ಬೆಂಗಳೂರು: ಶಿವಮೊಗ್ಗ ಮತ್ತು ತುಮಕೂರಿನಲ್ಲಿ ನಡೆದಿರುವ ಗಲಭೆ/ಗಲಾಟೆ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು ವಿದೇಶದಲ್ಲಿ ಜಾಲಿ ರೌಂಡ್ಸ್. ಆದರೆ, ಅವರ ತವರು ಜಿಲ್ಲೆ ತುಮಕೂರಿನಲ್ಲಿ ಹಿಂದೂಗಳಿಗೆ ಮಾತ್ರ ನರಕ. ರಾಜ್ಯದ ಪೊಲೀಸರಿಗೆ ಗೃಹ ಮಂತ್ರಿಗಳ ಹುಕ್ಕುಂ ಹೇಗಿದೆ ಎಂದರೆ, ಈದ್ ಮಿಲಾದ್ ಮೆರವಣಿಗೆಗೆ ರಾಜ ಮಾರ್ಗ, ಗಣೇಶೋತ್ಸವದ ಮೆರವಣಿಗೆಗೆ ಲಾಠಿ ಮಾರ್ಗ. ರಮೇಶ್ವರ್ ಅವರೇ, ಹಿಂದೂಗಳನ್ನೇಕೆ ದ್ವಿತೀಯ ದರ್ಜೆಯವರಂತೆ ನೋಡುತ್ತಿದ್ದೀರಿ? ಕರ್ನಾಟಕದಲ್ಲಿ ಕಾಂಗ್ರೆಸ್ ಇರುವವರೆಗೂ ಹಿಂದೂಗಳು ಇರಲೇಬಾರದೇ?’ ಎಂದು ಪ್ರಶ್ನಿಸಿದೆ.
ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್‌ಗಳಿಗೆ ಬೆಂಬಲವಾಗಿ ರಾಜ್ಯದ ಕೋಮುವಾದಿ ಕಾಂಗ್ರೆಸ್ ಸರ್ಕಾರ ನಿಂತಿರುವುದಂತು ಸ್ಪಷ್ಟ.
ಕೋಲಾರದಲ್ಲಿ ಆರಂಭವಾದ ಕೋಮುದಳ್ಳುರಿ, ಶಿವಮೊಗ್ಗವನ್ನು ದಾಟಿ, ಈಗ ವಿಜಯಪುರದ ಆಲಮಟ್ಟಿಗೆ ಕಾಲಿಟ್ಟಿದೆ.
ಆಲಮಟ್ಟಿಯಲ್ಲಿ ಹಿಂದೂಗಳು ದೇವಸ್ಥಾನದ ಪ್ರತಿಷ್ಠಾಪನೆಗೆಂದು ತಂದಿದ್ದ ದೇವರ ಮೂರ್ತಿಗಳನ್ನು, ಜಿಹಾದಿಗಳು… pic.twitter.com/6b0DXiT2uj
— BJP Karnataka (@BJP4Karnataka) October 6, 2023
ಆಲಮಟ್ಟಿಗೂ ಕಾಲಿಟ್ಟ ಕೋಮುದಳ್ಳುರಿ!
ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್‌ಗಳಿಗೆ ಬೆಂಬಲವಾಗಿ ರಾಜ್ಯದ ಕೋಮುವಾದಿ ಕಾಂಗ್ರೆಸ್ ಸರ್ಕಾರ ನಿಂತಿರುವುದಂತು ಸ್ಪಷ್ಟ. ಕೋಲಾರದಲ್ಲಿ ಆರಂಭವಾದ ಕೋಮುದಳ್ಳುರಿ, ಶಿವಮೊಗ್ಗವನ್ನು ದಾಟಿ, ಈಗ ವಿಜಯಪುರದ ಆಲಮಟ್ಟಿಗೆ ಕಾಲಿಟ್ಟಿದೆ. ಆಲಮಟ್ಟಿಯಲ್ಲಿ ಹಿಂದೂಗಳು ದೇವಸ್ಥಾನದ ಪ್ರತಿಷ್ಠಾಪನೆಗೆಂದು ತಂದಿದ್ದ ದೇವರ ಮೂರ್ತಿಗಳನ್ನು, ಜಿಹಾದಿಗಳು ಧ್ವಂಸಗೊಳಿಸಿ ಕ್ರೌರ್ಯ ಮೆರೆದಿದ್ದಾರೆ. ಸೂಕ್ತ ಸಾಕ್ಷ್ಯಾಧಾರ ಸಮೇತ ಸಿಕ್ಕಿಬಿದ್ದಿರುವ ಇಂತಹ ಜಿಹಾದಿಗಳಿಗೆ ಡಾ.ಜಿ.ಪರಮೇಶ್ವರ್ ಅವರು “ಅಮಾಯಕ” ಪಟ್ಟ ಕಟ್ಟದಿದ್ದರೆ ಸಾಕು’ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದ ಹಿಂದೂಗಳಿಗೆ ಬದುಕಲು ಭಯದ ವಾತಾವರಣವನ್ನು ನಿರ್ಮಿಸಿದ್ದೇ @INCKarnataka ಸರ್ಕಾರದ ನಾಲ್ಕು ತಿಂಗಳ ಮಹಾನ್ ಸಾಧನೆ.
