Sangeetha Sringeri: ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿ ಗಾಬರಿಯಾದ ಬಿಗ್‌ ಬಾಸ್‌ ಸಂಗೀತಾ!

Sangeetha Sringeri At Bandipura: ಸ್ಯಾಂಡಲ್‌ವುಡ್‌ ನಟಿ ಸಂಗೀತಾ ಶೃಂಗೇರಿ ಇತ್ತೀಚೆಗೆ ಬಂಡೀಪುರ ಅರಣ್ಯಕ್ಕೆ ಸಫಾರಿಗಾಗಿ ಹೋದಾಗ ಅಲ್ಲಿ ಹುಲಿಯನ್ನು ಕಂಡು ಬೆರಗಾಗಿದ್ದಾರೆ. ಅಷ್ಟೇ ಅಲ್ಲದೇ ಹುಲಿಯ ವಿಡಿಯೋವನ್ನು ಕ್ಯಾಪ್ಚರ್‌ ಮಾಡಿ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

Written by - Zee Kannada News Desk | Last Updated : Apr 29, 2024, 11:37 AM IST
  • ಸಂಗೀತಾ ಶೃಂಗೇರಿ ಅಲ್ಲಿ ಹುಲಿ ಒಟಾಡುತ್ತಿರುವ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
  • ಸಂಗೀತಾ ಶೃಂಗೇರಿ ಹುಲಿಯ ಪ್ರತಿ ಚಲನವಲನ ಕಂಡು ಬೆರಗಾಗಿದ್ದು, ಇದನ್ನು ಕ್ಯಾಮೆರಾದಲ್ಲಿ ಅಷ್ಟೇ ಪ್ರೀತಿಯಿಂದಲೇ ಸೆರೆಹಿಡಿದಿದ್ದಾರೆ.
  • ಬಂಡಿಪುರ ಅರಣ್ಯದ ಸಾಫಾರಿಯಲ್ಲಿ ಸಂಗೀತಾ ಶೃಂಗೇರಿ ಹುಲಿಯನ್ನು ನೋಡಿ ಖುಷಿಯಾಗಿದ್ದು, ತಮ್ಮ ಅನುಭವವನ್ನು ಬಣ್ಣಿಸಿದ್ದಾರೆ.
Sangeetha Sringeri: ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿ ಗಾಬರಿಯಾದ ಬಿಗ್‌ ಬಾಸ್‌ ಸಂಗೀತಾ! title=

Sangeetha Sringeri Saffari Ride At Bandipura: ಸ್ಯಾಂಡಲ್‌ವುಡ್‌ ನಟಿ ಹಾಗೂ ಬಿಗ್‌ ಬಾಸ್‌ ಬೆಡಗಿ ಸಂಗೀತಾ ಶೃಂಗೇರಿ ಬಂಡೀಪುರ ಸಫಾರಿಗೆ ಹೋಗಿದ್ದರು. ಈ ನಟಿ  ಸಫಾರಿಯಲ್ಲಿ ಇಡೀ ಅರಣ್ಯವನ್ನು ನೋಡಿ ಖುಷಿಯಾಗಿದ್ದಾರೆ. ಈ ನಟಿ ಕಾಡಿನಲ್ಲಿ ಹುಲಿಯನ್ನು ನೋಡಿ ಸಂತೋಷ ಪಟ್ಟಿದ್ದಾರೆ. ಹಾಗೆಯೇ ಈಕೆ ಅಲ್ಲಿ ಹುಲಿ ಒಟಾಡುತ್ತಿರುವ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ನಟಿ ಸಂಗೀತಾ ಶೃಂಗೇರಿ ಬಂಡೀಪುರ ಸಫಾರಯ ವೇಳೆ ಕೈಯಲ್ಲಿ ಒಂದು ದೊಡ್ಡ ಕ್ಯಾಮರಾ ಹಿಡಿದು ಕೊಂಡು ತಮಗೆ ಇಷ್ಟವಾಗೋ ಎಲ್ಲ ದೃಶ್ಯಗಳನ್ನ ಕ್ಯಾಪ್ಚರ್ ಮಾಡಿದ್ದಾರೆ. ಈಕೆ ಹುಲಿಯನ್ನು ನೋಡಿದಾಗ ಅದನ್ನು ಹೆಚ್ಚು ಕಡಿಮೆ ಒಂದು ಗಂಟೆ ನೋಡಿದ್ದಾರೆ. ಅಷ್ಟೇ ಅಲ್ಲದೆ ಈ ನಟಿ ಹುಲಿಯ ಪ್ರತಿ ಚಲನವಲನ ಕಂಡು ಬೆರಗಾಗಿದ್ದು, ಇದನ್ನು ಕ್ಯಾಮೆರಾದಲ್ಲಿ ಅಷ್ಟೇ ಪ್ರೀತಿಯಿಂದಲೇ ಸೆರೆಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಬಿಸಿಲ ಬೇಗೆ ತತ್ತರಿಸ್ತಿದ್ದ ಹುಲಿ ನೀರಲ್ಲಿ ಕುಳಿತುಕೊಂಡಿತ್ತು.

