ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ: ಮಾಜಿ ಪ್ರಧಾನಿ ಹೆಚ್‍ಡಿಡಿ

ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭ ಹಾರಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಜೀವನದಲ್ಲಿ ಗುರಿಯಷ್ಟೇ ಗುರುವೂ ಮುಖ್ಯ ಎಂದು ಹೇಳಿದ್ದಾರೆ.

Last Updated : Sep 5, 2019, 02:17 PM IST
ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ: ಮಾಜಿ ಪ್ರಧಾನಿ ಹೆಚ್‍ಡಿಡಿ title=

ಬೆಂಗಳೂರು: ದೇಶಾದ್ಯಂತ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದಂದು ಪ್ರತಿ ವರ್ಷ ಶಿಕ್ಷಕರಿಗೆ ಗೌರವ ಸಮರ್ಪಿಸಲಾಗುತ್ತದೆ. 

ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭ ಹಾರಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಜೀವನದಲ್ಲಿ ಗುರಿಯಷ್ಟೇ ಗುರುವೂ ಮುಖ್ಯ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದೇವೇಗೌಡರು, "ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ. ನಮ್ಮೆಲ್ಲರ ಗುರಿಯೆಡೆಗೆ ಕೈ ಹಿಡಿದು ನಡೆಸುವ ಎಲ್ಲ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಆದರ್ಶ ಶಿಕ್ಷಕರಾದ ಸರ್ವೆಪಲ್ ರಾಧಾಕೃಷ್ಣನ್ ಅವರನ್ನು ಈ ಸಮಯದಲ್ಲಿ ಸ್ಮರಿಸೋಣ" ಎಂದು ಹೇಳಿದ್ದಾರೆ.

Trending News