ಮಂಗಳಪೇಟೆ ಮಸೀದಿ ವಠಾರದಲ್ಲಿ ಫಾಝಿಲ್ ಅಂತ್ಯಸಂಸ್ಕಾರ

 ಬೆಳಗ್ಗೆ ಮೃತದೇಹವನ್ನು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಮಂಗಳಪೇಟೆಯಲ್ಲಿರುವ  ಫಾಝಿಲ್ ನಿವಾಸಕ್ಕೆ ತರಲಾಗಿತ್ತು. ನಂತರ ಮೃತದೇಹವನ್ನು ಮಂಗಳಪೇಟೆ ಮುಹಿಯುದ್ದೀನ್ ಮಸೀದಿಗೆ ಕೊಂಡೊಯ್ಯಲಾಗಿತ್ತು. 

Written by - Zee Kannada News Desk | Last Updated : Jul 29, 2022, 12:25 PM IST
  • ಮುಹಿಯುದ್ದೀನ್ ಮಸೀದಿ ವಠಾರದಲ್ಲಿ ಫಾಝಿಲ್ ಅಂತ್ಯಸಂಸ್ಕಾರ
  • ಸಾವಿರಾರು ಮಂದಿಯಿಂದ ಫಾಝಿಲ್ ಅಂತಿಮ ದರ್ಶನ
  • ಮಸೀದಿ ವಠಾರದಲ್ಲಿ ಫಾಝಿಲ್ ದಫನ ಕಾರ್ಯ
ಮಂಗಳಪೇಟೆ ಮಸೀದಿ ವಠಾರದಲ್ಲಿ ಫಾಝಿಲ್ ಅಂತ್ಯಸಂಸ್ಕಾರ  title=
Fazil murder update (file photo)

ಮಂಗಳೂರು : ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದ ಫಾಝಿಲ್ ಅಂತ್ಯ ಸಂಸ್ಕಾರ ಅವರ ಮನೆ ಸಮೀಪದ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೆರವೇರಿತು. ಸಾವಿರಾರು ಜನರ ಸಮ್ಮುಖದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು  ನೆರವೇರಿಸಲಾಯಿತು.  

ಇದಕ್ಕೂ ಮುನ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಬೆಳಗ್ಗೆ ಮೃತದೇಹವನ್ನು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಮಂಗಳಪೇಟೆಯಲ್ಲಿರುವ  ಫಾಝಿಲ್ ನಿವಾಸಕ್ಕೆ ತರಲಾಗಿತ್ತು. ನಂತರ ಮೃತದೇಹವನ್ನು ಮಂಗಳಪೇಟೆ ಮುಹಿಯುದ್ದೀನ್ ಮಸೀದಿಗೆ ಕೊಂಡೊಯ್ಯಲಾಗಿತ್ತು. 
ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಮಂದಿ ಮಸೀದಿ ವಠಾರದಲ್ಲಿ  ಫಾಝಿಲ್ ಅಂತಿಮ ದರ್ಶನ ಪಡೆದರು. 

ಇದನ್ನೂ ಓದಿ : ಮಂಗಳೂರಿನಲ್ಲಿ ನಿಷೇಧಾಜ್ಞೆ: ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಡಿಸಿ

ಮಯ್ಯಿತ್ ನಮಾಝ್ ಬಳಿಕ ಮಸೀದಿ ವಠಾರದಲ್ಲಿ  ಫಾಝಿಲ್  ದಫನ ಕಾರ್ಯ ನೆರವೇರಿಸಲಾಯಿತು. ಯಾವುದೇ ಅಹಿತಕರ ಘಟನೇ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 

ಕಳೆದ ರಾತ್ರಿ ಸುರತ್ಕಲ್ ನಲ್ಲಿ ದುಷ್ಕರ್ಮಿಗಳು  ಫಾಝಿಲ್  ಹತ್ಯೆಗೈದಿದ್ದರು. ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಭೇಟಿ ಮಾಡಳು ಬಂದಿದ್ದ ವೇಳೆ ಹತ್ಯೆ ನಡೆದಿತ್ತು. ಫಾಝಿಲ್   ಅಂಗಡಿಯಿಂದ ಹೊರ‌ಬರುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ  ಹತ್ಯೆ ಮಾಡಿದ್ದರು. 

ಇದನ್ನೂ ಓದಿ : Vegetable Price: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಳ! ಇಲ್ಲಿದೆ ನೋಡಿ ತರಕಾರಿಗಳ ದರ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News