ವಿವಾಹ-ಡೇಟಿಂಗ್ ಊಹಾಪೋಹಗಳ ನಡುವೆ ಇದ್ದಕ್ಕಿದ್ದಂತೆ ಏನಾಯಿತು 'ಮಿಲ್ಕಿ ಬ್ಯೂಟಿ'ಗೆ? ಲುಕ್ ನೋಡಿ!

Tamannaah Bhatia Photos: ಬಾಲಿವುಡ್ ನಿಂದ ಹಿಡಿದು ದಕ್ಷಿಣ ಚಿತ್ರರಂಗದವರೆಗೆ ತಮನ್ನಾ ಭಾಟಿಯಾ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಈ ದಿನಗಳಲ್ಲಿ ಅವರು ತಮ್ಮ ಮುಂಬರುವ ಹಾರರ್ ಕಾಮಿಡಿ ಚಿತ್ರ 'ಅರಣ್ಮನೈ 4' ಗಾಗಿ ಸುದ್ದಿಯಲ್ಲಿದ್ದಾಳೆ.   

Written by - Nitin Tabib | Last Updated : Apr 29, 2024, 06:45 PM IST
  • ತಮನ್ನಾ ಭಾಟಿಯಾ ಅವರ ಚಿತ್ರ 'ಅರಣ್ಮನೈ 4' ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ.
  • ಆದರೆ ಈಗ ಬಿಡುಗಡೆ ದಿನಾಂಕ ಬದಲಾಗಿದೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಬರೆದುಕೊಂಡ ನಿರ್ಮಾಪಕರು,
  • "ಒಳ್ಳೆಯ ಸಂಗತಿಗಳನ್ನು ನೋಡಬೇಕಾದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಚಿತ್ರ ಇದೀಗ ಮೇ 5 ರಂದು ಬಿಡುಗಡೆಯಾಗಲಿದೆ" ಎಂದಿದ್ದಾರೆ.
ವಿವಾಹ-ಡೇಟಿಂಗ್ ಊಹಾಪೋಹಗಳ ನಡುವೆ ಇದ್ದಕ್ಕಿದ್ದಂತೆ ಏನಾಯಿತು 'ಮಿಲ್ಕಿ ಬ್ಯೂಟಿ'ಗೆ? ಲುಕ್ ನೋಡಿ!  title=

Tamannaah Bhatia Photos: ಬಾಲಿವುಡ್ ನಿಂದ ಹಿಡಿದು ದಕ್ಷಿಣ ಚಿತ್ರರಂಗದವರೆಗೆ ತಮನ್ನಾ ಭಾಟಿಯಾ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಈ ದಿನಗಳಲ್ಲಿ ಅವರು ತಮ್ಮ ಮುಂಬರುವ ಹಾರರ್ ಕಾಮಿಡಿ ಚಿತ್ರ 'ಅರಣ್ಮನೈ 4' ಗಾಗಿ ಸುದ್ದಿಯಲ್ಲಿದ್ದಾಳೆ. ಇದರ ಜೊತೆಗೆ ತಮನ್ನಾ  ಇತ್ತೀಚೆಗೆ ಸೆಟ್‌ನಿಂದ ತಮ್ಮ ಬಿಟಿಎಸ್ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾಳೆ. 

ಈ ಚಿತ್ರಗಳನ್ನು ಹಂಚಿಕೊಂಡ Tamannaah Bhatia, 'ಅರಣ್ಮನೈ 4' ನ ಕಿರುಚಾಟ ಮತ್ತು ಭಯಾನಕ ದೃಶ್ಯಗಳ ನಡುವೆ ಕೆಲ ಉತ್ತಮ ಕ್ಷಣಗಳು ಎಂದು ಶೀರ್ಷಿಕೆ ಬರೆದುಕೊಂಡಿದ್ದಾಳೆ, "ಈ ಚಿತ್ರದಲ್ಲಿ ಕೆಲಸ ಮಾಡುವುದು ಮತ್ತು ಎಲ್ಲಾ ಸ್ಟ್ಯಾಂಡ್‌ಗಳನ್ನು ಮಾಡುವುದು ತುಂಬಾ ಕಷ್ಟದ ಕೆಲಸ. ಆದರೆ ಅದೂ ಕೂಡ ಸಾಕಷ್ಟು ಖುಷಿ ನೀಡಿದೆ. ಈ ಫ್ರಾಂಚೈಸಿಯ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದಕ್ಕಿಂತ ಉತ್ತಮ ತಂಡವನ್ನು ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾಳೆ.

