Cabinet :ಬಗೆಹರಿದಿಲ್ಲ ಸಂಪುಟ ಸರ್ಕಸ್, ಸಚಿವರುಗಳ ಖಾತೆ ಮತ್ತೆ ಅದಲು ಬದಲು..? ಯಡಿಯೂರಪ್ಪ ಮನಸ್ಸಿನಲ್ಲೇನಿದೆ..?

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಖಾತೆ ಬಿಕ್ಕಟ್ಟು  ಸದ್ಯಕ್ಕೆ ಬಗೆ ಹರಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.  ಮೂಲಗಳ ಪ್ರಕಾರ ಸಚಿವ ಮುನಿಸು ನಿವಾರಣೆಗೆ ಯಡಿಯೂರಪ್ಪ  ಮತ್ತೊಂದು ಸರ್ಕಸ್ ಮಾಡಲಿದ್ದಾರೆ.

Written by - Ranjitha R K | Last Updated : Jan 25, 2021, 01:31 PM IST
  • ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಖಾತೆ ಬಿಕ್ಕಟ್ಟು ಸದ್ಯಕ್ಕೆ ಬಗೆ ಹರಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
  • ಮೂಲಗಳ ಪ್ರಕಾರ ಸಚಿವ ಮುನಿಸು ನಿವಾರಣೆಗೆ ಯಡಿಯೂರಪ್ಪ ಮತ್ತೊಂದು ಸರ್ಕಸ್ ಮಾಡಲಿದ್ದಾರೆ.
  • ಸಂಜೆಯ ಹೊತ್ತಿಗೆ ಖಾತೆಗಳ ಹೊಸ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
Cabinet :ಬಗೆಹರಿದಿಲ್ಲ ಸಂಪುಟ ಸರ್ಕಸ್, ಸಚಿವರುಗಳ ಖಾತೆ ಮತ್ತೆ ಅದಲು ಬದಲು..? ಯಡಿಯೂರಪ್ಪ ಮನಸ್ಸಿನಲ್ಲೇನಿದೆ..?  title=
ಸಂಜೆಯ ಹೊತ್ತಿಗೆ ಖಾತೆಗಳ ಹೊಸ ಪಟ್ಟಿ ಬಿಡುಗಡೆ (file photo)

ಬೆಂಗಳೂರು : ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಖಾತೆ ಬಿಕ್ಕಟ್ಟು (Cabinet reshuffle) ಸದ್ಯಕ್ಕೆ ಬಗೆ ಹರಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.  ಮೂಲಗಳ ಪ್ರಕಾರ ಸಚಿವ ಮುನಿಸು ನಿವಾರಣೆಗೆ ಯಡಿಯೂರಪ್ಪ (BS Yediyurappa) ಮತ್ತೊಂದು ಸರ್ಕಸ್ ಮಾಡಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಯಡಿಯೂರಪ್ಪ ತಮ್ಮ ಸಚಿವರ ಖಾತೆಗಳನ್ನು( portfolio) ಮತ್ತೆ ಬದಲಾಯಿಸಲಿದ್ದಾರೆ. ಈ ಮೂಲಕ ಮುನಿದ ಸಚಿವರಿಗೆ ಮುಲಾಮು ಹಚ್ಚುವ ಕೆಲಸ ಯಡಿಯೂರಪ್ಪ ಮಾಡಲಿದ್ದಾರೆ. ಸಂಜೆಯ ಹೊತ್ತಿಗೆ ಖಾತೆಗಳ ಹೊಸ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಸಚಿವ ಮಾಧುಸ್ವಾಮಿಗೆ (JC Madhuswamy) ನೀಡಲಾಗಿದ್ದ ವೈದ್ಯಶಿಕ್ಷಣ ಖಾತೆಯನ್ನು ಮರಳಿ ಸುಧಾಕರ್ (Dr K Sudhakar) ಅವರಿಗೆ ನೀಡಲು ಯಡಿಯೂರಪ್ಪ (BS Yediyurappa) ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.  ಜೊತೆಗೆ ಮಾಧು ಸ್ವಾಮಿ ಬಳಿಯಿದ್ದ ಹಜ್ ಮತ್ತು ವಕ್ಫ್ ಖಾತೆಯನ್ನು ಹಿಂಪಡೆಯಲು ತೀರ್ಮಾನಿಸಿದ್ಧಾರೆ ಎನ್ನಲಾಗಿದೆ. ಜೊತೆಗೆ ಆನಂದ್ ಸಿಂಗ್ ಬಳಿಯಿದ್ದ ಪ್ರವಾಸೋದ್ಯಮ  ಮತ್ತು ಪರಿಸರ ಸಚಿವಾಲಯವನ್ನು ಹಿಂಪಡೆಯುವ ಸಾಧ್ಯತೆ ಇದೆ. ಆನಂದ್ ಸಿಂಗ್ ಗೆ ವಕ್ಫ್, ಹಜ್ ಖಾತೆ ಸಿಗುವ ಸಂಭವವಿದೆ. 

ಇದನ್ನೂ ಓದಿ : Ramesh Jarkiholi: ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ರೆಸಾರ್ಟ್ ನಲ್ಲಿ ಅತೃಪ್ತರ ಗೌಪ್ಯಸಭೆ..!

ಈ ಬದಲಾವಣೆ ಗೊತ್ತಾಗುತ್ತಿದ್ದಂತೆಯೇ ಆನಂದ್ ಸಿಂಗ್ (Anand Singh) ಮುನಿದು ಕುಳಿತಿದ್ದಾರೆ. ತಮಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡುತ್ತೇನೆ. ಖಾತೆ ಸಿಗದೇ ಹೋದರೂ ಕೂಡಾ ಶಾಸಕನಾಗಿ ಇದ್ದು ಬಿಡಲು ನಾನು ಸಿದ್ದನಾಗಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ. 

ಈ ನಡುವೆ ನೂತನ ಸಚಿವರಾದ ಎಂಟಿಬಿ ನಾಗರಾಜ್ (MTB Nagaraj) ಮತ್ತು ಆರ್ ಶಂಕರ್  (R Shankar) ವಿಧಾನಸೌಧದಲ್ಲಿ ತಮ್ಮ ಕೊಠಡಿ ಪೂಜೆ ನಡೆಸಿದ್ದಾರೆ. ಖಾತೆ ಫೈನಲ್ ಆದ ಬಳಿಕವೇ ಉಭಯ ಸಚಿವರು ಅಧಿಕಾರ ಸ್ವೀಕರಿಸಿದ್ದಾರೆ.  ಎಂಟಿಬಿ ನಾಗರಾಜ್ ಪೌರಾಡಳಿತ ಸಚಿವರಾಗಿ, ಆರ್ ಶಂಕರ್ ತೋಟಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇದನ್ನೂ ಓದಿ : BJP: 'ನಮ್ಮದು ಬಾಂಬೆ ಟೀಮ್‌ ಅಲ್ಲ, ನಾವೀಗ ಬಿಎಸ್ ವೈ, ಬಿಜೆಪಿ ಟೀಮ್'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News