ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಿ.ಕೆ.ಚವ್ಹಾಣ 75ನೇ ವಯಸ್ಸಿನಲ್ಲಿ 2ನೇ ವಿವಾಹವಾಗಿದ್ದಾರೆ. 75ರ ಹರೆಯದಲ್ಲೂ ಕರಗದ ಹುಮ್ಮಸ್ಸಿನಂತೆ ಮಾಜಿ ಮೇಯರ್ ಡಿ.ಕೆ.ಚವ್ಹಾಣ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಇದನ್ನೂ ಓದಿ: ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್
ಮೊದಲ ಪತ್ನಿ ಶಾರದಾ ಕಳೆದ 3 ತಿಂಗಳ ಹಿಂದೆ ತೀರಿಹೋಗಿದ್ದರು. ಪತ್ನಿ ತೀರಿದ 3 ತಿಂಗಳ ನಂತರ ಪತ್ನಿಯ ಅಕ್ಕನನ್ನೇ ಡಿ.ಕೆ.ಚವ್ಹಾಣ ವಿವಾಹವಾಗಿದ್ದಾರೆ. ಮಾಜಿ ಮೇಯರ್ ಮದುವೆ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಭಾಗಿಯಾಗಿದ್ದರು.
ಇದನ್ನೂ ಓದಿ: ಮಗು ಬಿಟ್ಟು ವಿವಾಹಿತನ ಜೊತೆ ಶಿಕ್ಷಕಿ ಎಸ್ಕೇಪ್! ಲವ್ ಜಿಹಾದ್ ಅನುಮಾನ
ತಮ್ಮ ಮನೆಯ ಮುಂದೆಯೇ ನಡೆದ ವಿವಾಹದಲ್ಲಿ ಪತ್ನಿ ಅನಸೂಯಾ ಅವರ ಕನ್ಯಾ ಸೆರೆಯನ್ನು ಡಿ.ಕೆ.ಚವ್ಹಾಣ ಬಿಡಿಸಿದ್ದಾರೆ. 75ರ ಪ್ರಾಯದಲ್ಲಿಯೂ ಮಾಜಿ ಮೇಯರ್ ಅವರು 2ನೇ ವಿವಾಹವಾಗಿರುವ ಸುದ್ದಿಯು ಇದೀಗ ಸಖತ್ ಸೌಂಡ್ ಮಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.