236 ಕೋಟಿವಿದ್ಯುತ್ ಬಿಲ್ ಬಾಕಿ: BWSSB, ಬಿಬಿಎಂಪಿಗೆ ಬೆಸ್ಕಾಂ ನಿಂದ ನೋಟಿಸ್‌

ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರ ಮತ್ತು ವೈಟ್‌ ಫೀಲ್ಡ್‌  ವಿಭಾಗಗಳಿಗೆ  ಬಿಡ್ಬ್ಲೂಎಸ್‌ ಎಸ್‌ ಬಿ ಮತ್ತು ಬಿಬಿಎಂಪಿ  ನೀರು ಸರಬರಾಜು ವಿಭಾಗಗಳಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಲಾಗಿದೆ.

Written by - Ranjitha R K | Last Updated : Nov 18, 2022, 04:29 PM IST
  • ಬಿಬಿಎಂಪಿ ಸೇರಿ bwssb ಕಚೇರಿಗಳಿಗೆ ಬೆಸ್ಕಾಂ ಶಾಕ್
  • ವಿದ್ಯುತ್‌ ಶುಲ್ಕ ಬಾಕಿಯನ್ನ ಕೂಡಲೇ ಪಾವತಿಸಿ ಎಂದು ಎಚ್ಚರಿಕೆ
  • 236 ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ bwssb
236 ಕೋಟಿವಿದ್ಯುತ್ ಬಿಲ್ ಬಾಕಿ: BWSSB, ಬಿಬಿಎಂಪಿಗೆ ಬೆಸ್ಕಾಂ ನಿಂದ ನೋಟಿಸ್‌ title=

ಬೆಂಗಳೂರು : ಬರೊಬ್ಬರಿ 236 ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ಸೇರಿ bwssb ಕಚೇರಿಗಳಿಗೆ ಬೆಸ್ಕಾಂ ಶಾಕ್ ನೀಡಿದೆ. ಕೂಡಲೇ ಬಾಕಿ ಇರುವ ಕೋಟ್ಯಾಂತರ ರೂ.ಗಳನ್ನ ಕಟ್ಟಿ ಎಂದು ನೋಟೀಸ್ ಜಾರಿ ಮಾಡಿದೆ. ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರ ಮತ್ತು ವೈಟ್‌ ಫೀಲ್ಡ್‌  ವಿಭಾಗಗಳಿಗೆ  ಬಿಡ್ಬ್ಲೂಎಸ್‌ ಎಸ್‌ ಬಿ ಮತ್ತು ಬಿಬಿಎಂಪಿ  ನೀರು ಸರಬರಾಜು ವಿಭಾಗಗಳಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಲಾಗಿದೆ.

ಹಲವಾರು ಬಾರಿ ಬಾಕಿ ಇರುವ ಬಿಲ್ ಪಾವತಿಸುವಂತೆ ನೋಟೀಸ್ ನೀಡಿದ್ರೂ ಸಂಬಂಧಪಟ್ಟ ಇಲಾಖೆ ಮತ್ತು ನಿಗಮಗಳು ಹಣವನ್ನ ಪಾವತಿ ಮಾಡಿರಲಿಲ್ಲ. ಹೀಗಾಗಿ ಈ ಬಾರಿ ಕಡೆಯ ವಾರ್ನಿಂಗ್ ನೀಡಿರುವ ಬೆಸ್ಕಾಂ, 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್‌ ಶುಲ್ಕ ಬಾಕಿಯನ್ನ ಕೂಡಲೇ ಪಾವತಿಸಿ ಎಂದು  ಎಚ್ಚರಿಕೆ ನೀಡಿದೆ. 

ಇದನ್ನೂ ಓದಿ : ಹ್ಯೂಮನ್ ರೈಟ್ಸ್ ಆಫೀಸರ್ ಹೆಸರಿನಲ್ಲಿ ಹಣ ವಸೂಲಿ: ಆರೋಪಿಗಳ ಬಂಧನ

ಬೆಸ್ಕಾಂನ ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡ್‌ನ್‌ , ಬಂಬೂ ಬಜಾರ್‌, ಕಾಕ್ಸ್‌ ಟೌನ್‌, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ  ಬಿಡ್ಬ್ಲೂಎಸ್‌ ಎಸ್‌ ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ 27.54 ಕೋಟಿ ರೂ ಮತ್ತು 90.20 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಬಾಕಿ ಪಾವತಿಸಲು ಸೂಚಿಸಿ ಶಿವಾಜಿನಗರ ಕಾರ್ಯನಿರ್ವಾಹಕ ಇಂಜಿನಿಯರ್‌ ಎರಡೂ ಸಂಸ್ಥೆಗಳಿಗೆ ಪ್ರತ್ಯೇಕ ನೋಟಿಸ್‌ ಜಾರಿಗೊಳಿಸಿದ್ದಾರೆ.