"ಕೈ" ಸರ್ಕಾರದ ಅತಿಯಾದ ತುಷ್ಟೀಕರಣದ ರಾಜಕಾರಣದ ಪರಿಣಾಮ, ಜಿಹಾದಿಗಳ ಅಟ್ಟಹಾಸ ಎಲ್ಲೆ ಮೀರಿದ್ದು, ಹಿಂದೂಗಳ ನೆಮ್ಮದಿಗೆ ಭಂಗ ತರುವುದೇ ಜಿಹಾದಿಗಳ ಪ್ರಮುಖ ಅಜೆಂಡಾ.
ಕೇವಲ ವೋಟಿಗಾಗಿ ಭಯೋತ್ಪಾದಕರನ್ನು,… pic.twitter.com/ZRcMPYMG8I
— BJP Karnataka (@BJP4Karnataka) October 6, 2023
ಇದನ್ನೂ ಓದಿ: Cauvery water dispute: ಕಾವೇರಿ ನೀರಿಗಾಗಿ ಜೀವಂತ ಸಮಾಧಿಯಾಗಿ ವಿನೂತನ ಪ್ರತಿಭಟನೆ!
ಹಿಂದೂಗಳಿಗೆ ಭಯದ ವಾತಾವರಣ!
ಗಲಭೆಗಳಿಂದಲೇ ಲಾಭ ಮಾಡಿಕೊಳ್ಳುವ ಹುನ್ನಾರ ಮಾಡಿಕೊಂಡಿರುವ @siddaramaiah ಅವರ ಸರ್ಕಾರ, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಹಳ್ಳ ಹಿಡಿಸುತ್ತಿರುವ ಪರಿ ಇದು.
ಬೆಂಗಳೂರು ಕೇಂದ್ರ ಅಪರಾಧ ವಿಭಾಗಕ್ಕೆ ಮುಖ್ಯಸ್ಥರನ್ನೇ ನೇಮಕ ಮಾಡದೆ @INCKarnataka ಚೆಲ್ಲಾಟವಾಡುತ್ತಿರುವುದರ ಹಿಂದೆ ಇರುವುದು ಸಮಾಜದಲ್ಲಿ ಅಶಾಂತಿ… pic.twitter.com/E4rlLdTIkW
— BJP Karnataka (@BJP4Karnataka) October 6, 2023
ರಾಜ್ಯದ ಹಿಂದೂಗಳಿಗೆ ಬದುಕಲು ಭಯದ ವಾತಾವರಣವನ್ನು ನಿರ್ಮಿಸಿದ್ದೇ ಕಾಂಗ್ರೆಸ್ ಸರ್ಕಾರದ 4 ತಿಂಗಳ ಮಹಾನ್ ಸಾಧನೆ. "ಕೈ" ಸರ್ಕಾರದ ಅತಿಯಾದ ತುಷ್ಟೀಕರಣದ ರಾಜಕಾರಣದ ಪರಿಣಾಮ, ಜಿಹಾದಿಗಳ ಅಟ್ಟಹಾಸ ಎಲ್ಲೇ ಮೀರಿದ್ದು, ಹಿಂದೂಗಳ ನೆಮ್ಮದಿಗೆ ಭಂಗ ತರುವುದೇ ಜಿಹಾದಿಗಳ ಪ್ರಮುಖ ಅಜೆಂಡಾ. ಕೇವಲ ವೋಟಿಗಾಗಿ ಭಯೋತ್ಪಾದಕರನ್ನು, ಗಲಭೆಕೋರರನ್ನು ಸಮರ್ಥಿಸುವ ಕಾಂಗ್ರೆಸ್‌ನ ಓಲೈಕೆ ರಾಜಕಾರಣ ಹೀಗೆಯೇ ಮುಂದುವರೆದರೆ, ರಾಜ್ಯದ ಹಿಂದೂಗಳ ಬದುಕು ಮತ್ತಷ್ಟು ದುಸ್ತರವಾಗುವುದು ಖಂಡಿತ’ವೆಂದು ಬಿಜೆಪಿ ಕುಟುಕಿದೆ.
‘ಗಲಭೆಗಳಿಂದಲೇ ಲಾಭ ಮಾಡಿಕೊಳ್ಳುವ ಹುನ್ನಾರ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯರ ಸರ್ಕಾರ, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಹಳ್ಳ ಹಿಡಿಸುತ್ತಿರುವ ಪರಿ ಇದು. ಬೆಂಗಳೂರು ಕೇಂದ್ರ ಅಪರಾಧ ವಿಭಾಗಕ್ಕೆ ಮುಖ್ಯಸ್ಥರನ್ನೇ ನೇಮಕ ಮಾಡದೆ ಕಾಂಗ್ರೆಸ್ ಚೆಲ್ಲಾಟವಾಡುತ್ತಿರುವುದರ ಹಿಂದಿರುವುದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತನ್ನ ರಾಜಕೀಯ ಸ್ವಾರ್ಥ ಈಡೇರಿಸಿಕೊಳ್ಳುವ ಕೀಳು ಉದ್ದೇಶ. ವಿದೇಶ ಯಾತ್ರೆಯ ಮಜಾ ಅನುಭವಿಸುತ್ತಿರುವ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಮ್ಮ ಇಲಾಖೆಯ ಭ್ರಷ್ಟಾಚಾರದ ಟಾರ್ಗೆಟ್ ತಲುಪಲು ಐಪಿಎಸ್ ಅಧಿಕಾರಿಗಳ ನಡುವೆ “ಪೈಪೋಟಿ” ಸೃಷ್ಟಿಸಿ ವ್ಯವಹಾರದ ಸಮಯಕ್ಕಾಗಿ ಕಾಯುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ನ.30 ತನಕ ನೀರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.