HD Lamani Passed Away: ಮಾಜಿ ಸಚಿವ ಎಚ್.ಡಿ.ಲಮಾಣಿ ವಿಧಿವಶ

Dr.HD Lamani Passed Away: ಮಾಜಿ ಸಚಿವ ಹಾಗೂ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು.

Written by - Puttaraj K Alur | Last Updated : Jan 17, 2023, 12:44 PM IST
  • ಮಾಜಿ ಸಚಿವ ಮತ್ತು ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶ
  • ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಚ್.ಡಿ.ಲಮಾಣಿಯವರಿಗೆ 93 ವರ್ಷ ವಯಸ್ಸಾಗಿತ್ತು
  • ಶಿಗ್ಗಾವಿ ತಾಲೂಕಿನ ದುಂಡಸಿ ತಾಂಡದ ಸ್ವಂತ ಜಮೀನಿನಲ್ಲಿ ಇಂದು ಅಂತ್ಯಸಂಸ್ಕಾರ
HD Lamani Passed Away: ಮಾಜಿ ಸಚಿವ ಎಚ್.ಡಿ.ಲಮಾಣಿ ವಿಧಿವಶ title=
ಮಾಜಿ ಸಚಿವ ಎಚ್.ಡಿ.ಲಮಾಣಿ ವಿಧಿವಶ

ಹಾವೇರಿ: ಮಾಜಿ ಸಚಿವ ಹಾಗೂ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು.

ಸೋಮವಾರ ರಾತ್ರಿ 8.40ರ ಹೊತ್ತಿಗೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ದುಂಡಶಿ ತಾಂಡಾದ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಎಚ್.ಡಿ.ಲಮಾಣಿಯವರು ಪತ್ನಿ, 3 ಜನ ಪುತ್ರರು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸ್ವಾಗ್ರಾಮ ದುಂಡಸಿ ತಾಂಡದ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಮೃತರ ಸಂಬಂಧಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: “ರಾಮಮಂದಿರ ಹೆಸರಿನಲ್ಲಿ ಆಗಲಿ ರಾವಣ ಹೆಸರಿನಲ್ಲಿ ಆಗಲಿ ಒಟ್ನಲ್ಲಿ ಒಳ್ಳೆಯದು ಮಾಡಿ”

ಬಿಜಾಪುರ ಶಾಲೆಯಲ್ಲಿ ಶಿಕ್ಷಕರಾಗಿ ಸವೆ ಸಲ್ಲಿಸಿದ್ದ ಡಾ.ಎಚ್.ಡಿ.ಲಮಾಣಿಯವರು, ಧಾರವಾಡದ ಕೆಸಿಡಿಯಲ್ಲಿ ಹಿಂದಿ ಉಪನ್ಯಾಸಕರಾಗಿದ್ದರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಭಾಗದ ಮಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.

ಕಾಂಗ್ರೆಸ್‌ ಪಕ್ಷ ಸೇರಿದ್ದ ಎಚ್.ಡಿ.ಲಮಾಣಿಯವರು ಬ್ಯಾಡಗಿ ಮೀಸಲು ಕ್ಷೇತ್ರದಿಂದ 1983 ಹಾಗೂ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಎಸ್.ಬಂಗಾರಪ್ಪನವರ ಸರ್ಕಾರದಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿದ್ದ ಅವರು, ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಕ್ಕರೆ ಮತ್ತು ಶಿಕ್ಷಣ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನ

ಸಾಗರ ಕ್ಷೇತ್ರದ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನರಾಗಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ‘ಸಾಗರ ಕ್ಷೇತ್ರದ ಮಾಜಿ ಶಾಸಕ, ಆತ್ಮೀಯರು ಆಗಿದ್ದ ಎಲ್.ಟಿ.ತಿಮ್ಮಪ್ಪ ಹೆಗಡೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಕ್ಯಾಂಪ್ಕೊ ಸೇರಿದಂತೆ ಅಡಿಕೆಬೆಳಗಾರರ ಅನೇಕ ಸಂಘಟನೆಗಳ ಸ್ಥಾಪನೆಗೆ ಶ್ರಮಿಸಿ, ಸಹಕಾರಿ ಧುರೀಣರೆಂದು ಖ್ಯಾತಿ ಪಡೆದಿದ್ದ ಹೆಗಡೆಯವರ ನಿಧನ ನಾಡಿಗೆ ತುಂಬಿಲಾರದ ನಷ್ಟವಾಗಿದೆ. ಮೃತರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಧಿವೇಶನದ ಬಳಿಕ ನಾಲ್ಕು ಕಡೆ ರಥಯಾತ್ರೆ : ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News