ಬೆಂಗಳೂರು: ಆಸಿಡ್ ದಾಳಿ ನಡೆಸಿ ಬಿಲ ಸೇರಿದ್ದ ಆರೋಪಿ ನಾಗೇಶ್ ಸದ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ತಾನು ಆಸಿಡ್ ಹಾಕಲು ಕಾರಣ ಏನು ಎಂದು ಬಾಯಿ ಬಿಟ್ಟಿರುವ ಕಿರಾತಕ, ಯುವತಿಯ ಮೇಲೆಯೇ ಆರೋಪ ಮಾಡುತ್ತಿದ್ದಾನೆ. ಈ ಬಗ್ಗೆ ಮಾತನಾಡಿರುವ ಆಸಿಡ್ ನಾಗಾ, ನನಗೆ ಯುವತಿ ಮೇಲೆ ಆಸಿಡ್ ಹಾಕಬೇಕು ಅನ್ನೋ ಯೋಚನೆಯೇ ಇರಲಿಲ್ಲ, ನಾನು ಅನೇಕ ವರ್ಷಗಳಿಂದ ಅವಳಿಗೆ ಮದುವೆ ಆಗೋಣ ಅಂತ ಕೇಳಿದ್ದೆ, ಆದ್ರೆ ಪ್ರತಿ ಬಾರಿ ನನಗೆ ಅವಮಾನ ಮಾಡಿದ್ದಳು. ಅದರಂತೆ ಆಸಿಡ್ ಹಾಕುವ ಒಂದು ದಿನದ ಹಿಂದೆ ಆಕೆಯನ್ನ ಹೆದರಿಸಲು ಮಾತ್ರ ನಾನು ಆಸಿಡ್ ಹಾಕ್ತೀನಿ ಅಂತ ಹೇಳಿದ್ದೆ, ಆದ್ರೆ ಆಕೆ ಆ ವಿಷಯವನ್ನ ನನ್ನ ಆಣ್ಣನಿಗೆ ಹೇಳಿದ್ಲು.ಈ ವಿಚಾರವಾಗಿ ನಮ್ಮ ಅಣ್ಣ ನನಗೆ ಸಾಕಷ್ಟು ಬೈದಿದ್ದ, ಇದರಿಂದ ನನಗೆ ಸಾಕಷ್ಟು ಮನಸ್ಸು ನೊಂದಿತ್ತು. ಇದರಿಂದ ಆಸಿಡ್ ಹಾಕಿಯೇ ಬಿಡೋಣ ಅಂತ ನಿರ್ಧಾರ ಮಾಡಿ ಹೀಗೆ ಮಾಡಿದೆ ಎಂದು ಹೇಳಿದ್ದಾನೆ.
ಆಸಿಡ್ ಹಾಕಿದ ಆಮೇಲೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆ ಎಂದು ನಾಗೇಶ್ ಹೇಳಿದ್ದಾನೆ. ಆಸಿಡ್ ದಾಳಿ ನಡೆಸಿ ಆಟೋದಲ್ಲಿ ಹೊಸಕೋಟೆಯವರೆಗೂ ಬಂದು ಅಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಾಗೇಶ್ ನಿರ್ಧಾರ ಮಾಡಿದ್ದನಂತೆ, ಆದ್ರೆ ಮನಸ್ಸು ಬದಲಾಯಿಸಿ ಇಲ್ಲಿಂದ ತಮಿಳುನಾಡಿಗೆ ತೆಲೆಮರಿಸಿಕೊಂಡು ಹೋಗೊಣ ಅಂತ ಅಲ್ಲಿಂದ ಖಾಸಗಿ ಬಸ್‌ನಲ್ಲಿ ಹೋಗಿದ್ದ.ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ಹೋಗಿ ಅಲ್ಲಿನ ರಮಣಾಶ್ರಮದಲ್ಲಿ ನಾಗೇಶ್ ಆಶ್ರಯ ಪಡೆದುಕೊಂಡಿದ್ದ.
ಇದನ್ನೂ ಓದಿ: NEET-PG ಪರೀಕ್ಷೆ ಸ್ಥಗಿತಗೊಳ್ಳುವುದಿಲ್ಲ, ಅರ್ಜಿ ವಜಾಗೊಳಿಸಿದ ಸುಪ್ರೀಂ ಹೇಳಿದ್ದೇನು?
