ಗುಡ್ಡ ಕುಸಿತ: ಆಸರೆಯಾಗಿದ್ದ ಹೊಟೇಲ್ ಜೊತೆಯಲ್ಲೇ ಜೀವನದ ಅಂತ್ಯ ಕಂಡ ಕುಟುಂಬ

ಈ ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ 66 (National Highway 66)ರಲ್ಲಿ  ಚತುಷ್ಪಥ ಕಾಮಗಾರಿ ಪಡೆದ ಐ ಆರ್ ಬಿ ಕಂಪನಿ ನೇರ ಕಾರಣ ಎಂದು ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕಂಪನಿಯವರು ಗುಡ್ಡದ ಮಣ್ಣು ತೆಗೆಯುವಾಗ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದರಿಂದ ದೊಡ್ಡ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. 

Written by - Yashaswini V | Last Updated : Jul 16, 2024, 05:59 PM IST
  • ಆಸರೆ ಕೊಟ್ಟ ಹೋಟೆಲ್ ಜೊತೆಯಲ್ಲಿಯೇ ಜೀವನದ ಅಂತ್ಯ
  • ಹೈವೈ ರಸ್ತೆಯಲ್ಲಿ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ
  • ಇಡೀ ಕುಟುಂಬಕ್ಕೆ ಹೋಟೆಲ್ ದುಡಿಮೆಯೇ ಆಧಾರವಾಗಿತ್ತು
ಗುಡ್ಡ ಕುಸಿತ: ಆಸರೆಯಾಗಿದ್ದ ಹೊಟೇಲ್ ಜೊತೆಯಲ್ಲೇ ಜೀವನದ ಅಂತ್ಯ ಕಂಡ ಕುಟುಂಬ  title=

Natural Disaster: ದಿನದ ತುತ್ತು ಅನ್ನಕ್ಕಾಗಿ ಚಿಕ್ಕದೊಂದು ಹೋಟೆಲ್ ಮಾಡಿಕೊಂಡು ಇಡೀ ಕುಟುಂಬ ಸುಂದರ ಜೀವನ ನಡೆಸುತ್ತಿದ್ರು.. ಆದ್ರೇ ಇಂದು ಸಂಭವಿಸಿದ ನೈಸರ್ಗಿಕ ವಿಪತ್ತಿಗೆ ಜೀವನಾಧಾರವಾಗಿದ್ದ ಹೊಟೇಲ್ ಜೊತೆಯಲ್ಲಿಯೇ ಸುಂದರ ಕುಟುಂಬವೊಂದು ನಾಶವಾಗಿರುವ ಹೃದಯ ವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. 

ಇಂದು ಮುಂಜಾನೆ 8-30 ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ಕ್ಕೆ (National Highway 66) ಹೊಂದಿಕೊಂಡಿರುವ ಗುಡ್ಡ ಕುಸಿದ ಪರಿಣಾಮವಾಗಿ ಒಂದೇ ಕುಟುಂಬದ ಐವರು ಜನರು ಮಣ್ಣು ಪಾಲಾಗಿದ್ದಾರೆ. ಮೃತ ದುದೈವಿಗಳನ್ನು ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ (11),  ಅವಾಂತಿಕಾ (0)6, ಜಗನ್ನಾಥ (55) ಎಂದು ಗುರುತಿಸಲಾಗಿದೆ. ಈ ಐವರ ಪೈಕಿ ಶಾಂತಿ ನಾಯ್ಕ, ಲಕ್ಷ್ಮಣ ನಾಯ್ಕ ಶವ ಗಂಗಾವಳಿ ನದಿಯಲ್ಲಿ ದೊರಕಿದೆ. ಇನ್ನುಳಿದ ಮೂವರ ಶವಕ್ಕಾಗಿ ರಕ್ಷಣಾ ತಂಡಗಳು ತೀವ್ರ ಹುಡುಕಾಟ ಮುಂದುವರೆದಿದೆ. ಆದಾಗ್ಯೂ, ಈ ಗುಡ್ಡ ಕುಸಿತದಲ್ಲಿ ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇನ್ನೂ ದೊರಕಿಲ್ಲ. 

ಲಭ್ಯವಿರುವ ಮಾಹಿತಿಯ ಪ್ರಕಾರ, ಮೃತರ ಕುಟುಂಬದವರು ಹೊಟೇಲ್ ನಡೆಸುತ್ತಿದ್ದರು. ಇವರ ಹೋಟೆಲ್ ಗೆ ಮುಖ್ಯವಾಗಿ ಲಾರಿ ಡ್ರೈವರ್ ಗಳು ಗಿರಾಕಿಗಳಾಗಿದ್ದರು. ಈ ದುರಂತ ನಡೆದ ಸಮಯದಲ್ಲಿ ಎರಡು ಲಾರಿಗಳು ಮಣ್ಣಿನಡಿ ಸಿಲುಕಿ ನದಿ ಪಾಲಾಗಿದೆ. ಹೀಗಾಗಿ ಲಾರಿಯಲ್ಲಿದ್ದವರು ಹೋಟೆಲ್ ನಲ್ಲಿ ತಿಂಡಿ ತಿನ್ನಲು ಆಗಮಿಸಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಲ್ಲದೇ ಈ ಪ್ರದೇಶದಲ್ಲಿ ಲಾರಿಯ ಡ್ರೈವರ್ ಮತ್ತು ಕ್ಲಿನರ್ ಗಳು ತಮ್ಮ ವಾಹನವನ್ನು ಪಾರ್ಕಿಂಗ್ ಮಾಡಿ ಗುಡ್ಡದ ಝರಿ ನೀರಿನ ಸ್ನಾನ ಮುಗಿಸಿ ಹೋಗುತ್ತಿದ್ದರು. ಈ ಸಮಯದಲ್ಲಿ ನಾಲ್ವರು ಸ್ನಾನ ಮಾಡುತ್ತಿರುವುದನ್ನು ನೋಡಿದ್ದಾಗಿ ರಕ್ಷಣಾ ತಂಡಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಇವರಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.

