ಬೆಂಗಳೂರು : ಕೊರೊನಾವೈರಸ್‌ನ ಮೂರು ಅಲೆಗಳಿಂದ ಜಗತ್ತು ಈಗಷ್ಟೇ ಚೇತರಿಸಿಕೊಂಡಿದೆ. ಆದರೆ ಈಗ ಮತ್ತೊಮ್ಮೆ ಕರೋನದ ಹೊಸ ಉಪ ರೂಪಾಂತರವು ಜನರಲ್ಲಿ ಆತಂಕ ಉಂಟು ಮಾಡಿದೆ. ಕರೋನಾದ ಹೊಸ JN.1 ರೂಪಾಂತರವು 41 ದೇಶಗಳಿಗೆ ಹರಡಿದೆ. ಈಗ ಅದರ ಪ್ರಕರಣಗಳು ಭಾರತದ ಹಲವು ರಾಜ್ಯಗಳಲ್ಲಿಯೂ ಕಾಣಿಸಿಕೊಂಡಿದೆ. ದೇಶದಲ್ಲಿ ಇದುವರೆಗೆ 2300 ಕ್ಕೂ ಹೆಚ್ಚು ಸಕ್ರಿಯ ಕರೋನಾ ಪ್ರಕರಣಗಳಿವೆ.
ಬೆಂಗಳೂರಿನಲ್ಲಿಯೂ ಆತಂಕ :
ಕೇರಳದಲ್ಲಿ ಸಾಲು ಸಾಲು ಹೊಸ ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಆತಂಕ ಹೆಚ್ಚಾಗುತ್ತಿದೆ. ಕಳೆದ 20 ದಿನದಲ್ಲಿ ಬೆಂಗಳೂರಿನಲ್ಲಿ 17 ಹೊಸ ಕೊರೋನಾ ಸೋಂಕು ಪತ್ತೆಯಾಗಿದೆ. ಬಿಬಿಎಂಪಿಯ ಎಂಟು ವಲಯಗಳಲ್ಲಿ ಹೊಸ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಇದನ್ನೂ ಓದಿ : ಲೋಕಸಭೆ ಸೀಟು ಹಂಚಿಕೆ: ಇಂದು ಅಮಿತ್ ಶಾ ಭೇಟಿಯಾಗಲಿರುವ ಎಚ್‌ಡಿ ಕುಮಾರಸ್ವಾಮಿ
17 ಕೊರೋನಾ ಕೇಸ್ ಪತ್ತೆ :
ಬಿಬಿಎಂಪಿಯ ಪೂರ್ವ ವಲಯದಲ್ಲಿ ಅತಿ ಹೆಚ್ಚು ಹೊಸ ಕೊರೋನಾ ಪ್ರಕರಣ ಬೆಳಕಿಗೆ ಬಂದಿದೆ. ಪೂರ್ವ ವಲಯದಲ್ಲಿ 11, ಪಶ್ಚಿಮ 09 ಹಾಗೂ ಬೊಮ್ಮನಹಳ್ಳಿ 08 ಕೇಸ್ ಹೊಸ ಪ್ರಕರಣ ಪತ್ತೆಯಾಗಿದೆ.
17 ಜನರ ಪೈಕಿ ಇಬ್ಬರು ಗಂಭೀರ ಸಮಸ್ಯೆಯೊಂದಿಗೆ ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
17 ಮಂದಿ ಸ್ಯಾಂಪಲ್ಸ್ ಜಿನೋಮಿಕ್ ಸೀಕ್ವೆನ್ಸ್ ಗೆ :
ಕಳೆದ 20 ದಿನದಲ್ಲಿ ದಾಖಲಾಗಿರುವ 17 ಪ್ರಕರಣಗಳನ್ನು ಪಾಲಿಕೆ ಬಹಳ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಎಲ್ಲರ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ. 17 ಪ್ರಕರಣಗಳ ಪೈಕಿ ಇಬ್ಬರು 60 ವರ್ಷ ಮೇಲ್ಪಟ್ಟವರಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಇದನ್ನೂ ಓದಿ : 108 ಅಂಬುಲೆನ್ಸ್ ಚಾಲಕರಿಂದ ಖಾಸಗಿ ಅಸ್ಪತ್ರೆಗೆ ರೋಗಿಯನ್ನು ದಾಖಲಿಸುವ ದಂಧೆಗೆ ಕಡಿವಾಣ ಹಾಕಿ- ಡಾ.ಶರಣಪ್ರಕಾಶ ಪಾಟೀಲ
ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ಕೇಸ್ ಪತ್ತೆ.!?
ಬೊಮ್ಮನಹಳ್ಳಿ : 08
ದಾಸರಹಳ್ಳಿ : 00
ಪಶ್ಚಿಮ ವಲಯ : 09
ಮಹಾದೇವಪುರ : 06
ಆರ್ ಆರ್ ನಗರ : 00
ದಕ್ಷಿಣ ವಲಯ : 07
ಪೂರ್ವ ವಲಯ : 11
ಯಲಹಂಕ : 01
ಬೆಂಗಳೂರಿನಲ್ಲಿ JN.1 ಹೊಸ ವೈರಸ್ ಪತ್ತೆಗೂ ಮುನ್ನವೇ ಮೂರು ಸಾವು :
JN.1 ಆತಂಕದ ನಡುವೆ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಇಬ್ಬರು ಕೊರೋನಾದಿಂದ ಮೃತಪಟ್ಟಿದ್ದಾರೆ. ಒಬ್ಬರು ಜಯದೇವ ಆಸ್ಪತ್ರೆಯಲ್ಲಿ ಮೃತಪಟ್ಟರೆ ಇನ್ನೊಬ್ಬರು ಜೆಪಿ ನಗರದದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಪ್ರಾಥಮಿಕ ಸಂಪರ್ಕಿತರನ್ನ ಇದೀಗ ಆರೋಗ್ಯ ಇಲಾಖೆ ಕೊವಿಡ್ ಟೆಸ್ಟ್ ಗೆ ಒಳಪಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.