ಪೋಷಕರು ಐಫೋನ್ ಕೊಡಿಸಿಲ್ಲ ಅಂತಾ ಮನೆ ಬಿಟ್ಟು ಹೋದ ಬಾಲಕರು..!

Viral News : ಈಗ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ಗಳಿರುತ್ತೆ..ಪೋಷಕರು ಸಹ ಮಕ್ಕಳು ಚೆನ್ನಾಗಿರಲಿ ಅಂತಾ ಅವರು ಕೇಳಿದ್ದನ್ನು ಕೊಡಿಸುತ್ತಾರೆ. ಅದರಲ್ಲಿ ಮಕ್ಕಳ ಮೊದಲ ಬೇಡಿಕೆ ಅಂದ್ರೆ ಮೊಬೈಲ್.  

Written by - VISHWANATH HARIHARA | Edited by - Savita M B | Last Updated : Sep 10, 2023, 09:10 AM IST
  • ಮೊಬೈಲ್ ಗಳಲ್ಲಿ ಬರುವ ಗೇಮಿಂಗ್ ಹೊಸ ಹೊಸ ಫೀಚರ್ ಗಳು ಮಕ್ಕಳನ್ನು ಆಕರ್ಷಿಸುತ್ತವೆ
  • ಹೀಗೆ ಪೋಷಕರು ಐಫೋನ್ ಕೊಡಿಸಲಿಲ್ಲ ಎಂದು ಬಾಲಕರು ಮನೆಬಿಟ್ಟು ಹೋಗಿದ್ದಾರೆ
  • ಸಂಜಯ ನಗರ ಪೊಲೀಸರು ಬಾಲಕರನ್ನು ಹುಡುಕಿ ಪೋಷಕರಿಗೆ ಒಪ್ಪಿಸಿದ್ದಾರೆ.
ಪೋಷಕರು ಐಫೋನ್ ಕೊಡಿಸಿಲ್ಲ ಅಂತಾ ಮನೆ ಬಿಟ್ಟು ಹೋದ ಬಾಲಕರು..! title=

ಬೆಂಗಳೂರು: ಮೊಬೈಲ್ ಗಳಲ್ಲಿ ಬರುವ ಗೇಮಿಂಗ್ ಹೊಸ ಹೊಸ ಫೀಚರ್ ಗಳು ಮಕ್ಕಳನ್ನು ಆಕರ್ಷಿಸುತ್ತವೆ..ಹೀಗೆ ಪೋಷಕರು ಐಫೋನ್ ಕೊಡಿಸಲಿಲ್ಲ ಎಂದು ಬಾಲಕರು ಮನೆಬಿಟ್ಟು ಹೋಗಿರುವ ಪ್ರಸಂಗ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭೂಪಸಂದ್ರದಿಂದ ನಾಪತ್ತೆಯಾಗಿದ್ದ ಸುಮನ್ ಕರಿಯರ್ ಸುಲೇಮಾನ್,(15) ಅಬ್ದುಲ್ ಸಮದ್(15) ಎಂಬುವವರನ್ನು ಪೊಲೀಸರು ಪತ್ತೆಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ
ನಾಗಶೆಟ್ಟಿಹಳ್ಳಿಯಲ್ಲಿ ವಾಸವಿದ್ದ ಅಬ್ದುಲ್ ಸಮದ್ ಭೂಪಸಂದ್ರದ ಮದರಸಗೆ ಓದಲು ತೆರಳುತ್ತಿದ್ದ. ಈ ಬಾಲಕನ ಪೋಷಕರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು.ಪೋಷಕರು ಸಮದ್ ಗೆ ಒಂದು ಸ್ಮಾರ್ಟ್ ಫೋನ್ ಸಹ  ಕೊಡಿಸಿದ್ದರು. ಹೀಗೆ ಮದರಸಗೆ ಹೋಗುತ್ತಿದ್ದವನಿಗೆ ಸುಲೇಮಾನ್ ಎಂಬ ಬಾಲಕನ ಜೊತೆ ಸ್ನೇಹ ಬೆಳೆದಿತ್ತು. 

ಇದನ್ನೂ ಓದಿ-"ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ"

ಸಮದ್ ಹಾಗೂ ಸುಲೇಮಾನ್ ಇಬ್ಬರು ಮೊಬೈಲ್ ಬಳಕೆ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಹೀರಾತು, ರೀಲ್ಸ್ ಗಳಲ್ಲಿ ಐಫೋನ್ ನೋಡಿದ್ರು.  ತಾವು ಐಫೋನ್ ಬಳಕೆ ಮಾಡಿದರೆ ಚೆನ್ನಾಗಿರುತ್ತೆ ಎಂದುಕೊಂಡುಇತ್ತೀಚೆಗೆ ಮನೆಯಲ್ಲಿ ಐಫೋನ್ ಕೊಡಿಸುವಂತೆ ಪೋಷಕರಿಗೆ ಕೇಳಿದ್ದರು. 

ಆದರೆ ಪೋಷಕರು ಹಣವಿಲ್ಲ ಐಫೋನ್ ಕೊಡಿಸಲು ಸಾಧ್ಯವಿಲ್ಲ ಎಂದಿದ್ರು. ಆಗ ನಾವು ಬಾಂಬೆಗೆ ಹೋಗಿ ದುಡಿದು ಐಫೋನ್ ಕೊಳ್ಳುತ್ತೇವೆ ಎಂದಿದ್ದರಂತೆ.. ಪೋಷಕರು ಸಹ ಇದನ್ನು ಅಷ್ಟು ಸಿರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ಬಾಲಕರು ಮಾತ್ರ ಹೇಗಾದ್ರೂ ಮಾಡಿ ಐಫೋನ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿ ಮದರಸಗೆ ಹೋಗುವುದಾಗಿ ಹೇಳಿ ಪೋಷಕರ ಕಣ್ತಪ್ಪಿಸಿ ಬಾಂಬೆ ಬದಲು ಗೋವಾಕ್ಕೆ ತೆರಳಿದ್ದರು. 

ಪೋಷಕರು ಎಷ್ಟೇ ಹುಡುಕಿದರು ಸಹ ಬಾಲಕರು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪೋಷಕರು ಪ್ರಕರಣ ದಾಖಲಿಸಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಸಂಜಯ ನಗರ ಪೊಲೀಸರು ಬಾಲಕರನ್ನು ಹುಡುಕಿ ಪೋಷಕರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ-ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News