ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪೊಲ್ಯೂಷನ್ ಕಂಟ್ರೋಲ್ ಮಾಡಲು ಬಂದ ಪರಿಸರ ಸ್ನೇಹಿ ಬಸ್ ಗಳು ಅದ್ಯಾಕೋ ಏನೋ ರಸ್ತೆಲಿ ಕಾಣ್ತಾನೆ ಇಲ್ಲ. ಡಿಸೆಂಬರ್ 27, 2021 ರಂದು ಸರ್ಕಾರ ಮಾತ್ರ 90ಬಸ್ ಗಳನ್ನ ಉದ್ಘಾಟಿಸಿ ರಸ್ತೆಗಿಳಿಸಿತ್ತು. ಆದ್ರೆ ಇದೀಗ ಒಂದೋ ಎರಡೋ ಅನ್ನೋ ಲೆಕ್ಕದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳು ಕಾಣಸಿಗ್ತಾ ಇವೆ.
ಕೇವಲ ಒಂದೇ ಜಾಗದಲ್ಲಿ ಚಾರ್ಜಿಂಗ್ ಪಾಯಿಂಟ್:
ಬಿಎಂಟಿಸಿಯಿಂದ ಗುತ್ತಿಗೆ ಪಡೆದ ಕಂಪನಿ, ನಗರದಲ್ಲಿ ಸಂಚಾರ ಮಾಡುವ 90 ಪರಿಸರ ಸ್ನೇಹಿ ಬಸ್ ಗಳಿಗೆ ಸೌಲಭ್ಯವಾಗುವಂತೆ ನಗರದ ಐದಾರು ಬಸ್ ಡಿಪೋಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನ ಅಳವಡಿಸಲಾಗುತ್ತೆ ಎಂದು ಹೇಳಿತ್ತು. ಆದ್ರೆ ಇಲ್ಲಿವರೆಗೆ ಕೆಂಗೇರಿ ಬಿಎಂಟಿಸಿ ಬಸ್ ಘಟಕದಲ್ಲಿ ಮಾತ್ರ ಚಾರ್ಜಿಂಗ್ ಪಾಯಿಂಟ್ ನ್ನ ಮಾಡಲಾಗಿದೆ. ಈ ಒಂದು ಪಾಯಿಂಟ್ ನಿಂದ ಕೇವಲ 28 ಪರಿಸರ ಸ್ನೇಹಿ ಬಸ್ ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿವೆ. ಇನ್ನುಳಿದಂತೆ 62 ಎಲೆಕ್ಟ್ರಿಕ್ ಬಸ್ ಗಳು ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ.
ಇದನ್ನೂ ಓದಿ- ರಾಜ್ಯ ರಾಜಕಾರಣದಲ್ಲಿ ಸೀಕ್ರೆಟ್ ಆಪರೇಷನ್ ನಡೆಸಿದ್ರಾ ಬಿಜೆಪಿ ಚಾಣಾಕ್ಯ?
ಇನ್ನು ಟೆಂಡರ್ ಆಧಾರದ ಪ್ರಕಾರ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಎನ್‌ಟಿಪಿಸಿ ಕಂಪನಿಯೇ ಸ್ಥಾಪಿಸಬೇಕಿತ್ತು. ಆದರೆ ಟೆಂಡರ್ ಪ್ರಕ್ರಿಯೆ ಅನುಸರಿಸಬೇಕಿದ್ದ ಕಾರಣ ಸ್ವಲ್ಪ ವಿಳಂಬವಾಗಿದೆ. ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಯಶವಂತಪುರ ಮತ್ತು ಕೆ. ಆರ್. ಪುರಂನಲ್ಲಿ ಚಾರ್ಜಿಂಗ್ ಸೌಲಭ್ಯಗಳು ಸ್ಥಾಪನೆಯಾಗಲಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ಬಸ್‌ಗಳು ಕ್ರಮಿಸುವ ದೂರದ ಆಧಾರದ ಮೇಲೆ ತಿಂಗಳಿಗೊಮ್ಮೆ ಬಿಎಂಟಿಸಿ ವತಿಯಿಂದ ಗುತ್ತಿಗೆದಾರ ಕಂಪನಿಗೆ ಹಣ ಪಾವತಿಸಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ- Chaitra Kundapura : ಮುಸ್ಲಿಂ ಹಬ್ಬಗಳ ಬಾಯ್ಕಟ್ ಅಭಿಯಾನಕ್ಕೆ ಚೈತ್ರಾ ಕುಂದಾಪುರ ಕರೆ!
ಪ್ರತಿ ಎಲೆಕ್ಟ್ರಿಕ್ ಬಸ್ ದಿನಕ್ಕೆ 180 ಕಿ.ಮೀ. ಸಂಚಾರ:
ಎನ್‌ಟಿಪಿಸಿ - ಜೆಬಿಎಂ ಆಟೋ ಜೆವಿಗೆ ಪ್ರತಿ ಕಿ. ಮೀ. ಗೆ 51.6 ರೂ. ಗಳನ್ನು ಬಿಎಂಟಿಸಿ ಪಾವತಿಸುತ್ತದೆ. ಪ್ರತಿ ಎಲೆಕ್ಟ್ರಿಕ್ ಬಸ್‌ನಲ್ಲಿ 33 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಈ ಬಸ್‌ಗಳು ವಾಹನ - ಟ್ರ್ಯಾಕಿಂಗ್ ಸೌಲಭ್ಯ, ಸಿಸಿಟಿವಿ ಕ್ಯಾಮೆರಾ, ಎಲ್‌ಇಡಿ ಡಿಸ್ಪ್ಲೇ ಬೋರ್ಡ್ ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ಹೊಂದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.