ನಾನೊಬ್ಬ ಅನಾಥ, ಈ ಆಶ್ರಮದಲ್ಲಿ ಏನಾದರೂ ಕೆಲಸ ಮಾಡಲು ಅವಕಾಶ ನೀಡಿ ಎಂದು ದೇವರ ಸನ್ನಿದಿ ಸೇರಿದ್ದ ಈ ನೀಚ, ಸ್ಪಲ್ಪ ದಿನದಲ್ಲೇ ಅಲ್ಲಿನ ಜನರ ಮನಸ್ಸು ಗೆದ್ದಿದ್ದ. ತುಂಬಾ ಒಳ್ಳೆಯವನಂತೆ ನಾಟಕ ಮಾಡಿದ್ದ, ಪ್ರತಿದಿನ ಜ್ಞಾನ, ಹೋಮ, ಪೂಜೆ ಅಂತ ಕಾಲ ಕಳೆಯುತ್ತಿದ್ದ ಆದ್ರೆ, 3 ರಾಜ್ಯಗಳಲ್ಲಿ ಪೊಲೀಸರು ಕರಪತ್ರ ಹಂಚಿದ್ದರಿಂದ ನಾಗೇಶ್ ಸದ್ಯ ಪೊಲೀಸ್ ಬಲೆಗೆ ಬಿದ್ದಿದ್ದ, ಈತನನ್ನ ನೋಡಿದ ಕೆಲ ಸ್ಥಳೀಯರು ಪೊಲೀಸರಿಗೆ ಇತನ ಬಗ್ಗೆ ಮಾಹಿತಿ ನೀಡಿದ್ರು.ಈ ವೇಳೆ ಈತನ ಬಂಧನಕ್ಕೆ ತೆರಳಿದ ಪೊಲೀಸರಿಗೆ ಅಲ್ಲಿನ ಆಶ್ರಮದವರು ತಡೆದು ನೀವು ಈತನ ಬಗ್ಗೆ ತಪ್ಪು ತಿಳಿದುಕೊಂಡಿದ್ದೀರಿ, ಈ ಬಗ್ಗೆ ಇನ್ನೊಮ್ಮೆ ಪರೀಶಿಲನೆ ಮಾಡಿ ಎಂದಿದ್ರು. ಅಷ್ಟರ ಮಟ್ಟಿಗೆ ಅಲ್ಲಿನ ಜನರಲ್ಲಿ ತಾನು ಒಳ್ಳೆಯವನಂತೆ ನಾಗೇಶ್ ನಾಟಕ ಮಾಡಿದ್ದ ಎನ್ನಲಾಗಿದೆ.
ನಂತರ ಪೊಲೀಸರು ಆರೋಪಿಯನ್ನ ಜೀಪ್ ಮೂಲಕ ಕರೆತರುವ ವೇಳೆ ನಾಗೇಶ್ ಮತ್ತೆ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾನೆ.ಈ ವೇಳೆ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್ ಪೆಕ್ಟರ್ ಪ್ರಶಾಂತ್ ಫೈರಿಂಗ್ ಮಾಡಿ ನಾಗೇಶ್‌ನ ಕಾಲು ಸೀಳುವಂತೆ ಮಾಡಿದ್ದಾರೆ. ಸದ್ಯ ನಾಗೇಶ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿರುವ ಯುವತಿ ಕೂಡ ಚೇತರಿಸಿಕೊಳ್ಳುತ್ತಿದ್ದಾಳೆ.ಸದ್ಯ ಆರೋಪಿ ಬಂಧನದ ವಿಷಯ ತಿಳಿದು ಆ ಕ್ರೂರಿ ನಾಗೇಶ್‌ಗೆ ನನ್ನ ಮುಂದೆಯೇ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾಳೆ ಎನ್ನಲಾಗಿದೆ. ಇತ್ತ ಯುವತಿ ತಂದೆ ತಾಯಿ ಕೂಡ ಆರೋಪಿಯನ್ನ ಜನರ ನಡುವೆ ಬಿಡಿ ಅವರೇ ಅವನಿಗೆ ಶಿಕ್ಷೆ ಕೊಡಲಿ ಎನ್ನುತ್ತಿದ್ದಾರೆ.
ಇದನ್ನೂ ಓದಿ: ವಿವಾಹ ದಿನ ವರ ಮಾಡಿದ ಈ ಒಂದು ತಪ್ಪಿನಿಂದ ಮುರಿದು ಬಿತ್ತು ಮದುವೆ ..!
ಪ್ರಕರಣದ ಬಗ್ಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಪಿ ನಾಗೇಶ್ ಬಂಧಿಸಲು ತಮಿಳುನಾಡು ಪೊಲೀಸರು ನಮ್ಮ ಪೊಲೀಸರಿಗೆ ಸಹಕಾರ ನೀಡಿದ್ದಾರೆ.ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ.ನೊಂದ ಯುವತಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಾಗುತ್ತೆ ಎಂದು ಭರವಸೆ ನೀಡಿದ್ದಾರೆ.
ಆರೋಪಿ ಪತ್ತೆಗೆ ವಿಳಂಭಕ್ಕೆ ಕಾರಣ ತಿಳಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಆರೋಪಿ ಮೊಬೈಲ್, ಲ್ಯಾಪ್ಟಾಪ್ ಏನೂ ಬಳಸ್ತಿರಲಿಲ್ಲ. ಆತನನ್ನ ಹುಡುಕಾಡೋವಾಗ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿರಲಿಲ್ಲ. ಆರೋಪಿಯ ಹುಡುಕಾಟಕ್ಕಾಗಿ ಕರಪತ್ರ ಹಂಚಲಾಗಿತ್ತು. ಇದನ್ನ ನೋಡಿ ತಮಿಳುನಾಡಿದ ಕಲವು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ರು ಹೀಗಾಗಿ ಆರೋಪಿಯು ಬಲೆಗೆ ಬಿದ್ದಿದ್ದಾನೆ ಎಂದು ಹೇಳಿದ್ರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.