ಬೆಂಗಳೂರು : ಈ ಫೋಟೋದಲ್ಲಿ ಕಾಣ್ತಿರುವ ಮಹಿಳೆಯ ಹೆಸರು ಉಜ್ಮಾ ಖಾನ್, ವಯಸ್ಸು 44. ಹೆಚ್‌ಬಿಆರ್ ಲೇಔಟ್ ನಲ್ಲಿ ತಾಯಿ ಜೊತೆಗೆ ವಾಸವಿದ್ದ ಈ ಚೆಲುವೆ ಗಂಡನಿಂದ ವಿಚ್ಛೇದನ ಪಡೆದು ದೂರವಾಗಿದ್ಳು. ಇನ್ನು ಈತ 53 ವರ್ಷದ ಇಮ್ದಾದ್ ಬಾಷ. ಮುಂಬೈನಲ್ಲಿ ಕೆಲಸ ಮಾಡ್ತಿದ್ದ ಈ ಟೆಕ್ಕಿ ಪತ್ನಿ ಜೊತೆಗೆ ಸರಿ ಹೊಂದದೇ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಕುಂದಲಹಳ್ಳಿ ಸಮೀಪದ ಸ್ಪೈಸ್ ಗಾರ್ಡನ್ ನಲ್ಲಿ ಮನೆ ಮಾಡಿಕೊಂಡು ವಾಸವಿದ್ದ. ಅಷ್ಟೇ ಅಲ್ಲ ಆಗಿನ ಲವ್ ಬರ್ಡ್ಸ್ ಮತ್ತೆ ಒಂದಾಗಿದ್ರು. ಇಮ್ದಾದ್ ಮನೆಗೆ ಉಜ್ಮಾ ಖಾನ್ ಆಗಾಗ ಬಂದು ಹೋಗ್ತಿದ್ಳು. ಆದ್ರೆ ಹೊಸ ವರ್ಷದ ದಿನ ಈ ಮನೆಯಲ್ಲಿ ಬೇರೆಯದ್ದೆ ಸೀನ್ ನಡೆದಿತ್ತು.
ಹೌದು, ಅದು ಜನವರಿ 1 ರಂದು ಮಧ್ಯಾಹ್ನ 12.30 ರ ಸಮಯ. ಸಂಬಂಧಿಕರಿಗೆ ಮೆಸೇಜ್ ಮಾಡಿದ್ದ ಇಮ್ದಾದ್ ಬಾಷ ನಾನು ಮತ್ತು ಉಜ್ಮಾ ಖಾನ್ ಪ್ರೀತಿ ಮಾಡ್ತಾ ಇದ್ದೀವಿ.ನಮ್ಮ ಎರಡನೇ ಮದುವೆಗೆ ನನ್ನ ಮೊದಲ ಪತ್ನಿ ಅಡ್ಡ ಬರ್ತಿದ್ದಾಳೆ. ಹಾಗಾಗಿ ಇಬ್ಬರು ವಿಷ ತೆಗೆದುಕೊಂಡು ಸಾಯುತ್ತೇವೆ ಎಂದು ಮೆಸೆಜ್ ಮಾಡಿದ್ದ. ಸಂಬಂಧಿಯೊಬ್ಬರು ತಕ್ಷಣ 112 ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. 1 ಗಂಟೆ ಅಷ್ಟೊತ್ತಿಗೆ ಸ್ಥಳಕ್ಕೆ ಹೋಗಿದ್ದ ಹೆಚ್ಎಎಲ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಉಜ್ಮಾ ಖಾನ್ ಮೃತಪಟ್ಟಿರೋದು ಗೊತ್ತಾದ್ರೆ.ಇಮ್ದಾದ್ ಲೈಜಾಲ್ ಮತ್ತು ಹಾರ್ಪಿಕ್ ಬೆರೆಸಿ ಕುಡಿದು ಅಸ್ವಸ್ಥನಾಗಿದ್ದ. ತಕ್ಷಣ ಆತನನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೆಎಲ್ ರಾಹುಲ್ ತಂಡದಿಂದ ಹೊರಕ್ಕೆ!!
