Benglauru: ಬೆಂಗಳೂರಿನ ಬೋರ್ಡಿಂಗ್ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್

ಸೋಂಕಿತ ವಿದ್ಯಾರ್ಥಿಗಳಲ್ಲಿ 14 ಮಂದಿ ತಮಿಳುನಾಡಿಗೆ ಸೇರಿದವರು ಮತ್ತು ಉಳಿದವರು ಕರ್ನಾಟಕದ ವಿವಿಧ ಭಾಗಗಳಿಂದ ಬಂದವರು ಎಂದು ತಿಳಿದುಬಂದಿದೆ.

Written by - Yashaswini V | Last Updated : Sep 29, 2021, 09:20 AM IST
  • ಸೋಂಕಿತ ವಿದ್ಯಾರ್ಥಿಗಳಲ್ಲಿ 14 ಮಂದಿ ತಮಿಳುನಾಡಿಗೆ ಸೇರಿದವರು ಮತ್ತು ಉಳಿದವರು ಕರ್ನಾಟಕದ ವಿವಿಧ ಭಾಗಗಳಿಂದ ಬಂದವರು.
  • ವಿದ್ಯಾರ್ಥಿಗಳು 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿದ್ದಾರೆ.
  • ಶಾಲೆಯಲ್ಲಿ 22 ಶಿಕ್ಷಕರು ಸೇರಿದಂತೆ 57 ಸಿಬ್ಬಂದಿ ಇದ್ದಾರೆ ಮತ್ತು ಎಲ್ಲರೂ ಕರೋನಾ ಲಸಿಕೆ (Corona Vaccine) ಪಡೆದಿದ್ದಾರೆ
Benglauru: ಬೆಂಗಳೂರಿನ ಬೋರ್ಡಿಂಗ್ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್ title=
ಸಿಲಿಕಾನ್ ಸಿಟಿಯ ಬೋರ್ಡಿಂಗ್ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು

ಬೆಂಗಳೂರು: Coronavirus Latest Update- ಪ್ರಾಥಮಿಕ ಶಾಲೆಗಳನ್ನು ತೆರೆಯುವ ವರದಿಗಳ ಮಧ್ಯೆ ಬೆಂಗಳೂರಿನ ವಸತಿ ಶಾಲೆಯೊಂದರಲ್ಲಿ 60 ವಿದ್ಯಾರ್ಥಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ವರದಿ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಬೆಂಗಳೂರಿನ ಶ್ರೀ ಚೈತನ್ಯ ಬಾಲಕಿಯರ ವಸತಿ ಶಾಲೆಯ (Sri Chaitanya Girls’ Residential School) ವಿದ್ಯಾರ್ಥಿಗಳು ಭಾನುವಾರ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ. 

ಇದನ್ನೂ ಓದಿ- ಕಾಂಗ್ರೆಸ್‌ ಪಕ್ಷದ ಇತಿಹಾಸವೇ ನಕಲಿ ಗಾಂಧಿಗಳ ಗುಲಾಮಗಿರಿಯದ್ದು: ಬಿಜೆಪಿ ಟೀಕೆ

ಗಮನಾರ್ಹವಾಗಿ, ಕರೋನಾ ಸೋಂಕಿಗೆ ಒಳಗಾಗಿರುವ 60 ವಿದ್ಯಾರ್ಥಿಗಳಲ್ಲಿ (Boarding School Students Tested Covid-19 Positive) ಇಬ್ಬರಿಗಷ್ಟೇ ರೋಗಲಕ್ಷಣಗಳಿದ್ದು, ಉಳಿದ 58 ವಿದ್ಯಾರ್ಥಿಗಳಿಗೆ ಯಾವುದೇ ರೋಗಲಕ್ಷಣಗಳು ಇಲ್ಲ ಎಂದು ತಿಳಿದುಬಂದಿದೆ. ಲಕ್ಷಣರಹಿತ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿರುವ ಪ್ರತ್ಯೇಕ ಸೌಲಭ್ಯದಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಸೋಂಕಿತ ವಿದ್ಯಾರ್ಥಿಗಳಲ್ಲಿ 14 ಮಂದಿ ತಮಿಳುನಾಡಿಗೆ ಸೇರಿದವರು ಮತ್ತು ಉಳಿದವರು ಕರ್ನಾಟಕದ ವಿವಿಧ ಭಾಗಗಳಿಂದ ಬಂದವರು. ಈ ಎಲ್ಲಾ ವಿದ್ಯಾರ್ಥಿಗಳು 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಶಾಲೆಯಲ್ಲಿ 22 ಶಿಕ್ಷಕರು ಸೇರಿದಂತೆ 57 ಸಿಬ್ಬಂದಿ ಇದ್ದಾರೆ ಮತ್ತು ಎಲ್ಲರೂ ಕರೋನಾ ಲಸಿಕೆ (Corona Vaccine) ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ- ಈ ಬಾರಿ ದಸರಾ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆಯ್ಕೆ

480 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮಾದರಿಗಳನ್ನು ಕೋವಿಡ್ -19 ಪರೀಕ್ಷೆಗಾಗಿ (Covid-19 Test) ಕಳುಹಿಸಲಾಗಿದೆ. ವಾಸ್ತವವಾಗಿ ಬೋರ್ಡಿಂಗ್ ಶಾಲೆಯಲ್ಲಿ (Boarding School) ವಿದ್ಯಾಭ್ಯಾಸ ಮಾಡುತ್ತಿರುವ ಬಳ್ಳಾರಿ ಮೂಲದ ವಿದ್ಯಾರ್ಥಿಗೆ ಕರೋನಾ ರೋಗಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಅವರಿಗೆ ಕೋವಿಡ್ -19 ಪರೀಕ್ಷೆ ಮಾಡಿಸಲಾಯಿತು. ವರದಿಗಳು ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಉಳಿದ ವಿದ್ಯಾರ್ಥಿಗಳಿಗೂ ಕರೋನಾ ಟೆಸ್ಟ್ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News