ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಬಲಿಗರು ಭರ್ಜರಿ ಜಯಭೇರಿ ಬಾರಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟೂ 44 ಗ್ರಾಮ ಪಂಚಾಯಿತಿಗಳಿದ್ದು, ಈವರೆಗೆ ಪ್ರಕಟವಾಗಿರುವ ಫಲಿತಾಂಶಗಳ ಪೈಕಿ ಶೇ.75ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ತಮ್ಮ ಬೆಂಬಲಿಗರು ಜಯಗಳಿಸಿದ್ದಾರೆ ಎಂದು ಹೆಬ್ಬಾಳಕರ್(Lakshmi Hebbalkar) ತಿಳಿಸಿದ್ದಾರೆ.
S L Dharme Gowda: 'ರಾಜಕೀಯ ವ್ಯವಸ್ಥೆಯಿಂದ ಧರ್ಮೇಗೌಡರ ಆತ್ಯಹತ್ಯೆಯಲ್ಲ ಬದಲಿಗೆ ಕೊಲೆ'
ಬಡಾಲ ಅಂಕಲಗಿಯ 13 ಸದಸ್ಯರ ಪೈಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಬಲಿಗರು 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ರಾಜೇಂದ್ರ ಅಂಕಲಗಿ ಬಣ ಕೇವಲ 2 ಸ್ಥಾನಗಳೊಂದಿಗೆ ಮುಖಭಂಗ ಅನುಭವಿಸಿದೆ.
New Coronavirus Strain: ರಾಜ್ಯದ ಜನತೆಗೆ 'ಖಡಕ್ ಎಚ್ಚರಿಕೆ' ನೀಡಿದ ಸಿಎಂ ಬಿಎಸ್ ವೈ..!
ಕುದ್ರೆಮನಿಯಲ್ಲಿ 10 ಸ್ಥಾನಗಳು ಲಕ್ಷ್ಮಿ ಹೆಬ್ಬಾಳಕರ್ ಬಣಕ್ಕೆ ಬಂದರೆ, 3 ಎಂಇಎಸ್ ಮತ್ತು 1 ಬಿಜೆಪಿ ಬೆಂಬಲಿಗರಿಗೆ ಬಂದಿದೆ. ಹಿರೇಬಾಗೇವಾಡಿಯ 32 ಸ್ಥಾನಗಳ ಪೈಕಿ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಈಗಾಗಲೆ ಹೆಬ್ಬಾಳಕರ್ ಬೆಂಬಲಿಗರು ಗೆದ್ದಿದ್ದಾರೆ.
ರಾಜ್ಯದಲ್ಲಿ ಮತ್ತೆ Lockdown ಆಗುತ್ತಾ? ನಾಳೆ ಸಿಎಂ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿ
ಕಂಗ್ರಾಳಿ ಬಿಕೆ ಬಹು ವರ್ಷಗಳ ನಂತರ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಹಿಂಡಲಗಾ, ತುರಮರಿ, ಕಮಕಾರಟ್ಟಿಗಳಲ್ಲಿ ಸಹ ಲಕ್ಷ್ಮಿ ಹೆಬ್ಬಾಳಕರ್ ಬಣ ಭರ್ಜರಿ ಗೆಲುವು ಸಾಧಿಸಿದೆ.
Corona Strain: ಬೆಂಗಳೂರಿನ ಬಳಿಕ ಶಿವಮೊಗ್ಗಕ್ಕೂ ಶಾಕ್
ಮತದಾರರು ಅಭಿವೃದ್ಧಿಗೆ ಮತ ನೀಡಿರುವುದಕ್ಕೆ, ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸದಾ ಋಣಿಯಾಗಿರುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಇಂದು Grama Panchayat ಮತ ಎಣಿಕೆ: ರಾತ್ರಿ ವೇಳೆಗೆ ಫಲಿತಾಂಶ ಪ್ರಕಟ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.