ಬೆಂಗಳೂರು: ಕೊರೊನಾ ಮತ್ತು ಒಮಿಕ್ರಾನ್ ರೂಪಾಂತರಿ ವೈರಸ್(Omicron Variant) ಎಫೆಕ್ಟ್ ನೇರವಾಗಿ ಕಲ್ಯಾಣ ಮಂಟಪಗಳಿಗೆ ಬುಕ್ಕಿಂಗ್ ಮೇಲೆ ಪರಿಣಾಮ ಬೀರಿವೆ. ಪರಿಣಾಮ ಸುಮಾರು ಶೇ.40ರಷ್ಟು ಬುಕ್ ಆಗಿದ್ದ ಮಂಟಪಗಳು ಕ್ಯಾನ್ಸಲ್ ಆಗಿವೆ ಎಂದು ಗೌರಿ ಶಂಕರ ಕಲ್ಯಾಣ ಮಂಟಪ ಮಾಲೀಕ ವಾಸನ್ ತಿಳಿಸಿದರು.
ಕಳೆದೆರಡು ವರ್ಷದಿಂದ ಕಲ್ಯಾಣ ಮಂಟಪಗಳಿಗೆ(Kalyana Mantapa Bookings) ತೀವ್ರ ಹೊಡೆತ ಬಿದ್ದಿದೆ. ಈ ಬಾರಿಯೂ ಮದುವೆಗೆ ಅಡ್ಡಿಯಾದ ಕೊರೊನಾ, ಒಮಿಕ್ರಾನ್ ಕಳೆದ 2 ವರ್ಷಗಳಿಂದ ಅದ್ದೂರಿ ಮದುವೆ ಕಾಯ್ತಿದ್ದವರಿಗೆ ಮತ್ತೆ ನಿರಾಸೆ ಆಗಿದೆ ಎಂದರು.
ಇದನ್ನೂ ಓದಿ: ಪಾದಯಾತ್ರೆ ತಡೆಗೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ತೀರ್ಮಾನ!
ಜನ ಸೇರಲು ನಿರ್ಬಂಧ; ಕಲ್ಯಾಣ ಮಂಟಪ ಮತ್ತೆ ಲಾಸ್
ಜ.4ರ ಸರ್ಕಾರದ ಆದೇಶದ ಪ್ರಕಾರ ಸೀಮಿತ ಜನರಿಗೆ ಅವಕಾಶ ನೀಡಲಾಗಿದ್ದು, ಕಲ್ಯಾಣ ಮಂಟಪ(Kalyana Mantapa Bookings)ಗಳಲ್ಲಿ 100 ಜನ ಹಾಗೂ ಹೊರಾಂಗಣ ಮದುವೆಗೆ 200 ಜನರಿಗಷ್ಟೇ ಅನುಮತಿ ನೀಡಿದೆ. ಸರ್ಕಾರದ ಹೊಸ ಆದೇಶ ಬೆನ್ನಲ್ಲೇ ಕಲ್ಯಾಣ ಮಂಟಪಗಳ ಬುಕ್ಕಿಂಗ್ ರದ್ದು ಆಗಿವೆ ಎಂದು ತಿಳಿದುಬಂದಿದೆ.
3-4 ತಿಂಗಳ ಮುಂಚೆಯೇ ಕಲ್ಯಾಣ ಮಂಟಪ ಬುಕ್ಕಿಂಗ್
ಶೇ.40ರಷ್ಟು ಮದುವೆಗಳ ಬುಕ್ಕಿಂಗ್ ಕ್ಯಾನ್ಸಲ್ ಆಗಿವೆ ಎಂದು ಕಲ್ಯಾಣ ಮಂಟಪ(Kalyana Mantapa Bookings) ಮಾಲೀಕರು ಮಾಹಿತಿ ನೀಡಿದರು. ಕೆಲವರು ವೀಕೆಂಡ್ ಕರ್ಫ್ಯೂ(Weekend Curfew) ಮುಗಿಯುವ ತನಕ ಮದುವೆ ಶುಭಕಾರ್ಯ ಮುಂದೂಡಿಕೆ ಮಾಡಿದ್ದಾರೆ. ನಮಗೆ ಬಂದ ಬುಕಿಂಗ್ ನಲ್ಲಿ ಶೇ.60ರಷ್ಟು ಮದುವೆಗಳ ದಿನಾಂಕ ಮುಂದೂಡಲಾಗಿದೆ. ಕುಟುಂಬಸ್ಥರು ಪರಿಸ್ಥಿತಿ ನೋಡಿ ದಿನಾಂಕ ತಿಳಿಸುತ್ತೇವೆ ಎನ್ನುತ್ತಿದ್ದಾರೆ. ಈ ರೀತಿ ಕ್ರಮಗಳು ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಧರ್ನುಮಾಸ ಹಿನ್ನೆಲೆ ಯಾವುದೇ ಮದುವೆ ಕಾರ್ಯಕ್ರಮಗಳಿಲ್ಲ. ಜ.13ರವರೆಗೆ ಧರ್ನುಮಾಸ ಇದೆ. ಜ.14ರಿಂದ ಸಂಕ್ರಾಂತಿ ಹಬ್ಬದಿಂದ ಶುಭ ಕಾರ್ಯಗಳು ಮದುವೆಗಳ ಸೀಸನ್ ಶುರು ಆಗಲಿದ್ದು, ಮಾರ್ಚ್ 31ರವರೆಗೂ ಮದುವೆ ಮಾಸ ಇರಲಿದೆ.
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಯುವತಿಯರಿಗೆ ವಂಚನೆ.. ಆರೋಪಿ ಬಂಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.