ಮೀನುಗಾರಿಕೆ ಮಾಡಿ ಆತ್ಮ ನಿರ್ಭರರಾಗಿ, ಇಗೋ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ....!

 ಮೀನುಗಾರಿಕೆ ಇಲಾಖೆಯ ವತಿಯಿಂದ 2020-21ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಸಹಾಯಧನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Last Updated : Jul 21, 2020, 10:45 PM IST
ಮೀನುಗಾರಿಕೆ ಮಾಡಿ ಆತ್ಮ ನಿರ್ಭರರಾಗಿ, ಇಗೋ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ....!  title=
file photo(facebook)

ಬೆಂಗಳೂರು:  ಮೀನುಗಾರಿಕೆ ಇಲಾಖೆಯ ವತಿಯಿಂದ 2020-21ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಸಹಾಯಧನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಕೃಷಿ ಕೊಳಗಳ ನಿರ್ಮಾಣ, ಬಯೋಫ್ಲಾಕ್ ಮಾದರಿಯಲ್ಲಿ ಮೀನು ಕೊಳಗಳ ನಿರ್ಮಾಣ, ಮೀನುಮರಿ ಉತ್ಪಾದನಾ ಕೇಂದ್ರ ಅಥವಾ ಪಾಲನಾ ಕೇಂದ್ರಗಳ ಸ್ಥಾಪನೆ, ಶೀತಲ ಗೃಹ ನಿರ್ಮಾಣ, ಆರ್.ಎ.ಎಸ್ ಘಟಕ ಸ್ಥಾಪನೆ, ಮಂಜುಗಡ್ಡೆ ಸ್ಥಾವರ ನಿರ್ಮಿಸುವುದು, ಅಲಂಕಾರಿಕ ಮೀನು ಉತ್ಪಾದಕ ಘಟಕ, ಕ್ರೀಡಾ ಮೀನುಗಾರಿಕೆ, ಮೀನು ಆಹಾರ ಉತ್ಪಾದನಾ ಘಟಕ ಇತ್ಯಾದಿ ಯೋಜನೆಗಳಡಿಯಲ್ಲಿ ಘಟಕ ವೆಚ್ಚದ ಮೇಲೆ ಸಾಮಾನ್ಯ ಫಲಾನುಭವಿಗಳಿಗೆ ಶೇ.40ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ.60ರಷ್ಟು ಸಹಾಯಧನ ನೀಡಲಾಗುತ್ತದೆ.

ಪ್ರಸಕ್ತ ಸಾಲಿನ ಜಿ.ಪಂ ಯೋಜನೆಗಳಾದ ಮೀನುಕೊಳ ನಿರ್ಮಾಣಕ್ಕೆ ಸಹಾಯಧನ, ಬಾವಿ ಹೊಂಡದಲ್ಲಿ 500 ಉಚಿತ ಮೀನುಮರಿ ಬಿತ್ತನೆ, ಕೆರೆ ಗುತ್ತಿಗೆದಾರರಿಗೆ ಹುಲ್ಲುಗೆಂಡೆ ಮೀನುಮರಿ ಸರಬರಾಜಿಗೆ ಶೇ.50 ರಷ್ಟು ಸಹಾಯ, ಮೀನು ಮಾರಾಟ ಮತ್ತು ಮತ್ಸವಾಹಿನಿಗೆ ಸಹಾಯ ಯೋಜನೆಯಡಿ ದ್ವಿಚಕ್ರ ವಾಹನ ಹಾಗೂ ಐಸ್‌ಬಾಕ್ಸ್ ವಿತರಣೆಗೆ ಸಹಾಯ ಯೋಜನೆ ಹಾಗೂ ರಾಜ್ಯ ವಲಯ ಯೋಜನೆಗಳಾದ ಮೀನುಮರಿ ಖರೀದಿಗೆ ಸಹಾಯಧನ, ಮೀನುಕೊಳ ನಿರ್ಮಾಣಕ್ಕೆ ಸಹಾಯ, ಮತ್ಸ ಕೃಷಿ ಆಶಾ ಕಿರಣ ಯೋಜನೆ, ಮೀನುಗಾರಿಕೆ ಸಲಕರಣೆ ಕಿಟ್ ಸರಬರಾಜು ಯೋಜನೆಯಡಿ ಸಹಾಯ ಪಡೆದುಕೊಳ್ಳಲು ಆಸಕ್ತರು ಅರ್ಜಿಯನ್ನು ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಜುಲೈ31 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ತಾಲ್ಲೂಕು ಮಟ್ಟದ ಅಧಿಕಾರಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕೊಪ್ಪಳ #ಮೊ.ಸಂ.9110878145, ಗಂಗಾವತಿ-ಮೊ.ಸA.9632338221, ಕುಷ್ಟಗಿ ಮೊ.9108416046 ಹಾಗೂ ಜಿಲ್ಲಾ ಕಚೇರಿಯ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಕೊಪ್ಪಳ- ಮೊ.ಸಂ.9886430338 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News