12.30ಕ್ಕೆ ಈಗ ಸಾಯ್ತಿವಿ ಎಂದು ಇಮ್ದಾದ್ ಹೇಳಿದ್ದ. ಆದ್ರೆ ಮಧ್ಯಾಹ್ನ 2 ಗಂಟೆ ಅಷ್ಟೊತ್ತಿಗೆ ಉಜ್ಮಾ ಖಾನ್ ಮೃತದೇಹ ಪರಿಶೀಲಿಸಿದ ವೈದ್ಯರಿಗೆ ಅದಾಗಲೇ ಉಜ್ಮಾ ಖಾನ್ ಸತ್ತು 10 ರಿಂದ 12 ಗಂಟೆ ಆಗಿದೆ ಅನ್ನೋದು ಗೊತ್ತಾಗಿದೆ. ಅಲ್ಲದೇ ಉಜ್ಮಾ ಮೊಬೈಲ್ ನಲ್ಲಿದ್ದ ಚಾಟ್ ಹಿಸ್ಟರಿ ಕೂಡ ಡಿಲೀಟ್ ಆಗಿತ್ತು. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಹಾಗಾಗಿ ಉಜ್ಮಾ ಖಾನ್ ಳನ್ನ 31 ರಂದು ರಾತ್ರಿಯೇ ಕೊಂದು ಈ ಆತ್ಮಹತ್ಯೆ ನಾಟಕ ಆಡ್ತಿದ್ದಾನೆ ಅನ್ನೋ ಅನುಮಾನ ಪೊಲೀಸರು ಹಾಗೂ ಕುಟುಂಬಸ್ಥರದ್ದು. ಈ ಅನುಮಾನ ಬರೋದಕ್ಕೂ ಒಂದು ಕಾರಣ ಇದೆ ಅದನ್ನೇ ತೋರಿಸ್ತೀವಿ ನೋಡಿ.
ಯೆಸ್ ಪತ್ನಿ ಬಿಟ್ಟು 2017 ರಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಇಮ್ದಾದ್ ಬಾಷ ಥಣಿಸಂದ್ರದ ಶೋಭ ಅಪಾರ್ಟ್ ಮೆಂಟ್ ನ ಫ್ಲಾಟ್ ನಲ್ಲಿ ವಾಸವಿದ್ದ. ಅದೇ ಅಪಾರ್ಟ್ ಮೆಂಟ್ ನಲ್ಲಿ ಪ್ರತ್ಯೇಕ ಫ್ಲಾಟ್ ಬಾಡಿಗೆಗೆ ಪಡೆದು ಉಜ್ಮಾ ಖಾನ್ ಳನ್ನ ಅದರಲ್ಲಿ ಇರಿಸಿದ್ದ. ಅಲ್ಲದೇ ಉಜ್ಮಾ ಫ್ಲಾಟ್ ಗೆ ಆಗಾಗ ಹೋಗಿ ಬರ್ತಿದ್ದ. ಅಷ್ಟೇ ಅಲ್ಲಾ ಗಂಡ ಹೆಂಡತಿ ಮಾದರಿಯೇ ಇದ್ದು ವಿದೇಶಕ್ಕೆ ಟ್ರಿಪ್ ಕೂಡ ಹೋಗಿ ಬಂದಿದ್ರು.ಆಮೇಲೆ ಅದೇನಾಯ್ತೋ ಏನೊ 10 ತಿಂಗಳ ಬಳಿಕ ಮತ್ತೆ ಮುಂಬೈ ಹೋಗೊ ನಿರ್ಧಾರ ಮಾಡಿದ್ದ ಇಮ್ದಾದ್. ಈ ವೇಳೆ ಎರಡೂ ಫ್ಲಾಟ್ ಖಾಲಿ ಮಾಡಿದ್ರಿಂದ ಉಜ್ಮಾ ಹೆಚ್ ಬಿ ಆರ್ ಲೇಔಟ್ ತಾಯಿ ಮನೆ ಸೇರಿದ್ಳು. ಆದರು ಇಬ್ಬರು ದೂರವಾಗಿರ್ಲಿಲ್ಲ. ಪರಸ್ಪರ ಫೋನ್ ಸಂಪರ್ಕದಲ್ಲಿದ್ರು
ಇದನ್ನೂ ಓದಿ:ನಿರ್ದೇಶಕನನ್ನು ಪ್ರೀತಿಸಿ ಓಡಿ ಹೋಗಿ ಮದುವೆಯಾದ ಹಿರಿಯ ನಟಿ! ಯಾರು ಗೊತ್ತೇ?
