Rules Change From 1st May 2024: ಪ್ರತಿ ಮಾಸದಂತೆಯೇ ಮೇ ತಿಂಗಳ ಮೊದಲ ದಿನವೂ ಸಹ ಕೆಲವು ನಿಯಮಗಳು ಬದಲಾಗಲಿವೆ. ಇದರಿಂದಾಗಿ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದ್ದು, ನಾಳೆಯಿಂದ ಯಾವ್ಯಾವ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರತಿ ತಿಂಗಳಿನಂತೆ ಮೇ ತಿಂಗಳ ಮೊದಲ ದಿನದಿಂದಲೂ ಎಲ್ಪಿಜಿ, ಸಿಎನ್ಜಿ ಮತ್ತು ಪಿಎನ್ಜಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಇನ್ನೂ ಕೆಲವು ನಿಮಯಗಳು ಕೂಡ ಬದಲಾಗಲಿವೆ. ನಾಳೆಯಿಂದ ಏನೆಲ್ಲಾ ನಿಯಮಗಳು ಬದಲಾಗಲಿವೆ ಎಂದು ತಿಳಿಯೋಣ...
ಪ್ರತಿ ತಿಂಗಳ ಮೊದಲ ದಿನ ಎಂದರೆ 01ನೇ ತಾರೀಕಿನಂದು ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಪರಿಷ್ಕರಿಸುತ್ತವೆ. ಇದಲ್ಲದೆ, ಪಿಎನ್ಜಿ, ಸಿಎನ್ಜಿ ಮತ್ತು ಎಟಿಎಫ್ ದರವನ್ನು ಕೂಡ ಪರಿಷ್ಕರಿಸಲಾಗುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ನಾಗರೀಕರಿಗಾಗಿ ಆರಂಭಿಸಿದ್ದ ವಿಶೇಷ ಎಫ್ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಮೇ 10, 2024ರವರೆಗೆ ಅವಕಾಶ ನೀಡಿದೆ.
ಐಸಿಐಸಿಐ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ಮೇಲಿನ ಶುಲ್ಕವನ್ನು ಮೇ 01, 2024ರಿಂದ ಬದಲಾಯಿಸಲಿದೆ. ಇದಲ್ಲದೆ, ಡೆಬಿಟ್ ಕಾರ್ಡ್ ಮೇಲಿನ ವಾರ್ಷಿಕ ಶುಲ್ಕವನ್ನು 200 ರೂ.ಗೆ ಇಳಿಸಲಾಗಿದೆ. ಆದರೆ ಈ ಶುಲ್ಕ ಗ್ರಾಮೀಣ ಪ್ರದೇಶದಲ್ಲಿ 99 ರೂ. ಆಗಿರಲಿದೆ. ಅಷ್ಟೇ ಅಲ್ಲ, ನಾಳೆಯಿಂದ (ಮೇ 01) 25 ಪುಟಗಳ ಚೆಕ್ ಪುಸ್ತಕಗಳನ್ನು ನೀಡಲು ಯಾವುದೇ ಶುಲ್ಕ ಇರುವುದಿಲ್ಲ. ಎಂದು ಬ್ಯಾಂಕ್ನಿಂದ ತಿಳಿಸಲಾಗಿದೆ.
ಮೇ 1, 2024 ರಿಂದ ಯೆಸ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಶುಲ್ಕವನ್ನು ಸಹ ಬದಲಾಯಿಸಿದೆ. ಯೆಸ್ ಬ್ಯಾಂಕ್ನ ಉಳಿತಾಯ ಖಾತೆ ಪ್ರೊನಲ್ಲಿ ಕನಿಷ್ಠ 10,000 ರೂ.ಗಳನ್ನು ನಿರ್ವಹಿಸಬೇಕು. ಇದರ ಮೇಲೆ ಗರಿಷ್ಠ 750 ರೂ. ಮೌಲ್ಯದ ಉಳಿತಾಯಕ್ಕೆ 5000 ರೂ.ಗಳ ಮಿತಿ ಇದೆ ಮತ್ತು ಗರಿಷ್ಠ 500 ರೂ.ಗಳ ಶುಲ್ಕವನ್ನು ವಿಧಿಸಲಾಗುತ್ತದೆ.
ನೀವು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಗ್ರಾಹಕರಾಗಿದ್ದು ಕ್ರೆಡಿಟ್ ಕಾರ್ಡ್ ಮೂಲಕ ವಿದ್ಯುತ್, ಗ್ಯಾಸ್ ಅಥವಾ ಇಂಟರ್ನೆಟ್ ಬಿಲ್ ಪಾವತಿಸಿದರೆ ಮತ್ತು ಆ ಮೊತ್ತವು ತಿಂಗಳಲ್ಲಿ 20,000 ರೂ.ಗಳಿಗಿಂತ ಹೆಚ್ಚಿದ್ದರೆ ನಾಳೆಯಿಂದ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ಶುಲ್ಕ 1% ಆಗಿರುತ್ತದೆ, ಅದರ ಮೇಲೆ 18% GST ಸಹ ಅನ್ವಯಿಸುತ್ತದೆ.