Havildar Kashiray Bammanalli : ಹುತಾತ್ಮ ಯೋಧ ಕಾಶಿರಾಯ ಬಮ್ಮನಳ್ಳಿಗೆ "ಶೌರ್ಯಚಕ್ರ ಪ್ರಶಸ್ತಿ"..!

ಕನ್ನಡಿಗ ಯೋಧನೊಬ್ಬ ಪಡೆದಿರುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಬಮ್ಮನಳ್ಳಿ ಅವರ ಶೌರ್ಯ, ಸಾಹಸ, ಬಲಿದಾನ ಗಳಿಗೆ ಸಂದ ಗೌರವ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ.

Written by - Zee Kannada News Desk | Last Updated : May 11, 2022, 07:07 PM IST
  • ಹವಾಲ್ದಾರ್ ಕಾಶಿರಾಯ ಬಮ್ಮನಳ್ಳಿ ಅವರಿಗೆ ಭಾರತೀಯ ಸೇನೆಯ ಅತ್ಯಂತ ಗೌರವ ಪ್ರಶಸ್ತಿ
  • ಪಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕಾಶಿರಾಯ ಬಮ್ಮನಳ್ಳಿ
  • ಹವಾಲ್ದಾರ್ ಕಾಶಿರಾಯ ಬಮ್ಮನಳ್ಳಿ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ
Havildar Kashiray Bammanalli : ಹುತಾತ್ಮ ಯೋಧ ಕಾಶಿರಾಯ ಬಮ್ಮನಳ್ಳಿಗೆ "ಶೌರ್ಯಚಕ್ರ ಪ್ರಶಸ್ತಿ"..! title=

ವಿಜಯಪುರ :  ಜಿಲ್ಲೆಯ ಹವಾಲ್ದಾರ್ ಕಾಶಿರಾಯ ಬಮ್ಮನಳ್ಳಿ ಅವರಿಗೆ ಭಾರತೀಯ ಸೇನೆಯ ಅತ್ಯಂತ ಗೌರವ ಪ್ರಶಸ್ತಿಯಾದ ಶೌರ್ಯ ಚಕ್ರ ನೀಡಿ ಗೌರವಿಸಿದೆ.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಳೆದ ಜುಲೈನಲ್ಲಿ ಪಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ಜಿಲ್ಲೆಯ ಕಾಶಿರಾಯ ಬಮ್ಮನಳ್ಳಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : 'ಜನರೊಂದಿಗೆ ನಿಕಟವಾದ ಸಂಬಂಧವಿಟ್ಟು ಕೆಲಸ ಮಾಡಿ'

ಕನ್ನಡಿಗ ಯೋಧನೊಬ್ಬ ಪಡೆದಿರುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಬಮ್ಮನಳ್ಳಿ ಅವರ ಶೌರ್ಯ, ಸಾಹಸ, ಬಲಿದಾನ ಗಳಿಗೆ ಸಂದ ಗೌರವ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಬಮ್ಮನಳ್ಳಿ ಅವರ ಕುಟುಂಬಕ್ಕೆ ಸರ್ಕಾರ ನಿಯಮಾನುಸಾರ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News