾನೆ ಬಿಡುತ್ತೆ ಹೇಳಿ..
ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ..! ಉದ್ಯಮಿ ಮನೆಯ ತಿಜೋರಿ ದೋಚಿದ್ದ ಯುವತಿ ಅರೆಸ್ಟ್ title=

ಬೆಂಗಳೂರು : ಡೈಮಂಡ್ ಸರ.. ಚಿನ್ನದ ಓಲೆ.. ಡಿಫರೆಂಟ್ ಡಫರೆಂಟ್ ಉಂಗುರ.. ಇದ್ಯಾವ್ದೊ ಚಿನ್ನದ ಅಂಗಡಿಯಲ್ಲ ಬದಲಾಗಿ ಇವತ್ತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಚಿನ್ನಾಭರಣವನ್ನು ಪ್ರದರ್ಶನಕ್ಕೆ ಇಟ್ಟಿದ್ರು.. ಇದರ ಹಿಂದೆ ಕಳ್ಳರ ಕೈಚಳಕದ ಕಹಾನಿ ಇದೆ‌.. ಅದನ್ನೇ ಒಂದೊಂದಾಗಿ ತೋರಿಸ್ತೀವಿ ನೋಡಿ..

ಹೌದು.. ಈ ಮೇಲಿನ ಫೋಟೊದಲ್ಲಿ ಕಾಣ್ತಿರೊ ಯುವತಿಯ ಹೆಸರು ದಿವ್ಯಾ 22 ವರ್ಷದ ಈಕೆ ನೀಲಸಂದ್ರ ನಿವಾಸಿ ಇನ್ನೂ ಈಕೆ ಮಂಜು ಮತ್ತು ಇವ್ನು ಜೋಯೆಲ್ ಇಬ್ರು ದಿವ್ಯಾ ಸಂಬಂಧಿಕರು. ಮಾರತ್ತಹಳ್ಳಿ ಸಮೀಪದ ಯಮಲೂರಿನಲ್ಲಿರು ದಿವ್ಯಶ್ರೀ ವಿಲ್ಲಾ ಒಂದರಲ್ಲಿ ಇರುವ ಉದ್ಯಮಿ ಮನೆಯಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡ್ತಿದ್ದ ದಿವ್ಯ ಮಕ್ಕಳನ್ನು ನೋಡಿಕೊಳ್ತಿದ್ಳು. 

ಇದನ್ನೂ ಓದಿ:ಸಿದ್ದರಾಮಯ್ಯ, BSY, ದೇವೇಗೌಡ್ರು & ಕುಮಾರಣ್ಣನಿಗೆ ಬರೀ ಮಕ್ಕಳದ್ದೇ ಚಿಂತೆ!: ಪ್ರತಾಪ್‌ ಸಿಂಹ

ಮನೆಯವರ ನಂಬಿಕೆ ಕೂಡ ಗಳಿಸಿದ್ಳು ಆದ್ರೆ ಹಣದಾಸೆ ಯಾರನ್ನ ತಾನೆ ಬಿಡುತ್ತೆ ಹೇಳಿ.. ಮಾಲೀಕರು ಹೊರಗೆ ಹೋದಾಗಲೆಲ್ಲ ಕಳೆದೊಂದು ವರ್ಷದಿಂದ ಮನೆಯಲ್ಲಿದ್ದ 50 ಲಕ್ಷ ಮೌಲ್ಯದ ಡೈಮಂಡ್ ಸರ, ಚಿನ್ನದ ಸರ, ಉಂಗುರ ಸೇರಿದಂತೆ ಒಡವೆಗಳನ್ನು ಕಳ್ಳತನ ಮಾಡ್ತಿದ್ಳು ಬಳಿಕ ಸಂಬಂಧಿಕರಾದ ಮಂಜು ಹಾಗೂ ಜೋಯೆಲ್ ನೆರವಿನಿಂದ ಅದನ್ನ ಮಾರಾಟ ಮಾಡಿಸ್ತಿದ್ಳು..

ಮಾಲೀಕರ ಗಮನಕ್ಕೆ ಬಂದ ಕೂಡಲೆ ಮನೆಯಲ್ಲಿ ಕೆಲಸ ಮಾಡ್ತಿದ್ದ ಏಳು ಜನರ ಮೇಲೆ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌‌. ಎಲ್ಲರ ವಿಚಾರಣೆ ನಡೆಸಿದಾಗ ಇದು ದಿವ್ಯ ಕೈಚಳಕ ಅನ್ನೋದು ಗೊತ್ತಾಗಿದೆ.. ಆರೋಪಿ ಮಹಿಳೆ ದಿವ್ಯಾಳನ್ನು ಬಂಧಿಸಿ ಆಕೆಯ ಮಾಹಿತಿ ಮೇಲೆ ಮಂಜು ಹಾಗು ಜೋಯೆಲ್ ವಿಚಾರಣೆ ನಡೆಸಿದಾಗ ಎಲ್ಲವನ್ನು ಬಾಯ್ಬಿಟ್ಟಿದ್ದಾರೆ. ಸದ್ಯ ಮೂವರನ್ನು ಬಂಧಿಸಿರೊ ಮಾರತ್ತಹಳ್ಳಿ ಪೊಲೀಸರು ಡೈಮಂಡ್ ನೆಕ್ಲೆಸ್ ಸೇರಿ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದ. ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News