"ಗ್ರಾಮೀಣ ಪ್ರದೇಶದ ಜನರಿಗೂ ಶಿಬಿರಗಳ ಮೂಲಕ ಉಚಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರದಿಂದ ಕಾರ್ಯಕ್ರಮ" - ದಿನೇಶ್ ಗುಂಡೂರಾವ್

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದಲೇ ಉಚಿತ ಆರೋಗ್ಯ ಶಿಬಿರಗಳನ್ನ ರಾಜ್ಯದಾದ್ಯಂತ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನಲ್ಲಿ ಇಂದು ಗಾಂಧಿನಗರ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು. 

Written by - Zee Kannada News Desk | Last Updated : Aug 20, 2023, 08:26 PM IST
  • ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದರೆ, ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ನೀಡಲಾಗುತ್ತೆ
  • ಗೋಲ್ಡನ್ ಟೈಮ್ ನಲ್ಲಿ ಟ್ರೀಟ್ ಮೆಂಟ್ ಬಳಿಕ ಆಸ್ಪತ್ರೆಗೆ ಶೀಫ್ಟ್ ಮಾಡಬಹುದು
  • ರೋಗಿಯನ್ನ ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ
"ಗ್ರಾಮೀಣ ಪ್ರದೇಶದ ಜನರಿಗೂ ಶಿಬಿರಗಳ ಮೂಲಕ ಉಚಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರದಿಂದ ಕಾರ್ಯಕ್ರಮ" - ದಿನೇಶ್ ಗುಂಡೂರಾವ್   title=

ಬೆಂಗಳೂರು: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದಲೇ ಉಚಿತ ಆರೋಗ್ಯ ಶಿಬಿರಗಳನ್ನ ರಾಜ್ಯದಾದ್ಯಂತ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನಲ್ಲಿ ಇಂದು ಗಾಂಧಿನಗರ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು. 

ನಗರದ ಗಾಂಧಿನಗರ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ಶಿಬಿರಲ್ಲಿ ಏರ್ಪಡಿಸಿದ್ದ ಆರೋಗ್ಯ ಸೇವೆಗಳನ್ನ ವೀಕ್ಷಿಸಿದ ಸಚಿವರು, ಇಲಾಖೆ ಹಾಗೂ ವೈದ್ಯರು, ಸಿಬ್ಬಂದಿಯವರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿಯ ಶಿಬಿರಗಳು, ಆರೋಗ್ಯ  ಸೇವೆಗಳು ರಾಜ್ಯದ ಹಳ್ಳಿಗಾಡಿನ ಜನರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯದ ಜಿಲ್ಲೆಗಳು ಹಾಗೂ ತಾಲೂಕು ಮಟ್ಟಕ್ಕೂ ಉಚಿತ ಆರೋಗ್ಯ ಶಿಬಿರಗಳನ್ನ ಕೊಂಡೊಯ್ಯುವಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.‌ 

ಮುಂಜಾಗೃತವಾಗಿ ಕಾಯಿಲೆಗಳನ್ನ ತಡೆಗಟ್ಟುವುದು ಬಹುಮುಖ್ಯ. ಜನರ ಜೀವನ ಶೈಲಿ ಬದಲಾದಂತೆ, ಇವತ್ತಿನ ದಿನಮಾನಗಳಲ್ಲಿ ಬಿ.ಪಿ, ಶೂಗರ್, ಕ್ಯಾನ್ಸರ್, ಕಿಡ್ನಿ ಸಮಸ್ಯೆಯ ಕಾಯಿಲೆಗಳು ಜ‌ನರನ್ನ ಕಾಡುತ್ತಿವೆ. ಈ ಕಾಯಿಲೆಗಳನ್ನ ಮೊದಲೇ ಪತ್ತೆ ಹಚ್ಚಿದರೇ, ಚಿಕಿತ್ಸೆ ಮೂಲಕ ಆರಂಭದಲ್ಲೇ ಗುಣಪಡಿಸಬಹುದು. ಹೀಗಾಗಿ ಉಚಿತ ಆರೋಗ್ಯ ಶಿಬಿರಗಳು ಹೆಚ್ವು ಅವಶ್ಯಕವಾಗಿದ್ದು, ಜನಸಾಮಾನ್ಯರಿಗೆ ಹೆಚ್ವು ಸದುಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. 

ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಮಂಡ್ಯದಲ್ಲಿ ರೈತರ ಮೌನ ಪ್ರತಿಭಟನೆ

ಹೃದಯಘಾತ ತಡೆಯಲು ಪುನೀತ್ ಹೆಸರಲ್ಲಿ ಅಪ್ಪು ಯೋಜನೆ 

ಹಠಾತ್ ಹೃದಯಘಾತ ತಡೆಯುವ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ ಹೆಸರಲ್ಲಿ ಹೊಸ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು. ಹೃದಯಘಾತಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಯೋಜನೆಗೆ ಮುಂದಾಗಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಅಪ್ಪು ಯೋಜನೆ ಜಾರಿಗೆ ತರುತ್ತಿದ್ದೇವೆ. 

ಮೊದಲ ಹಂತದಲ್ಲಿ ಜಯದೇವ ಆಸ್ಪತ್ರೆಯನ್ನ ಈ ಯೋಜನೆಗೆ ಹಬ್ ಮಾಡಲಾಗಿದೆ. ಕೇವಲ ಆಸ್ಪತ್ರೆ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿಯೂ Automated External Defibrillators (AED )ಅಳವಡಿಕೆ ಮಾಡಲಾಗುತ್ತೆ.‌ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್, ಏರಪೋರ್ಟ್ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ AED ಅಳವಡಿಕೆ ಮಾಡುತ್ತೇವೆ. 

ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದರೆ, ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ನೀಡಲಾಗುತ್ತೆ. ಗೋಲ್ಡನ್ ಟೈಮ್ ನಲ್ಲಿ ಟ್ರೀಟ್ ಮೆಂಟ್ ಬಳಿಕ ಆಸ್ಪತ್ರೆಗೆ ಶೀಫ್ಟ್ ಮಾಡಬಹುದು. ರೋಗಿಯನ್ನ ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. 

ಹೃದಯಘಾತದ ಸಮಯದಲ್ಲಿ ಆಸ್ಪತ್ರೆಗೆ ಶಿಫ್ಟ್ ವೇಳೆಯಲ್ಲಿಯೇ ಡೆತ್ ಆಗ್ತೀವೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಹೃದಯಾಘಾತ ತಪ್ಪಿಸಲು ಮೆಡಿಸಿನ್ ಗಳನ್ನ ಪೂರೈಸಲಾಗುವುದು. ಯಾರಿಗೆ ಹೃದಘಾತದ ಸೂಚನೆ ಬಂದರೆ ತಕ್ಷಣ ಸಂಬಂಧಿಸಿದ ಔಷಧಿ ನೀಡಿ, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗೆ ರವಾನಿಸಲಾಗುವುದು. ಎರಡು ವಾರಗಳಲ್ಲಿ ಈ ಬಗ್ಗೆ ಟೆಂಡರ್ ಕರೆದು ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ಗಾಂಧಿನಗರ ಆರೋಗ್ಯ ಮೇಳ ಮುನ್ನುಡಿಯಾಗಲಿದೆ - ಆರೋಗ್ಯ ಆಯುಕ್ತ ರಂದೀಪ್ 

