Karnataka Bandh: ವಿದ್ಯುತ್ ದರ ಹೆಚ್ಚಳಕ್ಕೆ‌ ಖಂಡನೆ.. ಹುಬ್ಬಳ್ಳಿಯಲ್ಲಿ ಬಂದ್ ಯಶಸ್ಸಿ..!

 Electricity Rate Hike: ಕೈಗಾರಿಕೋದ್ಯಮಕ್ಕೆ ಹೊರೆಯಾದ ವಿದ್ಯುತ್ ದರ ಏರಿಕೆ ಖಂಡಿಸಿ, ಕರ್ನಾಟಕದಾದ್ಯಂತ ನೀಡಲಾದ ಬಂದ್ ಕರೆಗೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಕೈಗಾರಿಕಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

Written by - Zee Kannada News Desk | Last Updated : Jun 22, 2023, 04:45 PM IST
  • ಕೈಗಾರಿಕೋದ್ಯಮಕ್ಕೆ ಹೊರೆಯಾದ ವಿದ್ಯುತ್ ದರ ಏರಿಕೆ ಖಂಡನೆ
  • ಕರ್ನಾಟಕದಾದ್ಯಂತ ನೀಡಲಾದ ಬಂದ್ ಕರೆ
  • ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಕೈಗಾರಿಕಾ ಸಂಘ ಸಂಸ್ಥೆಗಳು ಬೆಂಬಲ
 Karnataka Bandh: ವಿದ್ಯುತ್ ದರ ಹೆಚ್ಚಳಕ್ಕೆ‌ ಖಂಡನೆ.. ಹುಬ್ಬಳ್ಳಿಯಲ್ಲಿ ಬಂದ್ ಯಶಸ್ಸಿ..! title=

ಹುಬ್ಬಳ್ಳಿ: ಕೈಗಾರಿಕೋದ್ಯಮಕ್ಕೆ ಹೊರೆಯಾದ ವಿದ್ಯುತ್ ದರ ಏರಿಕೆ ಖಂಡಿಸಿ, ಕರ್ನಾಟಕದಾದ್ಯಂತ ನೀಡಲಾದ ಬಂದ್ ಕರೆಗೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಕೈಗಾರಿಕಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ವಾಣಿಜ್ಯೋದ್ಯಮಿಗಳು ಬಂದ್ ಗೆ ಬೆಂಬಲ ನೀಡಿದ್ದು, ಧಾರವಾಡ ಜಿಲ್ಲೆಯ ಬಹುತೇಕ ಉದ್ಯಮ‌ ಸ್ತಬ್ಧವಾಗಿವೆ. ಕೈಗಾರಿಕೆ, ಟ್ರಾನ್ಸ್ ಪೋರ್ಟ್, ಅಟೋಮೊಬೈಲ್, ಜವಳಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: Karnataka Bandh: ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್‌ ಗೆ ಕರೆ..!

ನೆಹರೂ ಮೈದಾನದ ಬಳಿ ಇರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಆರಂಭವಾದ ರ‌್ಯಾಲಿ, ನಗರದ ವಿವಿಧ ಕಡೆ ಸಂಚರಿಸಿ ‌ನಗರದ ತಹಶೀಲ್ದಾರರ ಕಚೇರಿವರೆಗೂ ನಡೆಯಿತು.‌ ಅಲ್ಲಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಅದೇ ರೀತಿ ಈ ಹಿಂದಿನ ವಿದ್ಯುತ್ ದರವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಬೇಕು.

ವಿದ್ಯುತ್ ದರದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು. ಒಂದು ವೇಳೆ ಪ್ರಸಕ್ತ ದರವನ್ನು ಜಾರಿಗೊಳಿಸಿದ್ರೆ ಕೈಗಾರಿಕೆಗಳನ್ನು ನಡೆಸುವದು ದುರಸ್ತರವಾಗಲಿದೆ ಎಂದು ಕೆ ಸಿಸಿಐ ಅಧ್ಯಕ್ಷ  ವಿನಯ ಜವಳಿ ಕಿಡಿಕಾರಿದರು.

ಇದನ್ನೂ ಓದಿ: Viral Video: ಬಸ್ ಚಾಲಕನ ಚಾಣಾಕ್ಷತನದಿಂದ ಪಾದಚಾರಿ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರು...!

ಬೆಲೆ ಏರಿಕೆ ಕುರಿತು ಮಾತನಾಡಿರುವ  ದ್ರಾಕ್ಷಾಯಿಣಿ ಮಹಿಳಾ ಉದ್ಯಮಿ, ಇನ್ನು ಏಕಾಏಕಿಯಾಗಿ ದರ ಏರಿಕೆ ಮಾಡಿದ್ದಾರೆ. ಇದರಿಂದ ಸಣ್ಣ, ಅತೀ, ಸಣ್ಣ, ಮಾಧ್ಯಮ ಹಾಗೂ ದೊಡ್ಡ ಕೈಗಾರಿಕೆ ನಡೆಸುವದು ಕಷ್ಟವಾಗಿದಂತೆ. ಅಷ್ಟೇ ಅಲ್ದೆ ಜವಳಿ ವ್ಯಾಪರಕ್ಕೆ ವಿದ್ಯುತ್ ದರ ಏರಿಕೆ ಶಾಕ್ ಕೊಟ್ಟಿದೆ. ಇದರಿಂದ ಜವಳಿ ವ್ಯಾಪಾರ ನಡೆಸುವದು ಕಷ್ಟವಾಗಿದೆ. ಈ ಹಿಂದೆ ಇದ್ದ ದರ ಸರಿಯಾಗಿತ್ತು. ಆದ್ರೆ ಪರಿಷ್ಕೃತ ದರದಲ್ಲಿ ಭಾರಿ ಏರಿಕೆ ಮಾಡಿದ್ದರಿಂದ ಜವಳಿ ವ್ಯಾಪಾರ ನಡೆಸುವದು ಕಷ್ಟವಾಗಿದಂತೆ ಎಂದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News