ಇನ್ನೂ ಈ ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ 66 (National Highway 66)ರಲ್ಲಿ  ಚತುಷ್ಪಥ ಕಾಮಗಾರಿ ಪಡೆದ ಐ ಆರ್ ಬಿ ಕಂಪನಿ ನೇರ ಕಾರಣ ಎಂದು ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕಂಪನಿಯವರು ಗುಡ್ಡದ ಮಣ್ಣು ತೆಗೆಯುವಾಗ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದರಿಂದ ದೊಡ್ಡ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ- ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸದೆ ಕೇಂದ್ರದಿಂದ ಮಲತಾಯಿ ಧೋರಣೆ: ಸಚಿವ ಶರಣಪ್ರಕಾಶ್ ಪಾಟೀಲ್

ಗುಡ್ಡ ಕುಸಿದ ರಭಸಕ್ಕೆ ಹೆದ್ದಾರಿಯ ಪಕ್ಜದಲ್ಲಿ ಲಾರಿಗಳು, ಹೊಟೇಲ್ ಪಕ್ಕದಲ್ಲಿ ಹರಿಯುತ್ತಿದ್ದ ಗಂಗವಳ್ಳಿ ನದಿಯವರೆಗೂ ತಳ್ಳಿಕೊಂಡು ಹೋಗಿದೆ. ಗುಡ್ಡದ ತುದಿಯ ಕಲ್ಲು ಬಂಡೆ ಸಹಿತ ಮಣ್ಣಿನ ರಾಶಿ ಗಂಗವಳ್ಳಿ ನದಿಯನ್ನು ಆವರಿಸಿದ್ದರಿಂದ ನದಿಯಲ್ಲಿ ನೀರು ಹರಿಯಲು ತೊಂದರೆಯಾಗಿ ನದಿಯ ಇಕ್ಕೆಲದಲ್ಲಿ  ಅನಾಹುತ ಉಂಟಾಗಿದೆ. 

ಸದ್ಯ ರಕ್ಷಣಾ ತಂಡಗಳು ಬಿಡುವಿಲ್ಲದೇ ಕಾರ್ಯಾಚರಣೆ ನಡೆಸುತ್ತಿದೆ. ಪೋಲಿಸ್, ಅಗ್ನಿಶಾಮಕ, ಎನ್ ಡಿ ಆರ್ ಎಫ್ ತಂಡಗಳು ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಣ್ಣು ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿರುವುದರಿಂದ ಗೋವಾ ಮತ್ತು ಮಂಗಳೂರು ಹಾಗೂ ಹುಬ್ಬಳ್ಳಿ ಮಂಗಳೂರು ನಡುವಿನ ಸಂಚಾರ ಸ್ಥಗಿತಗೊಂಡಿದೆ. ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಇಂಥದೊಂದು ದುರಂತಕ್ಕೆ ಕಾರಣವಾಗಿದೆ.

ಇದನ್ನೂ ಓದಿ- ಬೆಂಗಳೂರು ನಿರ್ವಹಣೆಗೆ ಇಲಾಖೆಗಳ ನಡುವೆ ಸಮನ್ವಯತೆ ಕುರಿತು ಜುಲೈ 27 ಕ್ಕೆ ಜನಪ್ರತಿನಿಧಿಗಳ ಸಭೆ: ಡಿಸಿಎಂ ಡಿ.ಕೆ.ಶಿವಕುಮಾರ್  

ಒಟ್ಟಿನಲ್ಲಿ ಇಂಥದೊಂದು ದುರಂತ ಒಂದಲ್ಲ ಒಂದು ಸಂಭವಿಸುತ್ತದೆ ಎಂದು ಸ್ಥಳೀಯರು ಹೆದ್ದಾರಿ ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿಗೆ ಎಚ್ಚರಿಸುತ್ತಾ ಬಂದರೂ ದುರಂತ ನಡೆಯುವುದನ್ನು ತಡೆಯುವ ಕೆಲಸ ಮಾಡದಿರುವುದರಿಂದ ದೊಡ್ಡ ದುರಂತ ನಡೆದು ಹೋಗಿದೆ. ಈ ಘಟನೆಗೆ ಕಾರಣವಾದ ಕಂಪನಿಯ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕ್ರಮಕ್ಕೆ ಮುಂದಾಗಬೇಕಿದೆ. ಭವಿಷ್ಯದಲ್ಲಿ ಇಂಥದೊಂದು ಘಟನೆ ಮತ್ತೆ ಮರುಕಳಿಸದಂತೆ ಸರಕಾರ ಎಚ್ಚರಿಕೆ ವಹಿಸಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News