ತಮನ್ನಾ ಭಾಟಿಯಾ ಅವರ ಚಿತ್ರ 'ಅರಣ್ಮನೈ 4' ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ. ಆದರೆ ಈಗ ಬಿಡುಗಡೆ ದಿನಾಂಕ ಬದಲಾಗಿದೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಬರೆದುಕೊಂಡ ನಿರ್ಮಾಪಕರು, "ಒಳ್ಳೆಯ ಸಂಗತಿಗಳನ್ನು ನೋಡಬೇಕಾದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಚಿತ್ರ ಇದೀಗ ಮೇ 5 ರಂದು ಬಿಡುಗಡೆಯಾಗಲಿದೆ" ಎಂದಿದ್ದಾರೆ. 

ಇದನ್ನೂ ಓದಿ-"ನಿನ್ನ ಕ್ಯಾಮೆರಾ ಕಣ್ಣು ನನ್ನ ಶರೀರದ ಈ ಅಂಗ..." ಕ್ಯಾಮೆರಾಮನ್ ಕ್ಲಾಸ್ ತೆಗೆದುಕೊಂಡ Rakhi Sawant, Watch Video

ಇದು ಹಾರರ್ ಚಿತ್ರ 'ಅರಣ್ಮನೈ 3' ನ ಸೀಕ್ವಲ್ ಇದಾಗಿದೆ ಎನ್ನಲಾಗುತ್ತಿದೆ ಮತ್ತು ಆ ಚಿತ್ರ 2021 ರಲ್ಲಿ ಬಿಡುಗಡೆಯಾಗಿತ್ತು. ಅರಣ್ಮನೈ 3 ರಲ್ಲಿ ತಮನ್ನಾ ಭಾಟಿಯಾ ಜೊತೆಗೆ ರಾಶಿ ಖನ್ನಾ, ಸುಂದರ್ ಸಿ ಮತ್ತು ಸಂತೋಷ್ ಪ್ರತಾಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈಗ 'ಅರಣ್ಮನೈ 4' ಚಿತ್ರದಲ್ಲಿ ರಾಮಚಂದ್ರರಾಜು, ಯೋಗಿ ಬಾಬು ಮತ್ತು ದೆಹಲಿ ಗಣೇಶ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ-ಮದುವೆಯ ಹೆಸರಲ್ಲಿ ಧೋಕಾ, ಮಗು ಹುಟ್ಟಿದ ಬಳಿಕ Kangana ಪತಿ ಮಾಡಿದ ಈ ಕೆಲಸ!

ತಮನ್ನಾ ಭಾಟಿಯಾ ಇದುವರೆಗೆ ಅನೇಕ ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್‌ನಿಂದ ಹಿಡಿದು ದಕ್ಷಿಣ ಚಿತ್ರರಂಗದವರೆಗಿನ ಚಿತ್ರಗಳು ಇದರಲ್ಲಿ ಶಾಮೀಲಾಗಿವೆ. ಇದೀಗ ಶ್ರದ್ಧಾ ಕಪೂರ್ ಅಭಿನಯದ ‘ಸ್ತ್ರೀ 2’ ಚಿತ್ರದಲ್ಲಿನ ಡ್ಯಾನ್ಸ್‌ವೊಂದರಲ್ಲಿ ತಮ್ಮನ್ನಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೇ. ಈಗಾಗಲೇ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗುತ್ತಿದ್ದು, ಈ ಹಾಡಿನಲ್ಲಿ ರಾಜ್‌ಕುಮಾರ್ ರಾವ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಿತ್ತರಗೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News