ಇದಾದ ಕೆಲ ತಿಂಗಳ ಬಳಿಕ ಇಮ್ದಾದ್ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದು. ಇಲ್ಲೇ ಟೆಕ್ಕಿಯಾಗಿ ಕೆಲಸ ಮುಂದುವರೆಸಿದ್ದ. ಕುಂದಲಹಳ್ಳಿ ಸ್ಪೈಸ್ ಗಾರ್ಡನ್ ನಲ್ಲಿ ಮನೆ ಮಾಡಿದ್ದ ಈತನ ಮನೆಗೆ ಉಜ್ಮಾ ಖಾನ್ ಹೋಗಿ ಬರ್ತಿದ್ಳು.ಈ ಮಧ್ಯೆ 2024 ರಲ್ಲಿ ಉಜ್ಮಾಗೆ ಬೇರೊಂದು ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಆಸ್ಟ್ರೀಯ ದೇಶದಲ್ಲಿರುವ ಪಾಕಿಸ್ತಾನ ಮೂಲದ ವ್ಯಕ್ತಿ ಅರ್ಶದ್ ಎಂಬಾತನ ಸಂಪರ್ಕ ಮಾಡಿದ್ದು ಮದುವೆ ವಿಚಾರವಾಗಿಯೂ ಮಾತುಕತೆ ನಡೀತಿತ್ತು. ಉಜ್ಮಾ ಖಾನ್ ಮೊಬೈಲ್ ಅನ್ನ ಮಾನಿಟರ್ ಗೆ ಕ್ಲೋನ್ ಮಾಡಿಕೊಂಡಿದ್ದ ಇಮ್ದಾದ್ ಬಾಷಗೆ ಎಲ್ಲಾ ವಿಚಾರಗಳು ಗೊತ್ತಾಗಿತ್ತು.
2024 ಡಿಸಂಬರ್ 31 ರಂದು ಉಜ್ಮಾಳನ್ನ ಮನೆಗೆ ಕರೆಸಿಕೊಳ್ಳಲು ಪ್ಲಾನ್ ಮಾಡಿದ್ದ ಇಮ್ದಾದ್ ಅಡುಗೆ ಮಾಡಿ ಅದರ ಫೋಟೋ ಕಳಿಸಿ ಮನೆಗೆ ಬಾ ಎಂದಿದ್ದ. THAT LOOKS SIZZLING ಎಂದು ಮೆಸೆಜ್ ಮಾಡಿದ್ದ ಉಜ್ಮಾ ರಾತ್ರಿ 9.30ಕ್ಕೆ ಇಮ್ದಾದ್ ಮನೆಗೆ ಹೋಗಿದ್ದಾಳೆ. ಮನೆಯಲ್ಲಿ 31 ರಂದು ರಾತ್ರಿ ಜೋರಾದ ಗಲಾಟೆ ಆಗಿದೆ. ಸೆಕ್ಯೂರಿಟಿ ಬಂದು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರ್ಲಿಲ್ಲ. ಈ ಮಧ್ಯೆ ಜನವರಿ 1 ರಂದು 11 ಗಂಟೆಗೆ ಇಮ್ದಾದ್ ಮೆನೆಯಿಂದ ಹೊರ ಬಂದಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಉಜ್ಮಾ ಖಾನ್ ಯಾವುದೇ ಚಲನ ವಲನ ಇರಲಿಲ್ಲ. ಅಲ್ಲಿಗೆ 31 ರಂದು ರಾತ್ರಿಯೇ ಕೊಲೆ ಮಾಡಿ ಇಮ್ದಾದ್ ಬಾಷ ನಾಟಕ ಮಾಡಿದ್ದಾನೆ ಅನ್ನೊ ಅನುಮಾನ ದಟ್ಟವಾಗಿದೆ.
ಇದನ್ನೂ ಓದಿ:7 ಕೆಜಿ ಚಿನ್ನ, 60 ಕೆಜಿ ಬೆಳ್ಳಿ, 50 ಎಲ್‌ಐಸಿ ಪಾಲಿಸಿಗಳು.. ನಟಿ ಕಂಗನಾ ರಣಾವತ್ ಆಸ್ತಿ ಎಷ್ಟು ಕ
ಉಜ್ಮಾ ಖಾನ್ ಮದುವೆ ವಿಚಾರ ತಿಳಿದು ಕೊಲೆ ಮಾಡಿರೋದಾಗಿ ಕುಟುಂಬಸ್ಥರು ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ಪಿಎಂ ರಿಪೋರ್ಟ್ ನಿಂದ ಸತ್ಯಾಸತ್ಯತೆ ಗೊತ್ತಾಗಲಿದೆ. ಸದ್ಯ ಆರೋಪಿ ಇಮ್ದಾದ್ ಬಂಧಿಸಿರೊ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಒಟ್ನಲ್ಲಿ ಪ್ರಿಯತಮೆ ಬೇರೊಂದು ಮದುವೆಯಾಗಿ ನನ್ನಿಂದ ದೂರವಾಗ್ತಾಳೆ ಎಂಬ ಕಾರಣಕ್ಕೆ ಇಮ್ದಾದ್ ಕೊಲೆ ಮಾಡಿದ್ನಾ ಅಥವಾ ಇದು ನಿಜವಾಗ್ಲೂ ಆತ್ಮಹತ್ಯೆಯ ಎಂಬ ಸತ್ಯ ತನಿಖೆಯಿಂದ ಬಯಲಾಗಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.