ಈ ಸ್ಥಳದಲ್ಲಿ ಅಬ್ಬರದ ಹೊಸವರ್ಷಾಚರಣೆ ಮಾಡಿದರೆ ಕಠಿಣ ಕ್ರಮ; ಎಲ್ಲಿ ಗೊತ್ತಾ?

ಹೊಸ ವರ್ಷ ಆಚರಣೆಯಲ್ಲಿ ಅಬ್ಬರದ ಸಂಗೀತ, ಧ್ವನಿವರ್ಧಕ, ಪಟಾಕಿ ಸಿಡಿಸುವುದನ್ನು ಅರಣ್ಯ ಇಲಾಖೆ ನಿಷೇಧಿಸಿದ್ದು, ಆದಷ್ಟು ಶಾಂತ ರೀತಿಯಲ್ಲಿ ಆಚರಣೆ ಮಾಡುವಂತೆ ಸೂಚನೆ ನೀಡಿದೆ. 

Last Updated : Dec 25, 2018, 12:23 PM IST
ಈ ಸ್ಥಳದಲ್ಲಿ ಅಬ್ಬರದ ಹೊಸವರ್ಷಾಚರಣೆ ಮಾಡಿದರೆ ಕಠಿಣ ಕ್ರಮ; ಎಲ್ಲಿ ಗೊತ್ತಾ? title=

ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹೊಸ ವರ್ಷ ಆಚರಣೆಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. 

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳು ಸೂಕ್ಷ್ಮ ವಲಯಕ್ಕೆ ಸೇರುವುದರಿಂದ ಇದರ ಸುತ್ತಮುತ್ತ ಇರುವ ಹಲವು ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ಹೊಸ ವರ್ಷ ಆಚರಣೆಗಾಗಿ ಬೇರೆ ಬೇರೆ ಸ್ಥಳಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಅಬ್ಬರದ ಸಂಗೀತ, ಧ್ವನಿವರ್ಧಕ, ಪಟಾಕಿ ಸಿಡಿಸುವುದನ್ನು ಅರಣ್ಯ ಇಲಾಖೆ ನಿಷೇಧಿಸಿದ್ದು, ಆದಷ್ಟು ಶಾಂತ ರೀತಿಯಲ್ಲಿ ಹೊಸ ವರ್ಷ ಆಚರಣೆ ಮಾಡುವಂತೆ ಸೂಚನೆ ನೀಡಿದೆ. 

ಅಬ್ಬರದ ಸಂಗೀತ ಮತ್ತು ಗದ್ದಲಗಳಿಂದ ಕಾಡು ಪ್ರಾಣಿ ಪಕ್ಷಿಗಳು ಭಯಬೀಳುವುದರಿಂದ ಮತ್ತು ಹೆದರಿ ಬೇರೆ ಸ್ಥಳಗಳಿಗೆ ಹೋಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. 
 

Trending News