ಬೆಸ್ಕಾಂನ ಕೋರಮಂಗಲ ವಿಭಾಗದ ಆಸ್ಟಿನ್‌ ಟೌನ್‌, ಕೋರಮಂಗಲ, ಮುರುಗೇಶ್‌ ಪಾಳ್ಯ, ಮಡಿವಾಳ, ಹೆಚ್.ಎ.ಎಲ್‌ ಉಪ ವಿಭಾಗಳ ವ್ಯಾಪ್ತಿಗೆ  ಒಳಪಡುವ 10 ವಾರ್ಡ್‌ ಗಳಿಂದ ಬಿಡ್ಬ್ಲೂಎಸ್‌ ಎಸ್‌ ಬಿ 23.71 ಕೋಟಿ ರೂ. ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿದ್ದು, 19 ವಾರ್ಡ್‌ ಗಳಿಂದ ಬಿಬಿಎಂಪಿ ಸುಮಾರು 22.20 ಕೋಟಿ ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ. 

ಇದನ್ನೂ ಓದಿ : ಪುರಾತನ ‘ಕಾಮಸೂತ್ರ’ದ ತೈಲಚಿತ್ರ ಮಾರಾಟಕ್ಕೆ ಯತ್ನ: ಇವುಗಳ ಬೆಲೆ ಕೇಳಿದ್ರೆ ಹೌಹಾರ್ತೀರಿ!

ಮಲ್ಲೇಶ್ವರ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಉಪ ವಿಭಾಗಗಳಿಗೆ ಬಿಡ್ಬ್ಲೂಎಸ್‌ ಎಸ್‌ ಬಿ ಮತ್ತು ಬಿಬಿಎಂಪಿ ಕ್ರಮವಾಗಿ 13.60 ಕೋಟಿ ರೂ. ಮತ್ತು 16.70 ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ. ಮಲ್ಲೇಶ್ವರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಎರಡೂ ಸಂಸ್ಥೆಗಳಿಗೆ ಬಿಲ್‌ ಪಾವತಿಸಲು ಕೋರಿ ನೋಟಿಸ್‌ ಜಾರಿಗೊಳಿಸಿದ್ದಾರೆ. ಇಂದಿರಾನಗರ ವಿಭಾಗಕ್ಕೆ ಬಿಬಿಎಂಪಿ, ಬಿಡ್ಬ್ಲೂಎಸ್‌ ಎಸ್‌ ಬಿ, ಕಬ್ಬನ್‌ ಪಾರ್ಕ್‌, ವಸತಿ ಇಲಾಖೆ ಮ್ಯೂಸಿಯಂ, ತೋಟಗಾರಿಕೆ ಇಲಾಖೆ, ಪೋಸ್ಟ್‌ ಆಫೀಸ್‌, ನ್ಯಾಷನಲ್‌ ಎರೋನಾಟಿಕ್ಸ್‌ ಲಿಮಿಟೆಡ್‌, ಎಲ್‌ ಐ. ಸಿ, ಬಿ.ಎಸ್. ಎನ್.ಎಲ್‌, ಬಿ.ಡಿ.ಎ. ಬಿ.ಎಂ.ಆರ್‌ ಸಿ.ಎಲ್‌, ಡಿ.ಆರ್.ಡಿ. ಓ, ಹೈಕೋರ್ಟ್‌ ವಸತಿಗೃಹ, ಮುಂತಾದ ಸರಕಾರಿ ಕಚೇರಿಗಳು ಒಟ್ಟು 36.25 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿದೆ ಎಂದು ಇಂದಿರಾನಗರ ಕಾರ್ಯನಿರ್ವಾಹಕ ಇಂಜಿನಿಯರ್‌ ನೀಡಿರುವ ನೋಟಿಸ್‌ ನಲ್ಲಿ ವಿವರಿಸಲಾಗಿದೆ.

ಹಾಗೆಯೇ ವೈಟ್‌ ಫೀಲ್ಡ್‌ ವಿಭಾಗದ ವ್ಯಾಪ್ತಿಗೆ ಬರುವ ಒಟ್ಟು 7 ವಾರ್ಡ್‌ ಗಳಿಂದ  ಬೆಸ್ಕಾಂಗೆ  ಬಿಡ್ಬ್ಲೂಎಸ್‌ ಎಸ್‌ ಬಿ ಮತ್ತು ಬಿಬಿಎಂಪಿ ಗಳಿಂದ ಒಟ್ಟು 5.81 ಕೋಟಿ ರೂ. ವಿದ್ಯುತ್‌ ಶುಲ್ಕ ಬಾಕಿ ಇದೆ. ವಿದ್ಯುತ್‌ ಬಿಲ್‌ ವಸೂಲಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News