ತೀರ್ಪಿನ ವಿರುದ್ಧ ಪ್ರತಿಭಟನೆ ಅಲ್ಲ, ಸ್ವಲ್ಪ ಅಸಮಾಧಾನ ಆಗಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ರಾಜ್ಯ ಹೈಕೋರ್ಟ್ (High Court) ಹಿಜಾಬ್ ಕುರಿತು ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಜೊತೆಗೆ ರಾಜ್ಯ ಬಂದ್ ಕರೆ ಕೊಟ್ಟ ಕೆಲ ಮುಸ್ಲಿಂ ಸಂಘಟನೆಗಳ ನಡೆಯ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಸಲಾಯಿತು.

Written by - Prashobh Devanahalli | Edited by - Chetana Devarmani | Last Updated : Mar 17, 2022, 02:29 PM IST
  • ರಾಜ್ಯ ಹೈಕೋರ್ಟ್ ಹಿಜಾಬ್ ಕುರಿತು ನೀಡಿರುವ ತೀರ್ಪು
  • ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ
  • ರಾಜ್ಯ ಬಂದ್ ಕರೆ ಕೊಟ್ಟ ಕೆಲ ಮುಸ್ಲಿಂ ಸಂಘಟನೆಗಳು
  • ವಿಧಾನಸಭೆ ಕಲಾಪದಲ್ಲಿ ಚರ್ಚೆ
ತೀರ್ಪಿನ ವಿರುದ್ಧ ಪ್ರತಿಭಟನೆ ಅಲ್ಲ, ಸ್ವಲ್ಪ ಅಸಮಾಧಾನ ಆಗಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ title=
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಹೈಕೋರ್ಟ್ (High Court) ಹಿಜಾಬ್ ಕುರಿತು ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಜೊತೆಗೆ ರಾಜ್ಯ ಬಂದ್ ಕರೆ ಕೊಟ್ಟ ಕೆಲ ಮುಸ್ಲಿಂ ಸಂಘಟನೆಗಳ ನಡೆಯ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಂದ್, ಪ್ರತಿಭಟನೆ ಮಾಡೋದು ಅವರ ಹಕ್ಕು. ತೀರ್ಪಿನ ವಿರುದ್ಧ ಪ್ರತಿಭಟನೆ ಅಲ್ಲ, ಸ್ವಲ್ಪ ಅಸಮಾಧಾನ ಆಗಿದೆ ಹಾಗಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ (Protest) ಮಾಡಲಿ ಎಂದು ಹೇಳಿದರು.

ಇದನ್ನೂ ಓದಿ:"ಜೇಮ್ಸ್" ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಒತ್ತಾಯ : ಸರ್ಕಾರ ನೀಡಲಿದ್ಯಾ ಗುಡ್ ನ್ಯೂಸ್?

ಪ್ರತಿಭಟನೆ ತೀರ್ಪು ಧಿಕ್ಕರಿಸಿ ಎಂದು ಅವರು ಹೇಳಲಿಲ್ಲ. ಸುಪ್ರೀಂ ಗೆ ಮೇಲ್ಮನವಿ ಹೋಗಬಹುದು, ಹೋಗಿದ್ದಾರೆ. ಸುಪ್ರೀಂಗೆ (Supreme court) ಹೋಗಲು ಎಲ್ಲರಿಗೂ ಅವಕಾಶ ಇದೆ ಎಂದು ತಿಳಿಸಿದರು.

ಉಡುಪಿ ಶಾಸಕ (Udupi MLA) ರಘುಪತಿ ಭಟ್ ಈ ವಿಷಯ ಚರ್ಚೆ ಆರಂಭಿಸಿ, ಹಿಜಾಬ್ ಬಗ್ಗೆ ತೀರ್ಪು ಬಂದಿದೆ. ತೀರ್ಪು ಪ್ರಶ್ನಿಸಿ ಸುಪ್ರೀಂ ಗೆ ಹೋಗಲು ಅವಕಾಶ ಇದೆ. ಅವರು ಹೋಗಬಹುದು. ಇಂಥವರ ಮೇಲೆ ಕ್ರಮ ಆಗಬೇಕು ಎಂದರು.

ಇದಕ್ಕೆ ಧ್ವನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar), ಕೋರ್ಟ್ ಆದೇಶದ ವಿರುದ್ಧ ಹೋರಾಟ ಮಾಡೋದು ಎಂದರೆ ಏನ್ ಅರ್ಥ? ಬೇರೆ ಯಾವುದೇ ವಿಚಾರದ ಮೇಲೆ ಪ್ರತಿಭಟನೆ ಸರಿ.ಆದ್ರೆ ಬಂದ್ ಮಾಡೋದು ಸರಿಯಲ್ಲ.ಕೋರ್ಟ್ ತೀರ್ಪು ಒಪ್ಪಲ್ಲ ಎಂದ್ರೆ ಎನ್ ಅರ್ಥ.ಅವರ ಮೇಲೆ ಕ್ರಮ ಆಗಬೇಕು ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋರ್ಟ್ ತೀರ್ಪು (Hijab Verdict) ಒಪ್ಪಬೇಕು ಸರಿ. ಆದ್ರೆ ಶಾಂತಿಯುತವಾಗಿ ಬಂದ್ ಮಾಡಿದ್ರೆ ಸರ್ಕಾರ ನಿಲ್ಲಿಸೋಕೆ ಆಗತ್ತಾ? ತೀರ್ಪು ಒಪ್ಪದೇ ಮೇಲ್ಮನವಿ ಹಾಕೋದು, ಹೀಗಿದ್ದಾಗ ತೀರ್ಪು ಒಪ್ಪಿಲ್ಲ ಎಂದೇ ಅರ್ಥ ಅಲ್ವೆ. ಈಗ ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ ತಪ್ಪೇನಿದೆ ಎಂದರು. 

ಇದನ್ನೂ ಓದಿ:ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

ಸಿದ್ದರಾಮಯ್ಯ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸಿ.ಟಿ ರವಿ (CT Ravi), ನಾನು ವಕೀಲ ಅಲ್ಲ. ಸಿದ್ದರಾಮಯ್ಯ ವಕೀಲರು. ಹಿಜಾಬ್ ತೀರ್ಪು ಒಪ್ಪದೇ ಮೇಲ್ಮನವಿ ಹಾಕಲು ಅವಕಾಶ ಇದೆ. ಆದ್ರೆ ಶಿಕ್ಷಣ ವ್ಯವಸ್ಥೆ ಹಾಳು ಮಾಡೋಕೆ ಅವಕಾಶ ಉಂಟಾ? ಅಲ್ಲಿಯ ವಾತಾವರಣ ಹಾಳು ಮಾಡೋದು ಸರಿಯೆ? ಇದರಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಹಾಪಾಪ ಎಂದು ಹರಿಹಾಯ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News