 
 
 
 

 
 
 
 
 
 
 
 
 
 
 

A post shared by Sangeetha Sringeri (@iamsangeethasringeri)

ಇದನ್ನೂ ಓದಿ: Haripriya - Vasishta: ಐಷಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ದಂಪತಿ: ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತೇ??

ಸಾಮಾನ್ಯವಾಗಿ ಹುಲಿಯನ್ನು ಮೃಗಾಲಯದಲ್ಲಿಯೇ ನೋಡಿರುತ್ತೇವೆ. ಆದರೆ ಕಾಡಿನಲ್ಲಿ ನೋಡೋದು ಬಹುತೇಕ ಕಡಿಮೆ. ಆದರೆ ಬಂಡಿಪುರ ಅರಣ್ಯದ ಸಾಫಾರಿಯಲ್ಲಿ ಸಂಗೀತಾ ಶೃಂಗೇರಿ ಹುಲಿಯನ್ನು ನೋಡಿ ಖುಷಿಯಾಗಿದ್ದು, ತಮ್ಮ ಅನುಭವವನ್ನು ಬಣ್ಣಿಸಿದ್ದಾರೆ. ಈ ನಟಿ ಸೋಶಿಯಲ್‌ ಮಿಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿಕೊಳ್ಳುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ ʻತುಂಬಾನೆ ಅದ್ಭುತ ಕ್ಷಣ ಇದಾಗಿದೆ. ಒಂದು ಗಂಟೆಗೂ ಹೆಚ್ಚು ಸಮಯ ಹುಲಿಯನ್ನ ನೋಡಿರೋದು ತುಂಬಾನೆ ಆನಂದ ಕೊಟ್ಟಿದೆ. ಇದು ನಿಜಕ್ಕೂ ಖುಷಿಯ ಕ್ಷಣʼ ಅಂತ ಬರೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಶೃಂಗೇರಿಯವರನ್ನು  ಸಿಂಹಿಣಿ ಎಂದು ಕರೆಯುತ್ತಿದ್ದು, ಈ ನಟಿ ಅಲ್ಲಿ ಸಿಂಹಿಣಿ ರೀತಿನೇ ಆಟವಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಶೃಂಗೇರಿ ಶೇರ್‌ ಮಾಡಿದ ಹುಲಿಯ ವಿಡಿಯೋವನ್ನು ನೋಡಿ ಕಾಮೆಂಟ್‌ ಬಾಕ್ಸ್‌ನಲ್ಲಿ  ಹುಲಿ ಜೊತೆಗೆ ಸಿಂಹಿಣಿ ಅಂತ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಸದಾ ವಿಭಿನ್ನವಾದ ಸವಾಲುಗಳನ್ನು ಎದುರಿಸಲು ರೆಡಿಯಾಗಿರುವ ಸಂಗೀತಾ ಶೃಂಗೇರಿ ಸದ್ಯ  ಬಂಡಿಪುರದಲ್ಲಿ ಸಫಾರಿ ಮಾಡಿಕೊಂಡು ಅಲ್ಲಿಯ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News