ಮೈಸೂರಿನಲ್ಲಿ ಕಾಲಾ ಚಿತ್ರ ಪ್ರದರ್ಶಿಸದಿರಲು ಚಿತ್ರಮಂದಿರಗಳ ಮಾಲೀಕರು ನಿರ್ಧಾರ

ಮೈಸೂರಿನ ಚಿತ್ರಮಂದಿರಗಳ ಮಾಲೀಕರು ಕಾಲಾ ಚಿತ್ರ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ. 

Last Updated : Jun 7, 2018, 12:31 PM IST
ಮೈಸೂರಿನಲ್ಲಿ ಕಾಲಾ ಚಿತ್ರ ಪ್ರದರ್ಶಿಸದಿರಲು ಚಿತ್ರಮಂದಿರಗಳ ಮಾಲೀಕರು ನಿರ್ಧಾರ title=

ಮೈಸೂರು: ತಮಿಳಿನ 'ಕಾಲಾ' ಚಿತ್ರ ಪ್ರದರ್ಶನಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೈಸೂರಿನ ಚಿತ್ರಮಂದಿರಗಳ ಮಾಲೀಕರು ಚಿತ್ರ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ. 

ಚಿತ್ರ ಪ್ರದರ್ಶನಕ್ಕೆ ಮುಂದಾದರೆ ಅಹಿತಕರ ಘಟನೆಗಳನ್ನು ಎದುರಿಸಬೇಕಕಾಗಬಹುದು ಎಂಬ ಮುಂದಾಲೋಚನೆಯಿಂದ ಎಲ್ಲಾ ಚಿತ್ರಮಂದಿರಗಳ ಮಾಲೀಕರು ಒಗ್ಗಟ್ಟಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. 

ಮೈಸೂರಿನ ಲಕ್ಷ್ಮಿ, ಗಾಯತ್ರಿ, ಐನಾಕ್ಸ್, ಡಿಆರ್ ಸಿ ಮೊದಲಾದೆಡೆ ಇಂದು ಕಾಲಾ ಚಿತ್ರ ಪ್ರದರ್ಶನಗೊಳ್ಳಬೇಕಿತ್ತು. ಆದರೆ, ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಲೈಸನ್ಸ್ ಪಡೆದಿದ್ದರೂ, ತಾತ್ಕಾಲಿಕವಾಗಿ ಚಿತ್ರ ಪ್ರದರ್ಶಿಸದಿರಲು ಮಾಲೀಕರು ನಿರ್ಧರಿಸಿದ್ದಾರೆ. 

Trending News