Bike Wheeling : ವೀಲಿಂಗ್‌ ಮಾಡಿ ರೀಲ್ಸ್!‌ ಆರ್‌.ಟಿ ನಗರ ಪೊಲೀಸರ ಬಲೆಗೆ ಬಿದ್ದ ಪುಂಡ

ಇದೇ ರೀತಿ ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ವಿಲಿಂಗ್ ಮಾಡುತ್ತಿದ್ದ ಪುಂಡನನ್ನು ಅಂದರ್‌ ಮಾಡಿದ್ದಾರೆ ಸಿಲಿಕಾನ್‌ ಸಿಟಿ ಪೊಲೀಸರು. 

Written by - Malathesha M | Last Updated : Feb 20, 2022, 01:45 PM IST
  • ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಜೊತೆ ವೀಲಿಂಗ್‌ ಚೋರರ ಕಾಟ
  • ಇದೇ ರೀತಿ ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ವಿಲಿಂಗ್
  • ಬಂಧಿತ ಆರೋಪಿಯನ್ನು 20 ವರ್ಷದ ವಿಜಯ್‌ ಎಂದು ಗುರುತಿಸಲಾಗಿದೆ
Bike Wheeling : ವೀಲಿಂಗ್‌ ಮಾಡಿ ರೀಲ್ಸ್!‌ ಆರ್‌.ಟಿ ನಗರ ಪೊಲೀಸರ ಬಲೆಗೆ ಬಿದ್ದ ಪುಂಡ title=

ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಜೊತೆ ವೀಲಿಂಗ್‌ ಚೋರರ ಕಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ರೀತಿ ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ವಿಲಿಂಗ್ ಮಾಡುತ್ತಿದ್ದ ಪುಂಡನನ್ನು ಅಂದರ್‌ ಮಾಡಿದ್ದಾರೆ ಸಿಲಿಕಾನ್‌ ಸಿಟಿ ಪೊಲೀಸರು. 

ಹೋಂಡಾ ಡಿಯೋ ಬೈಕ್ ನಲ್ಲಿ ಡೆಡ್ಲಿ ವೀಲಿಂಗ್(Bike Wheeling) ಮಾಡುತ್ತಿದ್ದ ಪುಂಡನ ವಿಡಿಯೋ ನೋಡಿ ಅಲರ್ಟ್‌ ಆದ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು. ಆರ್.ಟಿ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಕಡೆಗೂ ಪುಂಡ ಲಾಕ್‌ ಆಗಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.

ಇದನ್ನೂ ಓದಿ : ಕಳ್ಳ-ಪೊಲೀಸ್ ಆಟ: ಖತರ್ನಾಕ್ ಖದೀಮ ಲಾಕ್ ಆಗಿದ್ದೇಗೆ ಗೊತ್ತಾ..?

ಪುಂಡನಿಗೆ ರೀಲ್ಸ್‌ ಚಟ!

ಬಂಧಿತ ಆರೋಪಿಯನ್ನು 20 ವರ್ಷದ ವಿಜಯ್‌ ಎಂದು ಗುರುತಿಸಲಾಗಿದೆ. ಈತನಿಗೆ ರೀಲ್ಸ್‌(Reels) ಮಾಡುವ ಹ್ಯಾಬಿಟ್‌ ಇತ್ತು. ಅಲ್ಲೋ, ಇಲ್ಲೋ ನಿಂತು ಎಲ್ಲರಂತೆ ಈತನೂ ರೀಲ್ಸ್‌ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈತ ಮಾಡಿದ್ದೇ ಬೇರೆ. ಬೈಕ್‌ ಜೊತೆ ಸರ್ಕಸ್‌ ಮಾಡುತ್ತಾ, ಬ್ಯುಸಿ ರೋಡ್‌ನಲ್ಲೇ ವೀಲಿಂಗ್‌ ಮಾಡಿ ಎಲ್ಲರಿಗೂ ಟಾರ್ಚರ್ ಕೊಡುತ್ತಿದ್ದ.

ಹೀಗೆ ರೀಲ್ಸ್‌ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ(Social Media) ಶೇರ್‌ ಮಾಡುತ್ತಿದ್ದ. ಮೇಖ್ರಿ ಅಂಡರ್ ಪಾಸ್, ಸಿಬಿಐ‌ ಕಚೇರಿ ರಸ್ತೆಯಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಿದ್ದ. ಹಾಗೇ ವೀಲಿಂಗ್ ಜೊತೆಗೆ ಬೈಕ್ ಡ್ರಾಗ್ ರೇಸ್  ಕೂಡ  ಮಾಡುತ್ತಿದ್ದನಂತೆ ಈತ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ವೀಲಿಂಗ್‌ ಚಟಕ್ಕೆ ಬಿದ್ದವನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಬೈಕ್‌ ಸೀಜ್‌ ಮಾಡಿ, ವೀಲಿಂಗ್‌ ಮಾಡುತ್ತಿದ್ದ ಆರೋಪಿ ವಿಜಯನ್‌ನನ್ನ ಕಂಬಿ ಹಿಂದೆ ತಳ್ಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News