ಗಾಂಧಿನಗರ ಆರೋಗ್ಯ ಶಿಬಿರ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಳ್ಳುವ ಉಚಿತ ಆರೋಗ್ಯ ಶಿಬಿರಗಳಿಗೆ ಒಂದು ಮುನ್ನಿಡಿಯಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದರು. ಬೃಹತ್ ಗಾಂಧಿನಗರ ಆರೋಗ್ಯ ಶಿಬಿರಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನ ಸುವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಬಿ.ಪಿ, ಶೂಗರ್, ಕಣ್ಣಿನ ತಪಾಸಣೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೂ ಇ.ಸಿ.ಜಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಆರೋಗ್ಯ ಇಲಾಖೆಯ ಎಲ್ಲ ಚಿಕಿತ್ಸೆಗಳು ಶಿಬಿರದ ಮುಖಾಂತರ ಜನರ ಬಳಿಗೆ ಕೊಂಡುಯ್ಯುವ ನಿಟ್ಟಿನಲ್ಲಿ ಗಾಂಧಿನಗರ ಆರೋಗ್ಯ ಶಿಬಿರ ಮುನ್ನುಡಿ ಬರೆದಿದೆ ಎಂದು ಆಯುಕ್ತ ರಂದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಇದನ್ನೂ ಓದಿ: ಕಾವೇರಿ ಸೇರಿದಂತೆ ಜಲ ವಿವಾದ, ಅಣೆಕಟ್ಟೆಗಳ ನೀರು ಪರಿಸ್ಥಿತಿ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ..!

ಆರೋಗ್ಯ ಶಿಬಿರಕ್ಕೆ ಗಾಂಧಿ ನಗರ ಜನರ ದಂಡು :
ಸಾವಿರಾರು  ಸಂಖ್ಯೆಯಲ್ಲಿ ಜನರು ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ತಪಾಸಣೆ, ಉಚಿತ ಚಿಕಿತ್ಸೆಯ ಲಾಭ ಪಡೆದರು. ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ಹಿಡಿದು, ಸ್ತ್ರೀ ರೋಗ ಸಮಸ್ಯೆ, ಮಕ್ಕಳ ಆರೋಗ್ಯ, ಕಿಲು ಮತ್ತು ಮೂಳೆ ಚಿಕಿತ್ಸೆ, ನರ ಸಮಸ್ಯೆ, ಹೃದಯ ಚಿಕಿತ್ಸೆ, ಚರ್ಮದ ಸಮಸ್ಯೆ, ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್, ಕಣ್ಣು, ಹಲ್ಲು, ಕಿಡ್ನಿ ಚಿಕಿತ್ಸೆಗಳನ್ನ ಉಚಿತವಾಗಿ ನೀಡಲಾಯಿತು.‌ ಅಲ್ಲದೇ ಆಯುಷ್ ಇಲಾಖೆಯ ಆರೋಗ್ಯ‌ ಸೇವೆಗಳು ಸೇರಿದಂತೆ ಮನೋ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಜನರ ಬಳಿಗೆ ತರಲಾಗಿತ್ತು. ಅತ್ಯಾದುನಿಕ ಆರೋಗ್ಯ ಸೇವೆಗಳ ಕುರಿತಂತೆ ಮಾಹಿತಿ, ಮೊಬೈಲ್ ಹೆಲ್ತ್ ಕೇರ್, ಬಸ್ ಗಳಲ್ಲಿ ಆರೋಗ್ಯ ಸೇವೆಗಳು ಲಭ್ಯವಿದ್ದವು. 16 ಕೌಂಟರ್, 10 ಫಾರ್ಮಸಿ ಸೆಂಟರ್ ಗಳಲ್ಲಿ 100 ಕ್ಕೂ ಹೆಚ್ವು ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರು.‌ 3 ಕೋಟಿ ಮೌಲ್ಯದ ಔಷಧಿಗಳನ್ನ ಜನರಿಗಾಗಿ ಉಚಿತ ಆರೋಗ್ಯ ಶಿಬಿರದಲ್ಲಿ ಕಲ್ಪಿಸಲಾಗಿತ್ತು. ವೈದ್ಯರು ಸೇರಿದಂತೆ ಸರಿಸುಮಾರು 700 ಆರೋಗ್ಯ ಸಿಬ್ಬಂದಿಗಳು ಶಿಬಿರದಲ್ಲಿ ಕಾರ್ಯನಿರ್ವಹಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News