ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ : ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಹಿಂದೂ  ಧರ್ಮ ಮತ್ತು ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಪ್ರೋ ಭಗವಾನ್  ಮುಖಕ್ಕೆ ನ್ಯಾಯಾಲಯದ ಎದುರೇ ಮಸಿ ಬಳಿಯಲಾಗಿದೆ.

Written by - Ranjitha R K | Last Updated : Feb 4, 2021, 07:47 PM IST
  • ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
  • ಕೋರ್ಟ್ ಆವರಣದಲ್ಲೇ ನಡೆದ ಘಟನೆ
  • ಮಸಿ ಬಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ : ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ title=
ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ (file photo)

ಬೆಂಗಳೂರು : ಹಿಂದೂ (Hindu) ಧರ್ಮ ಮತ್ತು ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಪ್ರೋ ಭಗವಾನ್ (Prof. Bhagawan) ಮುಖಕ್ಕೆ ನ್ಯಾಯಾಲಯದ ಎದುರೇ ಮಸಿ ಬಳಿಯಲಾಗಿದೆ. ಭಗವಾನ್ ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ದೂರು ದಾಖಲಿಸಿದ್ದ ವಕೀಲೆ ಮೀರಾ ರಾಘವೇಂದ್ರ ಅವರೇ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ.

ಹಿಂದೂ (Hindu) ಧರ್ಮ ಮತ್ತು ಹಿಂದೂ ದೇವತೆಗಳ ಬಗ್ಗೆ ಸದಾ ಒಂದಿಲ್ಲೊಂದು ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದ ಪ್ರೋ ಭಗವಾನ್ (Pro. Bhagawan) ಮೇಲೆ ದೂರು ದಾಖಲಾಗಿತ್ತು. ಹಿಂದೂ ಧರ್ಮದ ಬಗೆಗಿನ ಅವಹೇಳನಕಾರಿ ಹೇಳಿಕೆ ವಿರುದ್ಧ ವಕೀಲೆ ಮೀರಾ ರಾಘವೇಂದ್ರ (Meera Raghavendra) ಅವರು ಭಗವಾನ್ ವಿರುದ್ಧ ದೂರು ದಾಖಲಿಸಿದ್ದರು. 

ಇದನ್ನೂ ಓದಿ : BIG NEWS: ರಾಜ್ಯದಲ್ಲಿ 'ತಾಲೂಕು ಪಂಚಾಯಿತಿ' ವ್ಯವಸ್ಥೆ ರದ್ದು..!

ಈ ಹಿನ್ನೆಲೆಯಲ್ಲಿ ಪ್ರೊ. ಭಗವಾನ್ ಇಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ (Court) ಹಾಜರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ಅವರಿಗೆ ಜಾಮೀನು (bail) ಮಂಜೂರು ಮಾಡಿತು. ಇದಾದ ನಂತರ ಕೋರ್ಟ್ ನಿಂದ ಭಗವಾನ್ ಹೊರ ಬರುತ್ತಿದ್ದಂತೆ, ವಕೀಲೆ ಮೀರಾ ರಾಘವೇಂದ್ರ, ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿದೆ. 

 

ಹಿಂದೂ ಧರ್ಮ ಧರ್ಮವೇ ಅಲ್ಲ, ಹಿಂದೂ ಧರ್ಮ ಅಪಮಾನಕರ. ಹಿಂದೂ ಶಬ್ದವನ್ನು ಬಳಸಬಾರದು ಎಂಬ ಹಲವಾರು ಹೇಳಿಕೆಗಳನ್ನು ಭಗವಾನ್ ನೀಡಿ ವಿವಾದ ಸೃಷ್ಟಿಸಿದ್ದರು..

ಇದನ್ನೂ ಓದಿ : Aero India 2021 : ಅತ್ಯಾಧುನಿಕ ತೇಜಸ್ ಯುದ್ಧವಿಮಾನದಲ್ಲಿ ನಭಕ್ಕೆ ಹಾರಿದ ತೇಜಸ್ವಿ ಸೂರ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News