ವಿಜಯಪುರ : ಶಿಫಾರಸ್ಸು ಮಾಡಲಿ, ಶಿಸ್ತು ಕಮೀಟಿ ಅಂದ್ರೆ ಏನು? ನನ್ನ ಕರಿಸ್ತಾರಲ್ಲ ಅಲ್ಲಿ ಹೇಳ್ತೇನೆ. ಹಿಂದೇನು ಕರಿಸಿದ್ರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಿಸ್ತು ಸಮಿತಿಗೆ ಶಿಫಾರಸ್ಸು ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಯತ್ನಾಳ್, ರಾಜ್ಯಾಧ್ಯಕ್ಷರೆ ಕ್ಲಿಯರ್ ಆಗಿ ಹೇಳಿದ್ದಾರಲ್ಲ. ಪಾರ್ಟಿ ಬಗ್ಗೆ ಹೇಳಿಲ್ಲ, ಇನ್ ಜನರಲ್ ಆಗಿ ಮಾತಾಡಿದ್ದಾರೆ ಅಂತಾ. ಇಷ್ಟರ ಮೇಲೆ ಏನು ಶಿಸ್ತು ಕ್ರಮ. ಶಿಸ್ತು ಕ್ರಮ ಅಂತಾ ಕೆಲ ಮಾಧ್ಯಮಗಳು ಹೊಡೆಯುತ್ತಿವೆ. ಅದು ಏನು ಆಗೋದಿಲ್ಲ. ಮಾಧ್ಯಮದಲ್ಲಿ ಹೇಳಿದ್ದೆಲ್ಲ ಸತ್ಯವಲ್ಲ. ಸತ್ಯ 24 ಕ್ಯಾರೆಟ್ ಬಂಗಾರ. ಸತ್ಯಕ್ಕೆ ಫಿಲ್ಟರ್ ಇರೋಲ್ಲ, ಸುಳ್ಳಿಗೆ ಪಿಲ್ಟರ್ ಇರುತ್ತೆ ಎಂದು ಹೇಳಿದರು.
ಇದನ್ನೂ ಓದಿ : 'ಎಲ್ಲ ಹಗರಣಗಳಿಗೂ ಯತ್ನಾಳ್ ಮಾಡಿರುವ ಆರೋಪಕ್ಕೂ ನೇರವಾದ ಸಂಬಂಧ ಇದೆ'
ಡಿಕೆಶಿ ವಿರುದ್ಧ ಯತ್ನಾಳ್ ಸಿಡಿಮಿಡಿ
ಡಿಕೆ ಶಿವಕುಮಾರ್ ಕುರಿತು ಮಾತನಾಡಿದ ಅವರು, ಡಿಕೆಶಿಗೆ ನನ್ನ ಭಯ ಬಗ್ಗೆ ಶುರುವಾಗಿದೆ. ಯತ್ನಾಳ್ ಸಿಎಂ ಆದ್ರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿಕೆಶಿಗೆ ಇದೆ. ಮತ್ತೆ ಅದೆ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಭಯ ಶುರುವಾಗಿದೆ. ಡಿಕೆಶಿ ಗೆ ಏನೋ ಒಂದು ಸಂದೇಶ ಸಿಕ್ಕಿದೆ. ಯತ್ನಾಳ್ ಪವರ್‌ಪುಲ್ ಮನುಷ್ಯ ಆದ್ರೆ ಅನ್ನೋ ಭಯ ಇದೆ. ನಾನು ಸಚಿವ ಸ್ಥಾನ ಕೇಳಿಯೇ ಇಲ್ಲ. ನಾನು ವಿಧಾನ ಸೌಧದಲ್ಲಿ 2 ಸಾವಿರ ಕೋಟಿ ವಿಚಾರ ಮಾತನಾಡಿದಾಗ ಇದು ಇಶ್ಯೂ ಆಗಲಿಲ್ಲ. ರಾಮದುರ್ಗದಲ್ಲು ಹೇಳಿದ್ದೀನಿ. ವಿಧಾನ ಸೌಧದಲ್ಲಿ ಹೇಳಿದಾಗ ಯಾಕೆ ಚರ್ಚೆ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯ ಸುಳಿವಿದೆ, ಹೀಗಾಗಿ ನಾನು ಟಾರ್ಗೆಟ್ ಆಗಿದ್ದೇನೆ.
ಯತ್ನಾಳ್ ಬಗ್ಗೆ ಭಯ ಇದೆ. ಯತ್ನಾಳ್ ಏನಾದರೂ ಆದ್ರೆ ಬುಲ್ಡೋಜರ್ ತರ್ತಾರೆ ಅಂತಾ ಭಯ. ಅಕ್ರಮ ಆಸ್ತಿ ಒಡೆಯೋಕೆ ಶುರು ಮಾಡ್ತಾರೆ ಅಂತಾ ಭಯ. ನಾನು ಸಿಎಂ ಆದ್ರೆ ಬುಲ್ಡೋಜರ್ ರೆಡಿ ಇಟ್ಟಿದ್ದೀನಿ. ಬುಲ್ಡೊಜರ್ ಗೆ ಆರ್ಡರ್ ಕೊಟ್ಟಿದ್ದೀನಿ. ನನ್ನ ಸಚಿವ ಸ್ಥಾನ ತಪ್ಪಿಸಲು ಇದು ಷಡ್ಯಂತ್ರ ಎಂದು ಹೇಳಿದರು.
ಇದನ್ನೂ ಓದಿ : "ಕಟ್ಟಿದೆವು ಕಟ್ಟಿದೆವು ರಾಮ ಮಂದಿರ ಕಟ್ಟಿದೆವು.." ಗೋಲಗುಮ್ಮಟದಲ್ಲಿ ಜೈ ಶ್ರೀರಾಮ ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.