ಸೆ.30ರವರೆಗೆ ವಿದ್ಯಾರ್ಥಿಗಳ ಹಳೆ ಬಸ್ ಪಾಸ್ ಅವಧಿ ವಿಸ್ತರಣೆ: ಬಿಎಂಟಿಸಿ

ವಿದ್ಯಾರ್ಥಿಗಳು ಸೆಪ್ಟೆಂಬರ್ 30ರವರೆಗೂ ಕಾಲೇಜಿನ ಗುರುತಿನ ಚೀಟಿ ಮತ್ತು ಶುಲ್ಕ ಪಾವತಿಸಿ ರಸೀದಿ ಜತೆಗೆ ಹಿಂದಿನ ವರ್ಷದ ಬಸ್‌ ಪಾಸ್ ತೋರಿಸಿ ಪ್ರಯಾಣಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ. 

Last Updated : Sep 1, 2018, 11:35 AM IST
ಸೆ.30ರವರೆಗೆ ವಿದ್ಯಾರ್ಥಿಗಳ ಹಳೆ ಬಸ್ ಪಾಸ್ ಅವಧಿ ವಿಸ್ತರಣೆ: ಬಿಎಂಟಿಸಿ title=

ಬೆಂಗಳೂರು: ಕಳೆದ ಶೈಕ್ಷಣಿಕ ವರ್ಷದಲ್ಲಿ ವಿತರಿಸಿದ್ದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ಬಿಎಂಟಿಸಿ ವಿಸ್ತರಿಸಿದೆ. 

ಕಾಗದದ ಬದಲಾಗಿ ಸ್ಮಾರ್ಟ್ ಕಾರ್ಡ್ ರೂಪದ ಪಾಸ್ ನೀಡುವುದಾಗಿ ಹೇಳಿದ್ದ ಬಿಎಂಟಿಸಿ, ನೂತನ ಪಾಸ್ ಪಡೆಯಲು ಅರ್ಜಿ ಸಲ್ಲಿಕೆಗೆ ಆಗಸ್ಟ್ 31ರವರೆಗೆ ಗಡುವು ನೀಡಿತ್ತು. ಆದರೆ ವಿದ್ಯಾರ್ಥಿಗಳಿಗೆ ಇನ್ನೂ ನೂತನ ಪಾಸ್ ವಿತರಣೆ ಆಗದ ಕಾರಣ ಪಿಯು, ಪದವಿ, ಮೆಡಿಕಲ್, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಸೇರಿ ಇತರೆ ವಿದ್ಯಾರ್ಥಿಗಳು ಸೆಪ್ಟೆಂಬರ್ 30ರವರೆಗೂ ಕಾಲೇಜಿನ ಗುರುತಿನ ಚೀಟಿ ಮತ್ತು ಶುಲ್ಕ ಪಾವತಿಸಿ ರಸೀದಿ ಜತೆಗೆ ಹಿಂದಿನ ವರ್ಷದ ಬಸ್‌ ಪಾಸ್ ತೋರಿಸಿ ಪ್ರಯಾಣಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ. 

ಇದರಿಂದಾಗಿ ವಿದ್ಯಾರ್ಥಿಗಳು ಸೆ.30ರವರೆಗೆ ನಿರಾಳವಾಗಿ ಬಸ್'ನಲ್ಲಿ ಪ್ರಯಾಣಿಸಬಹುದು. ನೂತನ ಬಸ್ ಪಾಸ್ ಅನ್ನು ಇನ್ನೂ ಕೆಲವೇ ದಿನಗಳಲ್ಲಿ ಅಂಚೆ ಮೂಲಕ ತಲುಪಿಸುವುದಾಗಿ ಬಿಎಂಟಿಸಿ ತಿಳಿಸಿದೆ. 

Trending News